ಕೇವಲ ಒಂದೇ ಒಂದು ಸಂಖ್ಯೆ ಇಲ್ದೆ ಹೋಗಿದ್ದರೆ ಇವತ್ತು ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇರುತ್ತಿರಲಿಲ್ಲ, ನಾವು ಚಂದ್ರನ ಮೇಲೆ ಕಾಲಿಡೋಕ್ಕೆ ಆಗ್ತಾಯಿರಲಿಲ್ಲ, ಇಂಟರ್ನೆಟ್ ಇರುತ್ತಿರಲಿಲ್ಲ, ಆ ಸಂಖ್ಯೆಯೇ ಶೂನ್ಯ, ಸೊನ್ನೆ. ಜಗತ್ತಿನ ಇತಿಹಾಸವನ್ನೆ ಬದಲಿಸಿದ ಆ ಒಂದು ಆವಿಷ್ಕಾರದ ಹಿಂದೆ ಇದ್ದಿತ್ತು ಭಾರತೀಯ ಪಶ್ಚಿಮದ ರಾಷ್ಟ್ರಗಳು ಇನ್ನು ಭೂಮಿ ಚಪ್ಪಟೆಯಾಗಿದೆ, ಭೂಮಿಯೇ ಪ್ರಪಂಚದ ಕೇಂದ್ರ, ಸೂರ್ಯನೇ ಭೂಮಿಯನ್ನು ಸುತ್ತುತ್ತಾಯಿರೋದು ಅಂತ ಕಥೆ ಕಟ್ಕೊಂಡಿದ್ರು. ಆಗ ಟೆಲಿಸ್ಕೋಪ್ ಇರಲಿಲ್ಲ, ಸ್ಯಾಟ್ಲೆೈಟ್ ಇರಲಿಲ್ಲ, ಅಷ್ಟೇ ಏಕೆ ಪೇಪರ್, ಪೆನ್ಸಿಲ್ ಕೂಡ ಇರಲಿಲ್ಲ, ಆದರೆ ಇವತ್ತಿಗೆ ಸರಿಯಾಗಿ ಸಾವಿರದ ಐನೂರ ವರ್ಷಗಳ ಹಿಂದೆ ಇಲ್ಲೆ ಭಾರತದಲ್ಲೆ ಕೂತಿದ್ದ ೨೩ ವರ್ಷಗಳ ಯುವಕ ಆಕಾಶವನ್ನು ನೋಡಿದ್ರು. ಯಾವುದೇ ಮಾಡರ್ನ್ ಉಪಕರಣೆಗಳಿಲ್ಲದೆ ಕೇವಲ ತಮ್ಮ ತಲೆಯಲ್ಲಿರೋ ಗಣಿತದ ಸೂತ್ರಗಳನ್ನು ಬಳಸಿ ಡಿಕ್ಲೇರ್ ಮಾಡಿದ್ರು. ಭೂಮಿ ಸ್ಥಿರವಾಗಿಲ್ಲ, ಅದು ತನ್ನ ಅಕ್ಷದ ಮೇಲೆ ತಾನೆ ತಿರುಗುತ್ತಿದೆ ಅಂತ ಸಾಬೀತುಪಡಿಸಿದರು. ಗ್ರಹಣ ಅಂದರೆ ರಾಹು ಕೇತುಗಳ ಕಾಳಗ ಅಲ್ಲ, ಅದು ನೆರಳಿನ ಆಟ ಅಂತ ಜಗತ್ತಿಗೆ ಸಾರಿದರು. ಒಬ್ಬ ಭಾರತೀಯ ಭಾರತ ಕಂಡ ಅತ್ಯಂತ ಶ್ರೇಷ್ಠ ಗಣಿತಜ್ಞ ಮತ್ತು ಖಗೋಳ ವಿಜ್ಞಾನಿ ಆರ್ಯಭಟ್ಟ, ನ್ಯೂಟನ್ ಐಯಿಸ್ಟಾನಿಯನ್ಗಿಂತ ಸಾವಿರ ವರ್ಷಗಳ ಮುಂಚೆ ವಿಜ್ಞಾನಕ್ಕೆ ತಳಪಾಯ ಹಾಕಿದ ಮಾಸ್ಟರ್ಮೈಂಡ್ ಆರ್ಯಭಟ್ಟರ ಸ್ಟೋರಿ ಇವತ್ತು ನಾವು ನೀವು ತಿಳಿದುಕೊಳ್ಳಲೇಬೇಕು.
