ಬೆಂಗಳೂರು ಬಿಸಿನೆಸ್ ಕಾರಿಡಾರ್ (Bengaluru Business Corridor – BBC) ಎಂಬುದು ಹಿಂದೆ ಪೆರಿಫೆರಲ್ ರಿಂಗ್ ರೋಡ್ (PRR) ಎಂದು ಕರೆಯಲಾಗುತ್ತಿದ್ದ ಬೃಹತ್ ರಸ್ತೆ ಯೋಜನೆ. ಬೆಂಗಳೂರಿನ ಸುತ್ತಲೂ ಹೊಸ ಸಂಪರ್ಕ ರಸ್ತೆ ನಿರ್ಮಿಸಿ ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಕೈಗಾರಿಕೆ-ವಾಣಿಜ್ಯ ಬೆಳವಣಿಗೆಗೆ ಉತ್ತೇಜನ ನೀಡುವುದು ಇದರ ಉದ್ದೇಶ. ಒಟ್ಟು ಉದ್ದ ಸುಮಾರು 73 ರಿಂದ 117 ಕಿಲೋಮೀಟರ್ (ಹಂತಗಳ ಪ್ರಕಾರ ಬದಲಾಗುತ್ತದೆ). ಅಂದಾಜು ವೆಚ್ಚ₹26,000 ರಿಂದ ₹27,000 ಕೋಟಿ. ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಃಆಂ) ಜಾರಿಗೊಳಿಸುತ್ತಿದೆ. ರಸ್ತೆಯು ತುಮಕೂರು ರಸ್ತೆ, ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹೊಸಕೋಟೆ ರಸ್ತೆ, ಸರ್ಜಾಪುರ ರಸ್ತೆ ಮತ್ತು ಹೊಸೂರು ರಸ್ತೆಗಳನ್ನು ಸಂಪರ್ಕಿಸಲಿದೆ. ಯೋಜನೆಯ ಮೊದಲ ಹಂತವಾದ ಮಾದಾವರದಿಂದ ಬಳ್ಳಾರಿ ರಸ್ತೆಯವರೆಗಿನ ಸುಮಾರು 20 ಕಿ.ಮೀ. ವಿಭಾಗಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜೂನ್ 2026ರ ಅಂತ್ಯದ ವೇಳೆಗೆ ಕಾಮಗಾರಿ ಆರಂಭವಾಗಿ ಸುಮಾರು ಪ್ರಗತಿ ಸಾಧಿಸಿದ್ದು ಈ ಭಾಗದ ವೆಚ್ಚ ಸುಮಾರು ₹3,348ಕೋಟಿ ಎಂದು ಅಂದಾಜಿಸಲಾಗಿದೆ. ಯೋಜನೆಯ ಲಾಭಗಳು. ಬೆಂಗಳೂರಿನ ಹೊರವಲಯದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಲ್ಲಿದೆ. ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಡುವೆ ವೇಗದ ಸಂಪರ್ಕ. ಭವಿಷ್ಯದ ಮೆಟ್ರೋ ಮಾರ್ಗಕ್ಕೆ ಸ್ಥಳ ಮೀಸಲು. ಹೊಸ ವಾಣಿಜ್ಯ, ಕೈಗಾರಿಕಾ ಮತ್ತು ವಸತಿ ಅಭಿವೃದ್ಧಿಗಾಗಿ ಈ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿರುವುದರಿಂದ ಕೆಲವು ರೈತರು ಮತ್ತು ಭೂಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಹಾರದ ಮೊತ್ತ, ಭೂಸ್ವಾಧೀನ ಪ್ರಕ್ರಿಯೆ ಮತ್ತು ನ್ಯಾಯಾಲಯದ ಪ್ರಕರಣಗಳು ಯೋಜನೆಯ ಪ್ರಮುಖ ಸವಾಲುಗಳಾಗಿವೆ.
‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ-1. ಬಿಬಿಸಿ) ಯೋಜನೆಯ ಪ್ಯಾಕೇಜ್ ೧ರ ನಿರ್ಮಾಣ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಟೆಂಡರ್ ಕರೆದಿರುವುದು ಕಾನೂನು ಬಾಹಿರವಾಗಿದೆ’ ಎಂದು ಪಿ.ಆರ್.ಆರ್. ರೈತ ಹಾಗೂ ನಿವೇಶನದಾರರ ಸಂಘ ಆರೋಪಿಸಿದೆ. ಯಲಹಂಕದ ವಿಮಾನ ನಿಲ್ದಾಣ ರಸ್ತೆಯ ಕೋಗಿಲು ಕ್ರಾಸ್ ಬಳಿಯ ಹೋಟೆಲ್ನಲ್ಲಿ ಮಂಗಳವಾರ ಸಭೆ ನಡೆಸಿದ ಪಿ.ಆರ್.ಆರ್.ಯೋಜನೆಗೆ ಒಳಪಡುವ ನಿವೇಶನದಾರರು ಮತ್ತು ಜಮೀನಿನ ಮಾಲೀಕರು, ಪ್ರಾಧಿಕಾರದ ಕ್ರಮವನ್ನು ಖಂಡಿಸಿದರು. ಸಂಘದ ಅಧ್ಯಕ್ಷ ಮಾವಳಿಪುರ ಶ್ರೀನಿವಾಸ್ ಮಾತನಾಡಿ, ‘ಟೆಂಡರ್ ಕರೆದ ಬಳಿಕ ೨೧ ಕಿಲೋ ಮೀಟರ್ನಲ್ಲಿ ನೈಸ್ ಇಂಟಿಗ್ರೇಷನ್ಗೆ ಒಳಪಡುವ 3.8 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಜೂನ್ 10ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹೈಕೋರ್ಟ್ನಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಮುಂದುವರಿ ಯುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಮಧ್ಯಂತರ ತಡೆ ಆದೇಶಗಳು ಇದ್ದರೂ ಟೆಂಡರ್ ಕರೆದಿರುವುದು ನ್ಯಾಯಾಲಯದ ಆದೇಶ ಉಲ್ಲಂಘನೆ ಯಾಗಿದೆ’ ಎಂದು ಹೇಳಿದ್ದಾರೆ.
‘ಬಿಬಿಸಿ ಯೋಜನೆಯು 100 ಮೀಟರ್ ರಸ್ತೆ ಅಗಲದ ನಿರ್ಮಾಣಕ್ಕೆ ಪರಿಸರ ಅನುಮೋದನೆ ಪಡೆದು ಕೊಂಡು ಈಗ ಪ್ರಾಧಿಕಾರ ೬೫ ಮೀಟರ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಹೊರಡಿಸಿ ರುವುದು ಪರಿಸರ ಕಾಯ್ದೆಗಳ ಉಲ್ಲಂಘನೆ ಯಾಗಿದೆ. ಶೇಕಡ 80 ರಷ್ಟು ಭೂ ಸ್ವಾಧೀನ ಪೂರ್ಣಗಳ್ಳದೆ ಟೆಂಡರ್ ಆಹ್ವಾನಿಸಿರುವುದು ಕಾನೂನು ಬಾಹಿರ’ ಎಂದು ತಿಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾತನಾಡಿ, ‘2023ರ ಭೂ ಸ್ವಾಧೀನ (ಪರಿಹಾರ ಮತ್ತು ಪುನರ್ ವಸತಿ) ಕಾಯ್ದೆ ಅನುಸರಿಸದ 1834ರ ಕಾಯ್ದೆ ಪ್ರಕಾರ ಸಂಧಾನಿತ ಸೂತ್ರದ ಮೂಲಕ ಪರಿಹಾರ ಆಯ್ಕೆಗಳನ್ನು ಘೋಷಣೆ ಮಾಡಿ ವಂಚಿಸ ಲಾಗುತ್ತಿದೆ’ ಎಂದು ಹೇಳಿದ್ದಾರೆ. ‘ಯೋಜನೆ ರೂಪಿಸುವುದಾದರೆ ಕೇಂದ್ರ ಸರ್ಕಾರದ 20130 ಕಾಯ್ದೆ ನಿಯಮಗಳನ್ನು ಬಿಡಿಎ ಅಳವಡಿಸಿಕೊಂಡು, ಪರಿಹಾರ ಮತ್ತು ಪುನರ್ವಸತಿ ನೀಡಬೇಕು. ಸಾಧ್ಯವಾ-ಗದಿದ್ದಲ್ಲಿ ರೈತರಿಗೆ ನಿರಾಕ್ಷೇಪಣ ಪತ್ರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಯು ನಗರದ ಮುಂದಿನ 25-30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಅತಿ ದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಯಶಸ್ವಿಯಾಗಿ ಪೂರ್ಣಗೊಂಡರೆ ಇದು ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಬಹುದು. ಆದರೆ ಭೂಸ್ವಾಧೀನ ಮತ್ತು ಹಣಕಾಸು ಸಂಬಂಧಿತ ಸವಾಲುಗಳನ್ನು ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದರ ಮೇಲೆ ಯೋಜನೆಯ ಭವಿಷ್ಯ ಅವಲಂಬಿತವಾಗಿದೆ.
