ನಿವೇಶನ ವಿಭಜನೆಗೆ ಅನುಮತಿ : ಕೃಷ್ಣ ಬೈರೇಗೌಡ
ಬೆಂಗಳೂರಂದು ವೇಗವಾಗಿ ಬೆಳೆಯುತ್ತಿರುವ ಮಹಾನಗರ. ನಗರದಲ್ಲಿ ಪ್ರತಿದಿನ ಹೊಸ ಕಟ್ಟಡಗಳು, ವಸತಿ ಯೋಜನೆಗಳು ಮತ್ತು ವಾಣಿಜ್ಯ ಆಸ್ತಿಗಳು ಸೇರ್ಪಡೆಯಾಗುತ್ತಿವೆ. ಆದರೆ ಆಸ್ತಿಯ ಖರೀದಿ–ಮಾರಾಟದ ಪ್ರಕ್ರಿಯೆಯಲ್ಲಿ ದಾಖಲೆಗಳ ನಿರ್ವಹಣೆ, ಪೌರಾಡಳಿತದ ಮಾಹಿತಿಗಳು, ಮಾಲೀಕತ್ವದ ವಿವರಗಳು, ಪಟ್ಟಿ, ವಿಭಜನೆ, ವಿಲೀನ ಹಾಗೂ e-Khata ಸೇವೆಗಳ ನಾಗರಿಕರಿಗೆ ಹಲವು ಹಂತಗಳಲ್ಲಿ ಸಂಕೀರ್ಣ ಪ್ರಕ್ರಿಯೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ Greater Bengaluru Authority (GBA) ವ್ಯಾಪ್ತಿಯಲ್ಲಿ e-Khata 2.0 ಎಂಬ ಸುಧಾರಿತ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಪರಿಣಾಮ ಬೀರಿದೆ. ಹಳೆಯ ಆನ್ಲೈನ್ ಖಾತಾ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ, ವಿವಿಧ ಖಾತಾ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒದಗಿಸುವುದು ಇದರ ಪ್ರಮುಖ ಉದ್ದೇಶ.
ಒಂದೇ ವೇದಿಕೆಯಲ್ಲಿ ಹಲವು ಸೇವೆಗಳು–e-Khata 2.0 ಮೂಲಕ ಆಸ್ತಿ ಮಾಲೀಕರು ವಿವಿಧ ಸಂಬಂಧಿತ ಹಲವು ಸೇವೆಗಳಿಗೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸುವ ಅವಕಾಶ ಪಡೆಯುತ್ತಾರೆ. ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬಹಳ ಬೆಂಬಲವಾಗುವ ವಿಷಯವೆಂದರೆ B-Khata ಮತ್ತು A-Khata. e-Khata 2.0 ವ್ಯವಸ್ಥೆಯಲ್ಲಿ ಅರ್ಹ ದಾಖಲೆಗಳ ಸಂಬಂಧದಿಂದ B-Khataದಿಂದ A-Khataಗೆ ಪರಿವರ್ತನೆಗೆ ಸಂಬಂಧಿಸಿದ ಸೇವೆಗಳನ್ನು ಡಿಜಿಟಲ್ ರೀತಿಯಲ್ಲಿ ನಿರ್ವಹಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಒಂದು ವಿಷಯವನ್ನು ಆಸ್ತಿ ಮಾಲೀಕರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಕೇವಲ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಪ್ರತಿಯೊಂದು ಆಸ್ತಿಯೂ A-Khata ಆಗುವುದಿಲ್ಲ. ಆಸ್ತಿಯ ಮಾಲೀಕತ್ವದ ದಾಖಲೆಗಳು, ಅನುಮೋದನೆಗಳು, ಭೂಬಳಕೆ, ನಿರ್ಮಾಣದ ಕಾನೂನುಬದ್ಧತೆ ಹಾಗೂ ಸಂಬಂಧಿತ ನಿಯಮಗಳ ಅನುಸರಣೆಯಂತಹ ಅಂಶಗಳು ಪರಿಶೀಲನೆಗೆ ಒಳಪಡಬಹುದು.
Kaveri ಮತ್ತು ಡಿಜಿಟಲ್ ಸಂಪರ್ಕ–ಆಸ್ತಿ ನೋಂದಣಿಯ ನಂತರ ಖಾತಾ ಪ್ರಕ್ರಿಯೆಯಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಮಾಹಿತಿಗಳ ಸಮನ್ವಯ ಬಹಳ ಮುಖ್ಯ. ಇತ್ತೀಚಿನ e-Khata 2.0 ವ್ಯವಸ್ಥೆಯು Kaveri ನೋಂದಣಿ ದಾಖಲೆಗಳೊಂದಿಗೆ ಕಡ್ಡಾಯ ಪೋರ್ಟಲ್ ವ್ಯವಸ್ಥೆಯ ಸಂಪರ್ಕವನ್ನು ಪ್ರಮುಖ ಸುಧಾರಣೆಗಳಲ್ಲಿ ಒಂದಾಗಿ ತಂದಿದೆ.
