ಬೆಂಗಳೂರುನ 129 ಮಂದಿಗೆ ಸ್ಥಾನ: ಅಂಬಾನಿ ಸಂಪತ್ತು ಶೇ 10ರಷ್ಟು ಕುಸಿತ
ದೇಶದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಮತ್ತೆ ಮೊದಲ ಸ್ಥಾನಕ್ಕೆ ಬಂದಿದೆ. ಮೊದಲ ಸ್ಥಾನದಲ್ಲಿ ಇದ್ದ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬವು ಎರಡನೆಯ ಸ್ಥಾನಕ್ಕೆ ಇಳಿದಿದೆ.
ದೇಶದ ಶತಕೋಟ್ಯಧೀಶರ ಸಂಖ್ಯೆಯು 391ಕ್ಕೆ ತಲುಪಿದೆ ಎಂದು ಬುಧವಾರ ಬಿಡುಗಡೆಯಾದ ‘ಎಂ3ಎಂ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ’ ಹೇಳಲಾಗಿದೆ.
ಅದಾನಿ ಅವರ ಸಂಪತ್ತಿನ ಮೌಲ್ಯ ಶೇ 13ರಷ್ಟು ಜಾಸ್ತಿ ಆಗಿದೆ. ಅಂಬಾನಿ ಅವರ ಸಂಪತ್ತಿನ ಮೌಲ್ಯವು ಶೇ 10ರಷ್ಟು ಕಡಿಮೆ ಆಗಿದೆ.
ಕನಿಷ್ಠ ₹1,000 ಕೋಟಿಯಷ್ಟು ಮೌಲ್ಯದ ಸಂಪತ್ತನ್ನು ಹೊಂದಿರುವ ದೇಶದ ಶ್ರೀಮಂತರ ಸಂಖ್ಯೆಯು 1,810ಕ್ಕೆ ತಲುಪಿದೆ. ಇಷ್ಟು ಜನರ ಬಳಿ ಇರುವ ಸಂಪತ್ತಿನ ಒಟ್ಟು ಮೌಲ್ಯವು ಶೇ 12.8ರಷ್ಟು ಜಾಸ್ತಿ ಆಗಿದ್ದು ₹187.5 ಲಕ್ಷ ಕೋಟಿಗೆ ತಲುಪಿದೆ. ಇದು ಇಡೀ ದೇಶದ ಆರ್ಥಿಕ ಉತ್ಪಾದನೆಯ ಅರ್ಧದಷ್ಟು ಪಾಲಿಗೆ ಸಮ ಎಂದು ಹುರುನ್ ವರದಿ ಹೇಳಿದೆ.
ಹುರುನ್ ಇಂಡಿಯಾ ಪಟ್ಟಿಯಲ್ಲಿರುವ ಶ್ರೀಮಂತರ ಪೈಕಿ ಹೆಚ್ಚಿನವರು (465 ಮಂದಿ) ಇರುವುದು ಮುಂಬೈನಲ್ಲಿ. ಇದಾದ ನಂತರದ ಸ್ಥಾನ ನವದೆಹಲಿಗೆ (236 ಮಂದಿ) ಇದೆ. ಬೆಂಗಳೂರಿನ 129 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎಂ3ಎಂ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿನ ಟಾಪ್-10 ಹೆಸರು
| ಸ್ಥಾನ | ಹೆಸರು | ಸಂಪತ್ತು (ಕೋಟಿ ರೂ.ಗಳಲ್ಲಿ) | ಸಂಪತ್ತಿನ ಏರಿಕೆ/ಇಳಿಕೆ | ಕಂಪನಿ | ನಗರ |
|---|---|---|---|---|---|
| 1. | ಗೌತಮ್ ಅದಾನಿ ಕುಟುಂಬ | 9,22,800 | +13% | ಅದಾನಿ ಸಮೂಹ | ಅಹಮದಾಬಾದ್ |
| 2. | ಮುಖೇಶ್ ಅಂಬಾನಿ ಕುಟುಂಬ | 8,63,400 | −10% | ರಿಲಯನ್ಸ್ ಇಂಡಸ್ಟ್ರೀಸ್ | ಮುಂಬೈ |
| 3. | ಎಲ್.ಎನ್. ಮಿತ್ತಲ್ ಕುಟುಂಬ | 3,39,300 | +93% | ಆರ್ಸೆಲರ್ ಮಿತ್ತಲ್ | ಲಂಡನ್ |
| 4. | ಸೈರಸ್ ಪೂನಾವಾಲಾ ಕುಟುಂಬ | 3,03,400 | +23% | ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ | ಪುಣೆ |
| 5. | ರೋಶನಿ ನಾಡಾರ್ ಮಲ್ಹೋತ್ರಾ ಕುಟುಂಬ | 2,78,500 | −2% | ಎಚ್ಸಿಎಲ್ | ನವದೆಹಲಿ |
| 6. | ಕುಮಾರ್ ಮಂಗಲಂ ಬಿರ್ಲಾ ಕುಟುಂಬ | 2,68,700 | +15% | ಆದಿತ್ಯ ಬಿರ್ಲಾ | ಮುಂಬೈ |
| 7. | ದಿಲೀಪ್ ಸಾಂಘ್ವಿ | 2,64,600 | +15% | ಸನ್ ಫಾರ್ಮಾಸ್ಯುಟಿಕಲ್ಸ್ | ಮುಂಬೈ |
| 8. | ಅಜೀಂ ಪ್ರೇಮ್ಜಿ ಕುಟುಂಬ | 2,62,800 | +19% | ವಿಪ್ರೋ | ಬೆಂಗಳೂರು |
| 9. | ಅನಿಲ್ ಅಗರ್ವಾಲ್ ಕುಟುಂಬ | 2,08,300 | +87% | ವೇದಾಂತ ರಿಸೋರ್ಸಸ್ | ಲಂಡನ್ |
| 10. | ಸಮೀರ್ ಮಹ್ರಾ ಕುಟುಂಬ | 1,89,400 | +52% | ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ | ಅಹಮದಾಬಾದ್ |
