PM attends the 80th Independence Day celebrations at Red Fort, in Delhi on August 15, 2026.
ಆಗಸ್ಟ್ 15, 2026 ರಂದು (ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ) ಕೆಂಪುಕೋಟೆಯ ಮೇಲಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಅತ್ಯಂತ ಮಹತ್ವದ್ದಾಗಿತ್ತು. ಇದು ದೇಶವನ್ನುದ್ದೇಶಿಸಿ ಅವರು ಮಾಡಿದ ಸತತ 13ನೇ ಭಾಷಣವಾಗಿದೆ.
ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ಗುರಿಯನ್ನು ತಲುಪಲು ರೂಪಿಸಲಾದ ಆರ್ಥಿಕ ನೀತಿಗಳು, ಐತಿಹಾಸಿಕ ಮೈಲಿಗಲ್ಲುಗಳು ಮತ್ತು ಕಾರ್ಯತಂತ್ರಗಳಿಂದಾಗಿ ಈ ಭಾಷಣವು ವಿಶೇಷವಾಗಿತ್ತು:
ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪವನ್ನು ಮತ್ತೊಮ್ಮೆ ಒತ್ತಿಹೇಳಿದರು.
ಸ್ವಾತಂತ್ರ್ಯವೆಂಬುದು ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಯಾದ ದಿನವಲ್ಲ. ಅದು ದೇಶದ ಭವಿಷ್ಯವನ್ನು ಸ್ವತಃ ನಿರ್ಧರಿಸುವ ಅವಕಾಶವೂ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತೀಯನ ಕೊಡುಗೆಯೇ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಪ್ರಮುಖ ಶಕ್ತಿಯಾಗಬೇಕು ಎಂಬ ಸಂದೇಶ ಭಾಷಣದಲ್ಲಿ ಪ್ರತಿಧ್ವನಿಸಿತು.
೨೦೪೭ರ ವೇಳೆಗೆ ವಿಕಸಿತ ಭಾರತ-ಭಾರತದ ೧೦೦ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪುನರುಚ್ಚರಿಸಿದರು. ಇದು ವಿಕಸಿತ ಭಾರತದ ಮೊದಲ ಹೆಜ್ಜೆ.
ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಕಾರ್ಯಕ್ರಮವು ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಉತ್ಪಾದನೆ, ತಂತ್ರಜ್ಞಾನ ಮತ್ತು ಅಗತ್ಯ ವಸ್ತುಗಳಲ್ಲಿ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಅನುಷ್ಟಾನ ತರಲಾಗುವುದೆಂದರು.
ಯುವಶಕ್ತಿಗೆ ವಿಶೇಷ ಆದ್ಯತೆ-ವಿಕಸಿತ ಭಾರತದ ಅತಿ ದೊಡ್ಡ ಫಲಾನುಭವಿಗಳು ಯುವಜನತೆಯಾಗಬೇಕೆಂದು ಪ್ರಧಾನಿ ನುಡಿದರು. ಮುಂದಿನ ಒಂದು ವರ್ಷದಲ್ಲಿ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ ತರಬೇತಿ ನೀಡುವ ಯೋಜನೆಯನ್ನು ಘೋಷಿಸಿದರು.
ಉಚಿತ ಆನ್ಲೈನ್ ಕೋಚಿಂಗ್-ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಕೋಚಿಂಗ್ ವೆಚ್ಚದ ಹೊರೆ ಕಡಿಮೆ ಮಾಡಲು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ವ್ಯವಸ್ಥೆ ರೂಪಿಸುವುದಾಗಿ ಹೇಳಿದರು.
ವಂದೇ ಮಾತರಂಗೆ ವಿಶೇಷ ಸ್ಥಾನ-‘ವಂದೇ ಮಾತರಂ’ 150 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪೂರ್ಣ ವಂದೇ ಮಾತರಂ ಗಾಯನ ನಡೆಯಿತು.
2026ರ ಆಗಸ್ಟ್ 15ರಂದು ಕೆಂಪುಕೋಟೆಯ ಆವರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಮುಖವಾಗಿ ಘೋಷಿಸಿದ ಕಾರ್ಯಕ್ರಮಗಳು.
‘ಶಕ್ತಿ ಕಿ ಸಪ್ತಧಾರಾ’-ಭಾರತದ ಮುಂದಿನ ಅಭಿವೃದ್ಧಿಗೆ ಏಳು ಪ್ರಮುಖ ಶಕ್ತಿಗಳನ್ನು ಗುರುತಿಸಿದರು:
1) ಉತ್ಪಾದನಾ ಶಕ್ತಿಯು – ಕೃಷಿ ಮತ್ತು ಆಹಾರ ಸಂಸ್ಕರಣೆ
2) ತಂತ್ರಜ್ಞಾನ ಮತ್ತು ನಾವೀನ್ಯತೆ
3) ಗತಿಶಕ್ತಿ
4) ರಕ್ಷಣಾ ಶಕ್ತಿ
5) ಹಸಿರು ಮತ್ತು ನೀಲಿ ಆರ್ಥಿಕತೆ
6) ಭಾರತದ ಸಾಫ್ಟ್ ಪವರ್
7) ಅಣುಶಕ್ತಿಗೆ ಮಹತ್ವ