ಪಾಟಲಿಪುತ್ರದ ಆ ಪರಮ ಮೇಧಾವಿ. ಕ್ರಿಸ್ತ ಶಕ ೪೭೮. ಭಾರತದಲ್ಲಿ ಗುಪ್ತ ಸಾಮ್ರಾಜ್ಯದ ಆಳ್ವಿಕೆ ನಡೀತಾ ಇತ್ತು. ಅದನ್ನು ಭಾರತದ ಸುವರ್ಣ ಯುಗ ಅಂತಲೇ ದಾಖಲಾಗಿದ್ದು ಇದೇ ಸಮಯದಲ್ಲಿ ಕುಸುಮಾಪುರ ಅಥವಾ ಇವತ್ತಿನ ಪಾಠನ ಪಾಟಲಿಪುತ್ರದಲ್ಲೆ ಬಾಲಕನ ಜನನವಾಗುತ್ತದೆ. ಅವರ ಬಾಲ್ಯದ ಬಗ್ಗೆ ನಮಗೆ ಸಿಕ್ಕಿರೋ ಮಾಹಿತಿ ತುಂಬಾ ಕಮ್ಮಿ. ಅವರು ಹುಟ್ಟಿದ್ದು ಅಥವಾ ವಿದ್ಯಾಭ್ಯಾಸ ಮಾಡಿದ್ದು ಕುಸುಮಾಪುರದಲ್ಲೆ ಎಂದು ತಿಳಿದುಬಂದಿರುತ್ತದೆ. ಅದು ಅಂದಿನ ಕಾಲದ ಅತಿ ದೊಡ್ಡ ಎಜುಕೇಶನ್ ಹಬ್. ನಳಂದಾ ಯುನಿವರ್ಸಿಟಿಯ ಖ್ಯಾತಿ ಜಗತ್ತಿನಾದ್ಯಂತ ಹರಡಿದ ಕಾಲದಲ್ಲಿ ಆರ್ಯಭಟ್ಟ ಚಿಕ್ಕ ವಯಸ್ಸಲ್ಲೇ ಗಣಿತ ಮತ್ತು ಖಗೋಳ ಶಾಸ್ತ್ರದಲ್ಲಿ ಎಂತ ಪರಿಣಿತಿ ಹೊಂದಿದ್ದರು. ಅಂದರೆ ಅವರ ಬುದ್ಧಿವಂತಿಕೆಗೆ ಬೆರಗಾದ ಅಂದಿನ ರಾಜಗುರುಗಳು ಅವನನ್ನ ಕುಸುಮಾಪುರದಲ್ಲಿರೋ ಒಂದು ಅಬ್ಸರ್ವೇಟ್ರಿ ಅಥವಾ ಖಗೋಳ ವೀಕ್ಷಣಾಲಯಕ್ಕೆ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ್ದು ಚಿಕ್ಕ ವಯಸ್ಸಲ್ಲೆ ಅಂದರೆ ೨೩ ವರ್ಷಕ್ಕೆ ಪರಿಣಿತಿ ಹೊಂದಿದ್ದರು.
