ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯ ಕೇಂದ್ರೀಯ ಅಂಶವಾದ ಉooಜs ಚಿಟಿಜ Seಡಿviಛಿes ಖಿಚಿx (ಜಿಎಸ್ಟಿ) ೨೦೨೫–೨೬ ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದ ಆರ್ಥಿಕ ಚಟುವಟಿಕೆಗಳು ಪುನರುಜ್ಜೀವನಗೊಂಡಿರುವುದನ್ನು ಈ ತೆರಿಗೆ ಸಂಗ್ರಹದ ಏರಿಕೆ ಸ್ಪಷ್ಟಪಡಿಸಿದೆ.
ಒiಟಿisಣಡಿಥಿ oಜಿ ಈiಟಿಚಿಟಿಛಿe ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ೨೦೨೫–೨೬ರಲ್ಲಿ ಜಿಎಸ್ಟಿ ಸಂಗ್ರಹವು ನಿರಂತರವಾಗಿ ಏರಿಕೆಯ ಹಾದಿಯಲ್ಲಿದೆ. ಸರಾಸರಿ ತಿಂಗಳ ಸಂಗ್ರಹ ₹೧.೭ ಲಕ್ಷ ಕೋಟಿ ಮೀರಿದರೆ, ಕೆಲವು ತಿಂಗಳಲ್ಲಿ ₹೨ ಲಕ್ಷ ಕೋಟಿ ಗಡಿ ದಾಟಿದ ಸಾಧನೆಯೂ ದಾಖಲಾಗಿದೆ. ಒಟ್ಟಾರೆ ವಾರ್ಷಿಕ ಸಂಗ್ರಹ ₹೨೧ ಲಕ್ಷ ಕೋಟಿ ಸುತ್ತಮುತ್ತ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
ಜಿಎಸ್ಟಿ ಸಂಗ್ರಹದ ಏರಿಕೆಗೆ ಹಲವಾರು ಕಾರಣಗಳು ಕಾರಣವಾಗಿವೆ. ಇ-ಇನ್ವಾಯ್ಸಿಂಗ್ ಮತ್ತು ಇ-ವೇ ಬಿಲ್ ವ್ಯವಸ್ಥೆಗಳ ಪರಿಣಾಮಕಾರಿ ಅನುಷ್ಠಾನದಿಂದ ತೆರಿಗೆ ವಂಚನೆ ಕಡಿಮೆಯಾಗಿದೆ. ಡಿಜಿಟಲ್ ಪಾವತಿಗಳ ಹೆಚ್ಚಳ ಮತ್ತು ವ್ಯಾಪಾರ ಚಟುವಟಿಕೆಗಳ ಚೇತರಿಕೆ ತೆರಿಗೆ ಸಂಗ್ರಹವನ್ನು ಮತ್ತಷ್ಟು ಬಲಪಡಿಸಿದೆ. ವಿಶೇಷವಾಗಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಕಂಡುಬಂದ ಬೆಳವಣಿಗೆ ಜಿಎಸ್ಟಿ ಆದಾಯದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ ರೂ.1.83 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವರಮಾನ ಸಂಗ್ರಹವು ಶೇ 8.8ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ತಿಳಿಸಿದೆ.
ಅಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನದಲ್ಲಿ ಏರಿಕೆಯಾಗಿರುವುದು, ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಖರೀದಿ ಹೆಚ್ಚಳ ಆಗಿರುವುದು ಜಿಎಸ್ಟಿ ಸಂಗ್ರಹ ಜಾಸ್ತಿ ಆಗಿರುವುದಕ್ಕೆ ಕಾರಣ ಎಂದು ತಿಳಿಸಿದೆ. ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್ಟಿ ವರಮಾನದಲ್ಲಿ ಶೇ 5.9ರಷ್ಟು ಹೆಚ್ಚಳವಾಗಿ, 21.46 ಲಕ್ಷ ಕೋಟಿ ಆಗಿದೆ. ಆಮದು ಸರಕುಗಳಿಂದ ಬಂದ ವರಮಾನದಲ್ಲಿ ಶೇ 17.8ರಷ್ಟು ಏರಿಕೆಯಾಗಿದ್ದು, ₹53.861 ಕೋಟಿ ಆಗಿದೆ. ಒಟ್ಟು ಮರುಪಾವತಿಯು ₹22,074 ಕೋಟಿಯಾಗಿದ್ದು, ಶೇ 13.8ರಷ್ಟು ಹೆಚ್ಚಳವಾಗಿದೆ.
