ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಭುಗಿಲೆದ್ದ ಅಸಮಾಧಾನ ಆಗಸ್ಟ್ ೨೫ರವರೆಗೆ ಮುಂದುವರೆದು ಬಿಡಿಸಲಾಗದ ಕಗ್ಗಂಟು ಹಾಗೂ ಒಗಟಾಗಿ ಉಳಿದುಕೊಂಡಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ಹಮ್ಮಿಕೊಂಡಿದ್ದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸುಮಾರು ಎರಡು ತಿಂಗಳ ಕಾಲ ನಡೆದ ಸುದೀರ್ಘ ಕಸರತ್ತಿನ ನಂತರ ೧೯ ಹೊಸ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲಾಯಿತು. ಆದರೆ, ಈ ವಿಸ್ತರಣೆಯು ಪಕ್ಷದಲ್ಲಿ ದೀರ್ಘಕಾಲದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತವನ್ನು ಬಹಿರಂಗಗೊಳಿಸಿದೆ. ಸಚಿವಾಕಾಂಕ್ಷಿಗಳ ಬಂಡಾಯ, ಹಿರಿಯ ಶಾಸಕರ ರಾಜೀನಾಮೆ ಬೆದರಿಕೆ ಹಾಗೂ ನಾಯಕರ ನಡುವಿನ ಶೀತಲ ಸಮರದಿಂದಾಗಿ ಕಾಂಗ್ರೆಸ್ ಸರ್ಕಾರ ಈಗ ಭಾರಿ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಈ ಇಡೀ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ಅತ್ಯಂತ ನಾಟಕೀಯ ಬೆಳವಣಿಗೆಯೆಂದರೆ ಎಂ.ಎಲ್.ಸಿ. ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದು. ಹೈಕಮಾಂಡ್ ಬಿಡುಗಡೆ ಮಾಡಿದ್ದ ೨೦ ಸಚಿವರ ಆರಂಭಿಕ ಪಟ್ಟಿಯಲ್ಲಿ ಅವರೊಬ್ಬರೇ ಮಹಿಳಾ ಪ್ರತಿನಿಧಿಯಾಗಿದ್ದರು. ಆದರೆ, ಶ್ರೀಮತಿ ಗಾಯತ್ರಿಯವರು ಪರಿಷತ್ ಸದಸ್ಯರಾಗಿ ಕೊಟ್ಟ ತೀರ್ಪಿನ ಅದೃಷ್ಟ ಒಲಿದು ಸಚಿವರಾಗಿ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಾಜರಾಗಬೇಕಿದ್ದ ಅವರಿಗೆ ಸಮಾರಂಭ ಆರಂಭವಾಗಲು ಕೇವಲ ಕೆಲವೇ ಗಂಟೆಗಳಿರುವಾಗ ಅವರಿಗೆ ಪ್ರಮಾಣ ವಚನ ಸ್ವೀಕರಿಸದಂತೆ ಸೂಚಿಸಲಾಯಿತು.
ಈ ದಿಢೀರ್ ನಿರ್ಧಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರ ವಿರೋಧ ಸೇರಿದಂತೆ ಪಕ್ಷದೊಳಗಿನ ಆಂತರಿಕ ವಲಯದಲ್ಲಿ ಒಮ್ಮತ ಮೂಡದಿರುವುದೇ ಕಾರಣ ಎನ್ನಲಾಗಿದೆ. ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಟ್ಟಿದ್ದರಿಂದ ಡಿ.ಕೆ. ಶಿವಕುಮಾರ್ ಅವರ ಪ್ರಸ್ತುತ ಸಚಿವ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರು ಇಲ್ಲದಂತಾಗಿದೆ. ಇದು ಸಾರ್ವಜನಿಕವಾಗಿ ಮತ್ತು ವಿರೋಧ ಪಕ್ಷಗಳ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗಿರುವುದು ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಅವರು ಸೂಚಿಸಿದ್ದ ಪ್ರಮುಖ ನಾಯಕರನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಕಡೆಗಣಿಸಿರುವುದು ಅವರ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ. ಕುರುಬ ಸಮುದಾಯದ ಪ್ರಭಾವಿ ನಾಯಕ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣವರ್ ಮತ್ತು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆದರೆ ಉಮಾಶ್ರೀ ಅವರಿಗೆ ವಿಧಾನ ಪರಿಷತ್ ಉಪಸಭಾಪತಿ ಹುದ್ದೆಯ ಭರವಸೆ ನೀಡಿ ಸಂಪುಟದಿಂದ ದೂರ ಇಡಲಾಯಿತು. ತಮ್ಮ ಆಪ್ತ ವಲಯದ ನಾಯಕರನ್ನು ಕಡೆಗಣಿಸಿದ್ದಕ್ಕೆ ಬೇಸತ್ತು ಸಿದ್ದರಾಮಯ್ಯ ಸಮಾರಂಭದಿಂದ ದೂರ ಉಳಿದರು ಎನ್ನಲಾಗಿದೆ.
ಈ ಮಧ್ಯೆ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಲವು ಹಿರಿಯ ಮತ್ತು ನಿಷ್ಠಾವಂತ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ: 1) ಯಶವಂತರಾಯಗೌಡ ಪಾಟೀಲ್ 2) ಬೇಲೂರು ಗೋಪಾಲಕೃಷ್ಣ. 3) ಟಿ.ಬಿ.ಜಯಚಂದ್ರರವರು ತಮ್ಮ ಅನಿಸಿಕೆ ಹೊರಹಾಕಿದ್ದಾರೆ.