ಇವತ್ತು ಇಪ್ಪತ್ಮೂರು ವರ್ಷಕ್ಕೆ ನಾವೇನು ಮಾಡ್ತಾ ಇದ್ದಿವಿ ಯೋಚನೆ ಮಾಡಿ. ಆದರೆ ಆರ್ಯಭಟ್ಟ ಆ ವಯಸ್ಸಲ್ಲೆ ಒಂದು ಗ್ರಂಥವನ್ನು ಬರೆದರು. ಅದೇ ಜಗತ್ ಪ್ರಸಿದ್ಧ ಆರ್ಯಭಟಿಯ ಈ ಒಂದೇ ಒಂದು ಪುಸ್ತಕ ಮುಂದಿನ ಸಾವಿರಾರು ವರ್ಷಗಳ ಕಾಲ ಭಾರತೀಯ ವಿಜ್ಞಾನಕ್ಕೆ ದಿಕ್ಸೂಚಿಯಾಯಿತು. ಆರ್ಯಭಟಿಯ ಜ್ಞಾನದ ಸಾಗರ, ಆರ್ಯಭಟಿಯ ಸಾಮಾನ್ಯ ಪುಸ್ತಕ ಅಲ್ಲ, ಇದರಲ್ಲಿ ೧೨೧ ಶ್ಲೋಕಗಳಿವೆ. ಆದರೆ ಈ ೧೨೧ ಶ್ಲೋಕಗಳಲ್ಲಿ ಅಡಗಿರೋ ವಿಜ್ಞಾನವನ್ನು ಡಿಕೋಡ್ ಮಾಡೋಕೆ ಇವತ್ತಿನ ಸೂಪರ್ ಕಂಪ್ಯೂಟರ್ಗಳೆ ಬೇಕು. ಇದರಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ. ಒಂದು ಗೀತಿಕಾ ಪಾದ. ಇದು ಸಮಯವನ್ನು ಅಳಿಯುವುದು ಹೇಗೆ ಅನ್ನೋದರ ಬಗ್ಗೆ ಹೇಳುತ್ತೆ. ಯುಗಗಳು ತಳಪ್ಪಗಳ ಲೆಕ್ಕಾಚಾರ್ ಇಲ್ಲಿದೆ. ಎರಡನೆಯದು ಗಣಿತ ಪಾದ. ಆದರೆ ಮ್ಯಾಥಮೆಟಿಕ್ಸ್, ಜಿಯೋಮೆಟ್ರಿ, ಆಲ್ಜೀಬ್ರಾ, ಟ್ರಿಕೋನಮಿತಿ, ಅಂದರೆ ಟ್ರಿಗ್ನೋಮೆಟ್ರಿ ಎಲ್ಲವೂ ಇದ್ದರಲ್ಲಿದೆ. ಮೂರನೇದು ಕಾಲಕ್ರಿಯೆ ಪಾದ. ಇದು ಗ್ರಹಗಳ ಚಲನೆ ಬಗ್ಗೆ ಮಾತ್ನಾಡುತ್ತೆ. ಮತ್ತು ನಾಲ್ಕನೆಯದು ಗೋಲ ಪಾದ. ಆದರೆ ಭೂಮಿ ಮತ್ತು ಆಕಾಶದ ರಚನೆ ಹೇಗಿದೆ ಅನ್ನೋದರ ಬಗ್ಗೆ ವಿವರಣೆ. ಆಗಿನ ಕಾಲಕ್ಕೆ ಯಾವುದೇ ಕ್ಯಾಲ್ಕುಲೇಟರ್ ಇಲ್ಲದೆ. ಇಷ್ಟೊಂದು ಲೆಕ್ಕಾಚಾರಗಳನ್ನ ಅವರು ಹೇಗೆ ಮಾಡಿದ್ರು ಅನ್ನೋದೆ ಇವತ್ತಿಗೂ ಒಂದು ದೊಡ್ಡ ವಿಸ್ಮಯ. ಅವ್ರು ಬರಿ ಸೂತ್ರಗಳನ್ನು ಬರಿತಾ ಇರಲಿಲ್ಲ. ಅದನ್ನು ಕವಿತೆಯ ರೂಪದಲ್ಲಿ ಬರೆದ್ರು. ನೆನಪುಟ್ಕೊಳ್ಳೋಕ್ಕೆ ಸುಲಭ ಆಗಲಿ ಅಂತ ಗಣಿತವನ್ನು ಒಂದು ಕಾವ್ಯದಂತೆ ಸಂಯೋಜಿಸಿದ್ರು. ಭೂಮಿಯ ಚಪ್ಪಟೆಯಲ್ಲ ಅದು ತಿರ್ಗ್ತಾ ಇದೆ. ಇದು ಆರ್ಯಭಟರ ಅತಿದೊಡ್ಡ ಸಾಧನೆ.