ಮರುಪಾವತಿ ಬಳಿಕ ನಿವ್ವಳ ಜಿಎಸ್ಟಿ ವರಮಾನ ₹1.78 ಲಕ್ಷ ಕೋಟಿಯಾಗಿದ್ದು, ಹಿಂದಿನ ವರ್ಷದ ಮಾರ್ಚ್ಗೆ ಹೋಲಿಸಿದರೆ ಶೇ 8..2ರಷ್ಟು ಏರಿಕೆಯಾಗಿದೆ.
2025-26 ಸಾಲಿನಲ್ಲಿ ಏಪ್ರಿಲ್ನಿಂದ ಮಾರ್ಚ್ವರೆಗೆ ಒಟ್ಟು ಜಿಎಸ್ಟಿ ಸಂಗ್ರಹ ₹22.27 ಲಕ್ಷ ಕೋಟಿಯಾಗಿದ್ದು, ಶೇ 8.3ರಷ್ಟು ಏರಿಕೆ ಆಗಿದೆ. ಮರುಪಾವತಿ ಹಂಚಿಕೆ ಬಳಿಕ ವರಮಾನವು ₹19.34ಲಕ್ಷ ಕೋಟಿಯಾಗಿದ್ದು, ಶೇ ೭.೧ರಷ್ಟು ಬೆಳವಣಿಗೆ ದಾಖಲಿಸಿದೆ.
ಏಪ್ರಿಲ್ನಲ್ಲಿ ಅತ್ಯಧಿಕ ₹2.36 ಲಕ್ಷ ಕೋಟಿ ಮತ್ತು ಮೇ ತಿಂಗಳಿನಲ್ಲಿ ₹2.01 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದು ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ವರಮಾನ ಸಂಗ್ರಹವಾದ ತಿಂಗಳಾಗಿವೆ. ಇದೀಗ ಮಾರ್ಚ್ನಲ್ಲಿ ೨ ಲಕ್ಷ ಕೋಟಿ ಸಂಗ್ರಹವಾಗಿದೆ.
ಮಹಾರಾಷ್ಟ್ರ, ಕರ್ನಾಟಕ ತೆಲಂಗಾಣದಂತಹ ದೊಡ್ಡ ರಾಜ್ಯಗಳು ಸಂಗ್ರಹದಲ್ಲಿ ಸದೃಢ ಏರಿಕೆ ಕಂಡಿವೆ. ಹರಿಯಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಂಗ್ರಹವು ನಿಧಾನವಾಗಿ ಪ್ರಗತಿ ಕಂಡಿದೆ ಎಂದು ಕೇಂದ್ರಸರ್ಕಾರದ ಹಣಕಾಸು ಇಲಾಖೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದೆ.
ಜಿಎಸ್ಟಿ ವ್ಯವಸ್ಥೆಯನ್ನು GST Council ಸಮನ್ವಯಗೊಳಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ತೆರಿಗೆ ಸಂಗ್ರಹ ಸುಗಮವಾಗಿ ನಡೆಯುತ್ತಿದೆ. ಈ ವ್ಯವಸ್ಥೆಯ ಪಾರದರ್ಶಕತೆ ಮತ್ತು ತಂತ್ರಜ್ಞಾನ ಆಧಾರಿತ ಕ್ರಮಗಳು ತೆರಿಗೆದಾರರ ವಿಶ್ವಾಸವನ್ನು ಹೆಚ್ಚಿಸಿವೆ.
ಆದಾಗ್ಯೂ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಜಿಎಸ್ಟಿ ಅನುಸರಣೆ ಇನ್ನೂ ಸವಾಲಾಗಿಯೇ ಉಳಿದಿದೆ. ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯ ಜಟಿಲತೆ ಮತ್ತು ಕೆಲವೊಮ್ಮೆ ತೆರಿಗೆ ದರಗಳ ಗೊಂದಲವು ಉದ್ಯಮಿಗಳಿಗೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇನ್ನಷ್ಟು ಸರಳೀಕರಣದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಿನಲ್ಲಿ, 2025–26ರ ಜಿಎಸ್ಟಿ ಸಂಗ್ರಹದ ಏರಿಕೆ ಭಾರತದ ಆರ್ಥಿಕತೆಗೆ ಧನಾತ್ಮಕ ಸೂಚಕವಾಗಿದೆ. ಮುಂದಿನ ದಿನಗಳಲ್ಲಿ ಸುಧಾರಿತ ನೀತಿಗಳು ಮತ್ತು ತಂತ್ರಜ್ಞಾನ ಬಳಕೆಯಿಂದ ಈ ವೃದ್ಧಿ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.
