ಮಧ್ಯಪ್ರಾಚ್ಯಗೆ… ಭೇಟಿ ನೀಡುವ ಪ್ರತಿಯೊಬ್ಬನೂ ನೋಡಲೇಬೇಕಾದ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಬಾಟಿಯನ್ನರೆಂಬ (Nabataean) ನಾಗರೀಕತೆಯಿಂದ ನಿರ್ಮಿಸಲ್ಪಟ್ಟ, ಸುಣ್ಣದ ಕಲ್ಲುಗಳಲ್ಲಿ ಸೃಷ್ಟಿಯಾದ ಅದ್ಬುತ ಲೋಕಕ್ಕೆ. ಅದರೆಸರು ಪೆಟ್ರಾ (PETRA).
ಪೆಟ್ರಾ….. ಕ್ರಿಸ್ತ ಪೂರ್ವ ಆರನೇ ಶತಮಾನದಿಂದ ಹೆಚ್ಚೂ ಕಮ್ಮಿ ಕ್ರಿಸ್ತಶಕ ಒಂದನೇ ಶತಮಾನದವರೆಗೂ ಅಲೆಮಾರಿ ಅರಬ್ ಜನಾಂಗವೊಂದು ವಾಸಿಸುತ್ತಿತ್ತು. ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದ ಈ ಜನಾಂಗ ಕ್ರಮೇಣ ಕ್ರಿ.ಪೂ. ಒಂದನೇ ಶತಮಾನದ ಹೊತ್ತಿಗೆ ನೆಲೆನಿಂತು ರಾಜಧಾನಿಯನ್ನಾಗಿ ಮಾಡಿಕೊಂಡ ನಗರವೇ ಪೆಟ್ರಾ. ಹಾಗೇ ಮೂಲ ಪೆಟ್ರಾವನ್ನು ನಿರ್ಮಿಸಿದ ಜನರೇ ನಬಾಟಿಯನ್ನರು. Geographically ಪೆಟ್ರಾ ಅಂದಿನ ಸಮಕಾಲೀನ ಜಗತ್ತಿನ ಮೂರು ಖಂಡಗಳಾದ ಆಫ್ರಿಕಾ, ಯುರೋಪು, ಏಷ್ಯಾದ ಸಾಮ್ರಾಜ್ಯಗಳಾದ ಗ್ರೀಕ್, ರೋಮನ್, ಈಜಿಪ್ಟ್ ಹಾಗೂ ಮೆಸಪಟೋಮಿಯಾ (Today’s Iraq)ದೊಂದಿಗೆ ವಾಣಿಜ್ಯ ವಹಿವಾಟುಗಳ ಸಂಪರ್ಕಕೊಂಡಿಯಾಗಿತ್ತು. ಜಗತ್ತಿನ ಅತೀ ದೊಡ್ಡ ವಾಣಿಜ್ಯ ವಿನಿಮಯ ನಡೆಯುತ್ತಿದ್ದ ದಾರಿಯದು. ರೋಮನ್ ದೊರೆ ಟ್ರೋಜನ್ ಈ ದಾರಿಯನ್ನು ದುರಸ್ತಿ ಮಾಡಿ KINGS HIGHWAY ಎಂದು ಕರೆದಿದ್ದ. ಪೆಟ್ರಾ ನಬಾಟಿಯನ್ನರ ನಂತರ ಕಾಲಾಂತರದಲ್ಲಿ ಅಸ್ಸೀರಿಯನ್ನರು, ಬ್ಯಾಬಿಲೋನಿಯನ್ನರು, ರೋಮನ್ನರು, **ಝಂಟೀನಿಯನ್ನರು, ಉಮ್ಮಾಯದ್ ಸಾಮ್ರಾಜ್ಯ, ಒಟ್ಟೋಮನ್ ಟರ್ಕರು, ಬ್ರಿಟೀಷರು ನಂತರ ಇದೀಗ ಸ್ವತಂತ್ರ ಜೋರ್ಡಾನಿನ ಆಳ್ವಿಕೆಗೊಳಪಟ್ಟಿದೆ. ಪ್ರತಿ ಕೈ ಬದಲಾದಾಗಲೂ ಪೆಟ್ರಾ ಅದರದೇ ಆದ ಧರ್ಮ, ವಾಸ್ತುಶಿಲ್ಪ, ಆಚಾರ, ವಿಚಾರದ ಬದಲಾವಣೆಗೆ ಒಳಪಟ್ಟಿದೆ. ಇನ್ನು ಪೆಟ್ರಾದ ಸೌಂದರ್ಯ ಪದಗಳಲ್ಲಿ ಬಣ್ಣಿಸಲಸಾಧ್ಯ. ಹತ್ತು