ಈ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸೇರಿಕೊಂಡು ಸಚಿವ ಸಂಪುಟ ಮತ್ತು ವಿಧಾನಸಭೆಯ ಪ್ರಮುಖ ಹುದ್ದೆಗಳಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಸ್ಥಾನಗಳು ಕಾಂಗ್ರೆಸ್ನ ಪ್ರಮುಖ ಮತಬ್ಯಾಂಕ್ ಆಗಿರುವ ಅಹಿಂದ ವರ್ಗಗಳಿಗೆ ಹೋಗಿವೆ. ಇದೇ ಮೊದಲ ಬಾರಿಗೆ ೭ ಪರಿಶಿಷ್ಟ ಜಾತಿ (ಎಸ್ ಸಿ) ಮತ್ತು ೩ ಪರಿಶಿಷ್ಟ ಪಂಗಡ (ಎಸ್ ಟಿ) ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಮೂರು ಅಲ್ಪಸಂಖ್ಯಾತ ಸಮುದಾಯದವರಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರಭಾವಿ ಮೇಲ್ವರ್ಗಗಳಾದ ಲಿಂಗಾಯತರಿಗೆ 7 ಮತ್ತು ಒಕ್ಕಲಿಗರಿಗೆ 6 ಸ್ಥಾನಗಳು ದೊರೆತಿವೆ. ಇದು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಸಚಿವ ಸಂಪುಟದಂತಿದೆ.
ಮೈಸೂರು ಸಂಸ್ಥಾನ ಹಾಗೂ ನಂತರ ಕನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರತಿನಿಧಿತ್ವ ದೊರಕಿಲ್ಲ.
ಇದಲ್ಲದೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕರಾವಳಿ ಕರ್ನಾಟಕಕ್ಕೂ ಯಾವುದೇ ಪ್ರತಿನಿಧಿತ್ವ ದೊರೆತಿಲ್ಲ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರ ಬದಲಿಗೆ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸಚಿವರಾಗಿ ಆಯ್ಕೆ ಮಾಡಿದ ಪರಿಣಾಮ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಗಲಿಲ್ಲ.
ಈ ಬೆಳವಣಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ. ಏಕೆಂದರೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬಿಜೆಪಿಯ ಪ್ರಬಲ ಭದ್ರಕೋಟೆಗಳಾಗಿದ್ದು, ಈ ಎರಡೂ ಜಿಲ್ಲೆಗಳ ಒಟ್ಟು 12.
ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ೧೧ ಸ್ಥಾನಗಳನ್ನು ಹೊಂದಿದೆ. ಈ ರಾಜಕೀಯ ಪಗಡೆಯಾಟದಲ್ಲಿ ಕಾಂಗ್ರೆಸ್ ಪಕ್ಷದ ಒಳಗುದಿ, ಕ್ಷೋಬೆ ಮತ್ತು ಆಂತರಿಕ ಬಿಕ್ಕಟ್ಟು ರಾಜ್ಯದ ಎಲ್ಲಾ ಬಟಾಬಯಲಾಗಿ ಆಡಳಿತ ಯಂತ್ರಾಂಗವನ್ನು ಬಲಹೀನಗೊಳಿಸಿದೆಂಬ ಮಾತುಗಳು ಕೇಳಿ ಬಂದಿದ್ದು ೧೩೬ ಶಾಸಕ ಬಲ ಹೊಂದಿರುವ ಕಾಂಗ್ರೆಸ್ ಪಕ್ಷದ ಜನಪ್ರಿಯತೆಗೆ ಸ್ವಲ್ಪಮಟ್ಟಿಗೆ ಘಾಸಿ ಉಂಟು ಮಾಡಿದೆ. ಈ ನಡುವೆ ಮಳೆಗಾಲ ಅಧಿವೇಶನ ಆಗಸ್ಟ್ 12 ರಂದು ಪ್ರಾರಂಭವಾಗಿ ವಿಪಕ್ಷಗಳ ಗಲಾಟೆ ಗದ್ದಲ ನಡುವೆ ಯಾವುದೇ ಕಾರ್ಯಕಲಾಪ ಚರ್ಚೆ ನಡೆಯದೆ ಆಗಸ್ಟ್ ೨೪ ರಂದು ಅನಿಷ್ಟಾವಧಿಗೆ ಮುಂದೂಡಲಾಯಿತು. ಸಚಿವ ನಾಗೇಂದ್ರರವರ ರಾಜಿನಾಮೆಗೆ ಪಟ್ಟು ಹಿಡಿದ ವಿಪಕ್ಷಗಳ ಧರಣಿ ಸತ್ಯಾಗ್ರಹ ಸದನ ಒಳಗೂ ಹೊರಗೂ ಮುಂದುವರಿದು ಲೋಕಭವನದಲ್ಲಿ ರಾಜ್ಯಪಾಲರಿಗೆ ದೂರು ನೀಡುವವರೆಗೂ ನಡೆಯಿತು. ಈ ಮಧ್ಯೆ ವಿಪಕ್ಷಗಳ ಹೋರಾಟ ಬಳ್ಳಾರಿ ಚಲೊ ಪಾದಯಾತ್ರೆಯವರೆಗೂ ಮುಂದುವರಿದಿದೆ. ಈ ಎಲ್ಲಾ ಘಟನೆಗಳೂ ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿರತೆ ಮತ್ತು ಅಸ್ತಿತ್ವಕ್ಕೆ ಯಾವ ತಿರುವು ಪಡೆಯುವುದೋ ಕಾದು ನೋಡಬೇಕಾಗಿದೆ.