ನಮ್ಮ ವಿಜ್ಞಾನಿ ಆರ್ಯಭಟ್ಟ. ಇವತ್ತಿಗೆ ನಮ್ಮ ಪಂಚಾಂಗಗಳಲ್ಲಿ ಗ್ರಹಣದ ಸಮಯ ನಿರ್ಧಾರ ಆಗೋದು ಆರ್ಯಭಟ್ಟರ ಅಂದಿನ ಲೆಕ್ಕಚಾರದ ಆಧಾರದ ಮೇಲೆಯೇ. ಶೂನ್ಯದ ನಿರ್ಧಾರದ ಮೇಲೆಯೇ. ಈಗ ಅವರ ಋಣ ಗಣಿತಕ್ಕೆ. ನಮಗೆಲ್ಲ ಸ್ಕೂಲ್ನಲ್ಲಿ ಪೈ ಬಗ್ಗೆ ಪಾಠ ಮಾಡುತ್ತಾರೆ. ಅದೇನೆಂದರೆ ಒಂದು ವೃತ್ತದ ಸುತ್ತಳತೆ, ಅದರ ವ್ಯಾಸಕ್ಕುಯಿರೋ ಅನುಪಾತವೇ ಪೈ. ಇದರ ಬೆಲೆ ೨೨/೭ ಅಥವಾ ೩.೧೪ ಅಂತ ಕಲ್ತಿರ್ತಿವೆ. ಈ ಬೆಲೆಯನ್ನು ಅತಿಹೆಚ್ಛು ನಿಖರವಾಗಿ ಅಂದರೆ ನಾಲ್ಕು ಡೆಸಿಮಲ್ ಪಾಯಿಂಟ್ಗಳವರೆಗೆ ೩.೧೪೧೬ ಅಂತ ಕಂಡುಹಿಡಿದಿದ್ದು ಆರ್ಯಭಟ್ಟನವರು. ಗ್ರೀಕರುಗಳೆಲ್ಲರೂ ಲೆಕ್ಕಾಚಾರ ಮಾಡೋಕ್ಕೆ ಒದ್ದಾಡ್ತಾ ಇದ್ದರೂ ಆರ್ಯಭಟ್ಟ ಅವರು ಒಂದು ಸೂತ್ರವನ್ನು ಹೇಳಿದ್ರು….. ಚತುರತದಿಕಂ ಶತಮಷ್ಟಗುಣಂ ದ್ವಾಸಷ್ಠಿಸ್ತಥಾ ಸಹಸ್ರಾಣಾಂ ಅಂತ. ಅಂದರೆ ಮೂರಕ್ಕೆ ನಾಲ್ಕನ್ನು ಸೇರಿಸಿ ಅದನ್ನು ಎಂಟರಿಂದ ಗುಣಿಸಿ ಅದಕ್ಕೆ ಅರವತ್ತೆರಡು ಸಾವಿರ ಸೇರಿಸಿ ಹೀಗೊಂದು ಕಾಂಪ್ಲೆಕ್ಸ್ ಲೆಕ್ಕಾಚಾರದ ಮೂಲಕ ಪೈ ಬೆಲೆಯನ್ನು ಕೊಟ್ರು. ಅದಕ್ಕಿಂತ ಮುಖ್ಯವಾಗಿ ಪೈ ಅನ್ನೋದು ಒಂದು ಇರ್ಯಾಷನಲ್ ನಂಬರ್, ಅಭಾಗಲಭ್ಧ ಸಂಖ್ಯೆ ಅಂತ ಅವರು ಸೂಚಿಸಿದ್ರು. ಅಂದರೆ ಅದರ ಬೆಲೆ ಕೊನೆ ಇಲ್ಲದೆ ಮುಂದುವರಿತಾನೇ ಹೋಗುತ್ತೆ ಅಂತ. ಇನ್ನು