ಹಲವು ಬಣ್ಣದ ಕಲ್ಲುಗಳನ್ನು ಐದು ಕಿಲೋ ಮೀಟರುಗಳಷ್ಟು ಉದ್ದಕ್ಕೂ ಹತ್ತಿರತ್ತಿರ ನೂರು ಮೀಟರಿನಷ್ಟು ಎತ್ತರಕ್ಕೂ ವಿವಿಧ ರೀತಿಯಲಿ ಕೊರಕಲಿನಂತೆ (Gorge) ಕೊರೆದು ಅಲ್ಲಲ್ಲಿ ರೋಮನ್ ವಾಸ್ತುಶಿಲ್ಪದ Columnಗಳಂತಹ ರಚನೆಗಳನ್ನು ಕೆತ್ತಿ, ಅಲ್ಲಲ್ಲಿ ಶಿಲ್ಪಾಕೃತಿಗಳು, ಗುಹೆಗಳು, ಸಮಾಧಿಗಳು, ಚರ್ಚು, ಆಂಫಿಥಿಯೇಟರುಗಳು, ಟೆಂಪಲ್ಲುಗಳ ಸಮಗ್ರ ಸೌಂದರ್ಯವೇ ಪೆಟ್ರಾ. ಮೇಲ್ನೋಟಕ್ಕೆ ದೊಡ್ಡ ಪ್ರವಾಹವೊಂದು ಸುಣ್ಣದಕಲ್ಲಿನ ದೊಡ್ಡ ಬೆಟ್ಟವನ್ನು ಕೊರಕಲಿನಂತೆ ಕೊರೆದುಕೊಂಡು ಹೋಗಿ ನೈಸರ್ಗಿಕವಾಗಿ ಸೃಷ್ಟಿಸಿದಂತೆ (Like Natural Canyon) ಕಾಣುತ್ತೆ ಪೆಟ್ರಾದ ಆರಂಬಿಕ ಹಾದಿ. ಇದನ್ನು ಅದನ್ನು Al-Siq ಅನ್ನುತ್ತಾರೆ. ಇದು ಆರಂಭದಿಂದ ಸುಮಾರು ೧.೨ ಕಿ.ಮೀವರೆಗೂ ಸಾಗುತ್ತದೆ. ಆ್ಯಕ್ಚುವಲಿ ಈ ಹಾದಿಯಲ್ಲಿ ಸಾಗೋದೆ ಒಂದು ರೋಮಾಂಚನ. ಮೂಲ ನಬಾಟಿಯನ್ನರು ಪರ್ವತಗಳ ಅಧಿಪತಿ ದುಶಾರ (Dushara) ಎಂಬ ದೇವರ ಆರಾಧಕರಾಗಿದ್ದರು ಮತ್ತು ಹಲವು ಬಗೆಯ ವಿಗ್ರಹಗಳ ಆರಾಧಕರಾಗಿದ್ದರು. ಈ ಂಟ-Siq ಛಿಚಿಟಿಥಿoಟಿ ನ ಸುಣ್ಣದ ಕಲ್ಲಿನ ಬಣ್ಣಗಳು ಮನಮೋಹಕ. ಅದರಲ್ಲೂ ನೂರುಮೀಟರ್ ಎತ್ತರದ, ಕೆಂಪು, ಅರಿಷಿನ, ಕೇಸರಿ, ಪಿಂಕು, ಕಪ್ಪು, ಬಿಳಿಯ ಹಲವು ಶೇಡುಗಳ ಈ ಸೃಷ್ಟಿ ಸೂರ್ಯನ ನೆರಳು ಬೆಳಕಿನ ಆಟದಲ್ಲಿ ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತವೆ. Al-Siq ಮುಗಿಯುತ್ತಿದ್ದಂತೆ ಸೂರ್ಯನ ಬೆಳಕಿನಲ್ಲಿ ಮುತ್ತು ರತ್ನಗಳ ರಾಶಿಯೇ ಹೊಳೆಯುತ್ತಿರುವಂತೆ ರೋಮನ್ columnಗಳ ದೊಡ್ಡ ಕೆತ್ತನೆಯೊಂದು ಬಂಡೆ ಕಲ್ಲುಗಳ ನಡುವಿನಿಂದ ಕಾಣುತ್ತೆ. ಅದೇAl-Khazneh(Treasury). ನಬಾಟಿಯನ್ನರ ಕೈಯಲ್ಲಿ ಮೂಡಿದ ಅದ್ಭುತವಾದ ರೋಮನ್ ಶೈಲಿಯ ವಾಸ್ತುಶಿಲ್ಪ. ಅಲ್ಲಿಂದ ಮುಂದಕ್ಕೆ ಸಾಲು ಸಾಲು ಗುಹೆಗಳು, ಸಮಾಧಿಗಳು.
