ಯುಗಾದಿ ದಕ್ಷಿಣ ಭಾರತದ ಪ್ರಮುಖ ಹೊಸ ವರ್ಷದ ಹಬ್ಬವಾಗಿದ್ದು, ವಿಶೇಷವಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. “ಯುಗಾದಿ” ಎಂಬ ಪದವು ಸಂಸ್ಕೃತದ “ಯುಗ” (ಯುಗ) ಮತ್ತು “ಆದಿ” (ಆರಂಭ) ಎಂಬ ಪದಗಳಿಂದ ಬಂದಿದ್ದು, ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಯುಗಾದಿ ದಿನವನ್ನು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವು ಸಾಮಾನ್ಯವಾಗಿ ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಬರುತ್ತದೆ. ಅಂದು ಪ್ರಾತಃ ಕಾಲದಲ್ಲಿ ಮನೆಯಲ್ಲಿ ಎಲ್ಲರೂ ಸಡಗರದಿಂದ ಎದ್ದು ಮನೆಗಳನ್ನು ಸ್ವಚ್ಛಗೊಳಿಸಿ ಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಿ ಅಲಂಕರಿಸಲಾಗುತ್ತದೆ. ಎಲ್ಲರೂ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಾರೆ.
ಈ ಹಬ್ಬದ ಮುಖ್ಯ ಆಕರ್ಷಣೆ “ಬೇವು ಬೆಲ್ಲ” . ಇದು ಜೀವನದ ಸಂತೋಷ, ಕಷ್ಟ, ಸುಖ, ದುಃಖ, ಬೇವು, ಮಾವು, ಬೆಲ್ಲ ಎಂಬ ವಿವಿಧ ಅನುಭವಗಳನ್ನು ಪ್ರತಿಬಿಂಬಿಸುತ್ತದೆ.
ಯುಗಾದಿ ದಿನದಂದು ಪಂಡಿತರಿಂದ ಹೊಸ ವರ್ಷದ ಪಂಚಾಂಗವನ್ನು ಕೇಳುವುದು (ಪಂಚಾಂಗ ಶ್ರವಣ) ಒಂದು ಪ್ರಮುಖ ಸಂಪ್ರದಾಯ. ಇದು ಬರುವ 12 ತಿಂಗಳುಗಳ ಮಳೆ, ಬೆಳೆ, ಭೂಕಂಪ, ಪ್ರಕೃತಿ ವೈಪರೀತ್ಯಗಳ ಭವಿಷ್ಯ, ಫಲಗಳ ಮತ್ತು ಗ್ರಹಸ್ಥಿತಿಗಳ ಬಗ್ಗೆ ವಿವರಿಸುತ್ತದೆ.
ಯುಗಾದಿ ಹಬ್ಬವು ಹೊಸ ಆಶೆಗಳು, ಹೊಸ ಗುರಿಗಳು ಮತ್ತು ಹೊಸ ಪ್ರಾರಂಭಗಳಿಗೆ ಸಂಕೇತವಾಗಿದೆ. ಮತ್ತು ಆ ದಿನವನ್ನು ಸಂತೋಷದಿಂದ ಕೂಡಿರಲು ಚೈತ್ರದ ಹಸಿರು ಸುವಾಸನೆಯೊಂದಿಗೆ ಮೇಳೈಸುತ್ತದೆ.
ಪ್ರಮುಖ ಹಬ್ಬವಾದ ಯುಗಾದಿಯನ್ನು ದಕ್ಷಿಣಾದಿ ಸೇರಿದಂತೆ ಉತ್ತರದ ಕೆಲವು ರಾಜ್ಯಗಳಲ್ಲಿ ಸಂಭ್ರಮದಿಂದ ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನವೇ ಯುಗಾದಿ ಹಬ್ಬವಾಗಿದ್ದು, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಜನರು ಉತ್ಸಾಹದಿಂದ ಆಟ-ಪಾಠ, ನಾಟಕ, ಮೋಜು-ಮಸ್ತಿ ವಿವಿಧ ಗ್ರಾಮೀಣ ಸಂಭ್ರಮಗಳಲ್ಲಿ ಭಾಗವಹಿಸಿ ಸಾಯಂಕಾಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಸಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