ಶೂನ್ಯ ಅಥವಾ ಝೀರೋ, ಆರ್ಯಭಟ್ಟರು ಶೂನ್ಯವನ್ನು ಒಂದು ಚಿಹ್ನೆಯಾಗಿ ಬಳಸಿದ್ರು, ಇಲ್ಲವೆ ಅನ್ನೋದರ ಬಗ್ಗೆ ಚರ್ಚೆಯಿದೆ. ಆದರೆ ಪ್ಲೇಸ್ ವ್ಯಾಲ್ಯೂ ಸಿಸ್ಟಮ್ ಅಥವಾ ಸ್ಥಾನ ಬೆಲೆ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದ್ದು ಅವರೇ ಅನ್ನೊದರ ಬಗ್ಗೆ ಅನುಮಾನ ಇಲ್ಲ. ಏಕ, ದಶ, ಶತ, ಸಾವಿರಾ, ಅಂತ ನಾವು ಏನು ಹೇಳ್ತೀವಿ ಈ ಸಿಸ್ಟಮ್ ಇಲ್ಲದೆ ಹೋಗಿದ್ದರೆ ಶೂನ್ಯಕ್ಕೆ ಬೆಲೆಯೇ ಇರುತ್ತಿರಲಿಲ್ಲ. ನೀವು ರೋಮನ್ ಅಂಕಿಗಳನ್ನು ನೋಡಿ, ಅದರಲ್ಲಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ಬರಿಯೋದು ಎಷ್ಟು ಕಷ್ಟ. ಆದರೆ ಆರ್ಯಭಟ್ಟರ ದಶಮಾನ ಪದ್ಧತಿಯಿಂದ ಗಣಿತ ಅನ್ನೋದು ಸರಳ ಆಯಿತು. ಇವತ್ತು ನಾವು ಬಳಸೋ ಕಂಪ್ಯೂಟರ್ ಕೋಡಿಂಗ್ಗೆ ಬೇಸ್ ಆಗಿರೋದು ಇದೇ ಗಣಿತ. ಜಗತ್ತಿನ ಕಣ್ಣು ತೆರೆಸಿದ ಭಾರತೀಯ ಆರ್ಯಭಟ್ಟರ ಜ್ಞಾನ, ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ೮ನೇ ಶತಮಾನದಲ್ಲಿ ಅರಬ್ಬರು ಭಾರತಕ್ಕೆ ಬಂದಾಗ ಅವರು ಆರ್ಯಭಟರ ಕೃತಿಗಳನ್ನು ನೋಡಿ ದಂಗಾದರೂ ಅವರು ತಕ್ಷಣವೇ ಅದನ್ನು ಅರೇಬಿಕ್ ಭಾಷೆಗೆ ಅನುವಾದ ಮಾಡಿದ್ದರು. ಅರೇಬಿಕ್ನಲ್ಲೇ ಅದನ್ನು ಅಲ್ ಅರ್ಧುಬಹರ್ ಅಂತ ಕರೆದ್ರು. ಅಲ್ಲಿಂದ ಈ ಜ್ಞಾನ ಯುರೋಪ್ಗೆ ಹೋಯ್ತು. ಅಲ್ಲಿ ಲ್ಯಾಟಿನ್ ಭಾಷೆಗೆ ಅನುವಾದ ಮಾಡಲಾಯಿತು. ಇವತ್ತು ನಾವು ಆಲ್ಗೋರಿಥಮ್ ಅಂತ ಏನು