ಅಲ್ಲೇ ಒಂದೊಂದು ಕಡೆ ಬಿಗ್ ಟೆಂಪಲ್ಲು, Sacrificing Chamber, ಚರ್ಚ್ನ ಪಳೆಯುಳಿಕೆಗಳು. ಬಹುತೇಕ ರೋಮನ್ Amphitheatreಗಳು ಕಲ್ಲುಗಳಿಂದ ನಿರ್ಮಿಸಲಾಗಿರುತ್ತವೆ. ಆದರೆ ಬಂಡೆಕಲ್ಲೊಂದನ್ನೇ ಕೆತ್ತಿ (Carved) ನಿರ್ಮಿಸಿದ ಜಗತ್ತಿನ ಏಕೈಕ Ad-Dier(Monastery). ಇರೋದು ಪೆಟ್ರಾದಲ್ಲಿ. ಅದನ್ನು ದಾಟಿ ಕಡಿದಾದ ದಾರಿಯಲ್ಲಿ ಸಾವಿರದಷ್ಟು ನಿರ್ದಿಷ್ಟ ಆಕಾರವಿಲ್ಲದ ಮೆಟ್ಟಿಲುಗಳನ್ನು ದಾಟಿ ನಡೆದರೆ ಸಿಗೋದು Monastery. ಕಡಿದಾದ ರಸ್ತೆಯಲ್ಲಿ ಕತ್ತೆ ಕುದುರೆಗಳ ಸಾಗಾಟದ ಮಧ್ಯದಲ್ಲಿ Monastery ತಲುಪಿದ್ದೇವೆಂದರೆ ಸ್ಟಾರ್ಟಿಂಗ್ ಪಾಯಿಂಟಿನಿಂದ ಐದು ಕಿಲೋ ಮೀಟರ್ ನಡೆದಿದ್ದೇವೆ ಎಂದೇ ಅರ್ಥ. ವಾಪಾಸು ನಡೆಯಬೇಕಾದ ದೂರವೂ ಸೇರಿದರೆ ಅದು ಹತ್ತು ಕಿ.ಮೀ.ಗಳ ಮ್ಯಾರಥಾನ್ ಇದ್ದಂತೆ. ನಡೆಯಲು ಆಗದವರಿಗೆ ಕತ್ತೆ, ಕುದುರೆಗಳೂ ಇವೆ. ಅರೇಬಿಯನ್ ಹೆಂಗಸೊಬ್ಬಳು ಕುದುರೆ ಓಡಿಸಿಕೊಂಡು ಹೋಗುತ್ತಿದ್ದಳು. ಅವಳದು ಕುದುರೆ ಮೇಲೆ ಬೆಟ್ಟ ಹತ್ತಿ ಇಳಿದು ಜನರನ್ನು ಸಾಗಿಸೋ ಬ್ಯುಸಿನೆಸ್ಸು. ಗಟ್ಟಿಗಿತ್ತಿ. ಅಲ್ಲೊಬ್ಬ ಅಜ್ಜ Rababah ಎನ್ನುವ ಓಂದೇ Sಣಡಿiಟಿg ನ ಅರೇಬಿಕ್ ಸಂಗೀತ ವಾದ್ಯವನ್ನು ಅದ್ಭುತವಾಗಿ ನುಡಿಸುತ್ತಿದ್ದ. ಕುದುರೆ ಬಾಲದಿಂದ ಮಾಡಿದ ಬಿಲ್ಲಿನಂತಹ ಕಡ್ಡಿಯಿಂದ stringಗೆ ಉಜ್ಜಿ ಹೊಮ್ಮಿಸುವ ನಾದವದು. ಅಲ್ಲಲ್ಲಿ ಕೆಲವರು Bottle