ಆಸ್ತಿ ನೋಂದಣಿಯ ನಂತರ ಖಾತಾ ಪ್ರಕ್ರಿಯೆಯಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಮಾಹಿತಿಯ ಹೊಂದಾಣಿಕೆ ಸುಲಭವಾಗುವುದರಿಂದ, ನಾಗರಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಬಹುದು.
ಇದು ಕೇವಲ ನಾಗರಿಕರಿಗೆ ಅನುಕೂಲವಷ್ಟೇ ಅಲ್ಲ; ಆಸ್ತಿ ದಾಖಲೆಗಳಲ್ಲಿ ದೋಷ, ಪುನರಾವರ್ತನೆ ಮತ್ತು ಅಸಮಂಜಸ ಮಾಹಿತಿಯನ್ನು ನಿಯಂತ್ರಿಸುವ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿ ಇವೆ. ಈ ಪೈಕಿ 23–24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಖಾತಾಗಳನ್ನು ಈಗಾಗಲೇ ಏಕೀಕರಣಗೊಳಿಸಲಾಗಿದೆ. ಇದರಲ್ಲಿ ಸುಮಾರು 11 ಲಕ್ಷ ಆಸ್ತಿ ಮಾಲೀಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಂಡಿದ್ದಾರೆ. ಉಳಿದವರು ಅಗತ್ಯ ಮಾಹಿತಿಯನ್ನು ಸಲ್ಲಿಸಿ ತಮ್ಮ ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದೆ.
ಇ-ಆಸ್ತಿ 2.0 ಅನ್ನು ಏಕೆ ತರಲಾಯಿತು? ‘ದಾಖಲೆಗಳ ಪರಿಶೀಲನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗುವಂತೆ’ ಬಲಪಡಿಸಲಾಗಿದೆ. ಹೊರನಾಡಿನಲ್ಲಿ ವಾಸಿಸುವ ಆಸ್ತಿ ಮಾಲೀಕರಿಗೂ ಅನುಕೂಲವಾಗುವಂತೆ ಡಿಜಿಟಲ್ ಸಹಿ ಸೇರಿದಂತೆ ಮತ್ತಷ್ಟು ಡಿಜಿಟಲ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇ-ಖಾತಾ ವ್ಯವಸ್ಥೆ ದೇಶದಲ್ಲೇ ಉತ್ತಮ ಮಾದರಿಯದ್ದನ್ನು ರೂಪಿಸಿದೆ. ಇದಕ್ಕೆ ಇ-ಆಸ್ತಿ 2.0 ಮೂಲಕ ಇನ್ನಷ್ಟು ಸುಧಾರಿತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ನಾಗರಿಕರಿಗೆ ಸಮರ್ಪಿಸುತ್ತಿದ್ದೇವೆ ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಹೊಂದಿರುವ ನಿವೇಶನಗಳ ವಿಭಜನೆಗೆ ಅಕ್ಟೋಬರ್ ಎರಡನೇ ವಾರದಿಂದ ಅವಕಾಶ ಕಲ್ಪಿಸಲಾಗುವುದು. 20 ಸಾವಿರ ಚದರಡಿಗಿಂತ ಕಡಿಮೆ ಆಸ್ತಿಗಳ ವಿಭಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರತಿ ವಿಭಜನೆಯ ಆಸ್ತಿಗೂ ರಸ್ತೆ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ. 20 ಸಾವಿರ ಚದರಡಿಗಿಂತ ಹೆಚ್ಚಿರುವ ನಿವೇಶನಗಳಿಗೆ ‘ಲೇಔಟ್ ನಿಯಮಗಳು’ ಅನ್ವಯವಾಗಲಿವೆ. ಅವರು ಶೇ. 15ರಷ್ಟು ಭೂಮಿ ಬಿಡಬೇಕು. ಜಾಗ ಬಿಡಲು ಸಾಧ್ಯವಿಲ್ಲ ಎಂದರೆ ಅದಕ್ಕೆ ಸಮಾನಾಂತರವಾಗಿ ಮಾರ್ಗಸೂಚಿ ದರವನ್ನು ಪಾವತಿಸಬೇಕು. ಈ ಬಗ್ಗೆ ಪೂರ್ಣ ಮಾಹಿತಿಯನ್ನು ಮುಂದೆ ನೀಡಲಾಗುವುದು. ಆಸ್ತಿಗಳ ಒಗ್ಗೂಡಿಸುವಿಕೆಗೂ ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.