ಕರೆಯುತ್ತೇವೆ ಇದು ಮೂಲತಃ ಅರಬ್ಬರ ಅಲ್ ಖುವಾರಿಸ್ಮಿ ಇಂದ ಬಂತು ಅಂತ ಹೇಳ್ತಾರೆ. ಆದರೆ ಆ ಅಲ್ ಖುವಾರಿಸ್ಮಿ ಅನುಸರಿಸಿದ್ದು ಭಾರತದ ಗಣಿತವನ್ನು. ಹಾಗಾಗಿ ಇವತ್ತಿನ ಮಾರ್ಡನ್ ಮ್ಯಾಥೆಮ್ಯಾಟಿಕ್ಸ್, ಟ್ರಿಗ್ನೋಮೆಟ್ರಿ, ಆಲ್ಜೀಬ್ರಾ, ಈ ಎಲ್ಲದರ ಮೂಲ ಬೇರಿರೋದು ಆರ್ಯಭಟ್ಟರಲ್ಲೆ. ಇವತ್ತು ನಾವು ಚಂದ್ರಯಾನ, ಮಂಗಳಯಾನ ನಮ್ಮ ಪ್ರಪಂಚದ ಟಾಪ್ ಸ್ಪೇಸ್ ಏಜೆನ್ಸಿಗಳ ಲಿಸ್ಟ್ನಲ್ಲಿದ್ದೇವೆ. ಅದರ ಕ್ರೆಡಿಟ್ ನಮ್ಮ ಪೂರ್ವಜರು ಹಾಕಿಕೊಟ್ಟ ಈ ಭದ್ರ ಬುನಾದಿಗೆ ಸೇರಬೇಕು. ಆರ್ಯಭಟ್ಟರ ಜೀವನ ನಮ್ಮಗೊಂದು ವಿಷಯವನ್ನು ಕಲಿಸುತ್ತೆ. ಸಾಧನೆ ಮಾಡೋಕ್ಕೆ ದೊಡ್ಡ ದೊಡ್ದ ಲ್ಯಾಬ್ಗಳು ಬೇಕಾಗಿಲ್ಲ, ಕೋಟ್ಯಾಂತರ ರೂಪಾಯಿ ಫಂಡಿಂಗ್ ಬೇಕಾಗಿಲ್ಲ. ಬೇಕಿರೋದು ಕುತೂಹಲ ಮತ್ತು ಪ್ರಶ್ನೆ ಮಾಡೋ ಧೈರ್ಯ. ಒಂದೂವರೆ ಸಾವಿರ ವರ್ಷಗಳ ಹಿಂದೆ, ಕರೆಂಟ್ ಇಲ್ಲದ ಕಾಲದಲ್ಲೆ ಒಬ್ಬ ಭಾರತಿಯ ಇಡಿ ಬ್ರಹ್ಮಾಂಡದ ಗುಟ್ಟನ್ನ ರಟ್ಟು ಮಾಡಿದ ಅಂದರೆ ಇವತ್ತು ಎಷ್ಟೆಲ್ಲ ಟೆಕ್ನಾಲಜಿ ಇಡ್ಕೋಡಿರೋ ನಾವು ಇನ್ನೇನು ಮಾಡಬಾರದು. ಎಲ್ಲಿಗೆ ಟ್ರೆೈ ಮಾಡಬೇಕು, ಏನು ಟಾರ್ಗೆಟ್ ಹಾಕಬೇಕು, ಏನು ಗೋಲ್ ಇಟ್ಕೋಬೇಕು ಅಲ್ವಾ. ನಮ್ಮ ಇತಿಹಾಸ ಬರಿ ರಾಜರ, ರಾಣಿಯರ ಸ್ಟೋರಿಯಲ್ಲ, ಅದು ವಿಜ್ಞಾನಿಗಳ ಸಾಧಕರ ಸ್ಟೋರಿಯು ಕೂಡ. ಆರ್ಯಭಟ್ಟರ ಬಗ್ಗೆ ಅವರ ಸಾಧನೆ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೊತ್ತಿರಬೇಕು.