Sand Art ಕಲಾವಿದರು. ಬಾಟಲೊಂದರಲ್ಲಿ ವಿವಿಧ ಬಣ್ಣದ ಮರಳುಗಳನ್ನು ತುಂಬಿ ನಿಮಗೆ ಬೇಕಾದ ಹೆಸರು ಚಿತ್ರಗಳನ್ನು ಅಲ್ಲೇ ಬರೆದು ಕೊಡುತ್ತಾರೆ. ಪೆಟ್ರಾದ ನೆನಪಿಗಾಗಿ ಮನೆಗೊಂದು ಸ್ಯಾಂಡ್ ಬಾಟಲ್ ಅನ್ನೂ, ಒಂದಷ್ಟು ONYX ಐಟೆಮ್ಮುಗಳನ್ನೂ ತೆಗೆದುಕೊಂಡು ವಾಪಾಸು ಹೊರಟೆ. ಇಲ್ಲಿನ ಪ್ರತಿಯೊಂದು ಕೆತ್ತನೆಗಳಿಗೂ ಒಂದೊಂದು ಇತಿಹಾಸ ಇದೆ. ಸರಿಯಾಗಿ ಪೆಟ್ರಾವೊಂದನ್ನೇ ನೋಡಲು ನಾಲ್ಕೆೈದು ದಿನಬೇಕು. ನಮಗೊಬ್ಬ ಗೈಡ್ ಸಿಕ್ಕಿದ್ದ. ನಮ್ಮ ಎಂಟೈರ್ ಜೋರ್ಡಾನು ಪ್ರವಾಸದಲ್ಲಿ ಸಿಕ್ಕಿದ ಬೆಸ್ಟ್ ರಿಸೋರ್ಸ್ ಪರ್ಸನ್ ಆತ. ಮೋಥ್ ಅಮ್ಮಾರಿನ್ ಅಂತೆಸರು. ನನಗೀಗ ಫೇಸ್ಬುಕ್ ಫ್ರೆಂಡ್ ಕೂಡ. ನಬಾಟಿಯನ್ನರ ಇತಿಹಾಸ, ಸಮಕಾಲೀನ ಇತಿಹಾಸ, ಜಿಯಾಗ್ರಫಿ, ಜಿಯಾಲಜಿಯನ್ನು ಅದ್ಭುತವಾಗಿ ಮಂಡಿಸಿದ್ದ.ಆತನ ಇಂಗ್ಲೀಷು ಅಷ್ಟೇ ಅದ್ಭುತ. ಪೆಟ್ರಾ UNESCO ವಿಶ್ವ ಪಾರಂಪರಿಕ ತಾಣವೂ ಹೌದು. ಘೋಷಿಸಿದಂತೆಯೇ ಪೆಟ್ರಾ ಜಗತ್ತಿನ ವಿಸ್ಮಯಗಳಲ್ಲಿ ಒಂದು. ಪೆಟ್ರಾದೊಳಗೆ ನಡೆದೇ ತಿರುಗಾಡಿದ್ದರಿಂದ ಕಾಲಿಗೆ ಕರೆಂಟು ಹೊಡೆದಂತಾಗಿತ್ತು. ನಮ್ಮನ್ನೊತ್ತ ಕಾರು ಜೋರ್ಡಾನಿನ ದಕ್ಷಿಣಭಾಗದಲ್ಲಿರುವ ಮರುಭೂಮಿಗೆ ಬಂದಾಗ ಸೂರ್ಯ ಮನೆಗೆ ಹೋಗುವ ಹಂತಕ್ಕೆ ಬಂದು ತಲುಪಿದ್ದ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ….)
(ಲೇಖಕರು ದಿವಿನ್ ಮಗ್ಗಲಮಕ್ಕಿ, ಚಿಕ್ಕಮಗಳೂರು)
