90ನೇ ವರ್ಷದ ಒಬ್ಬ ವ್ಯಕ್ತಿಯನ್ನು, ಊಹಿಸಿ, ಅವರ ನಿತ್ಯ ಜೀವನ ಶೈಲಿ ಹೇಗಿರಬಹುದು. ಆದರೆ ನಾವು ಇವತ್ತು ಹೇಳಲಿರುವ ಈ ವ್ಯಕ್ತಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದೇಳುತ್ತಿದ್ದರು, ಪ್ರತಿ ದಿನ ಮೈಲಿಗಳಷ್ಟು ದೂರ ನಡೆಯುತ್ತಿದ್ದರು, ಯುವ ಅಧಿಕಾರಿಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದರು ಮತ್ತು ಯಾವಾಗಲೂ ಪರಿಶ್ರಮವಾದ ಧೋರಣೆಯಿಂದ ಟಿಪ್ ಟಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇದು ಮೈಸೂರು ರಾಜ್ಯದ ದಂತಕಥೆಯಾಗಿದ್ದ ಎಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜೀವನದ ನೈಜ ಕಥೆ.
ವಿಶ್ವೇಶ್ವರಯ್ಯನವರು ರಾಷ್ಟ್ರ ನಿರ್ಮಾಣದಲ್ಲಿ ಶಿಸ್ತು ಅತಿ ಮುಖ್ಯ ಎಂದು ನಂಬಿದ್ದರು. ಆದ್ದರಿಂದ ಅವರು ಮೊದಲೇ ತಮ್ಮ ಜೀವನದಲ್ಲಿ ಆ ಶಿಸ್ತನ್ನು ಬೆಳೆಸಿಕೊಂಡರು. ನಿತ್ಯವೂ ಅವರ ದಿನವು ಬೆಳಿಗ್ಗೆ ನಾಲ್ಕು ಮುಕ್ತರ ಸಮಯಕ್ಕೆ ಪ್ರಾರಂಭವಾಗುತ್ತಿತ್ತು. ಹೆಚ್ಚಿನ ಜನರು ಎಚ್ಚರಗೊಳ್ಳುವುದಕ್ಕೂ ಮೊದಲೇ ಅವರು ತಮ್ಮ ದಿನದ ಕೆಲಸವನ್ನು ಯೋಜಿಸಲು ಪ್ರಾರಂಭಿಸುತ್ತಿದ್ದರು. ಬೆಳಿಗ್ಗೆ ಎದ್ದು ಗಂಟೆಯ ಹೊತ್ತಿಗೆ ಅವರು ನೀರಾಗಿ ಬಟ್ಟೆ ಧರಿಸಿ ಮತ್ತು ಸಂಪೂರ್ಣವಾಗಿ ಸಿದ್ಧರಾಗಿ ಕೆಲಸಕ್ಕೆ ತಯಾರಾಗುತ್ತಿದ್ದರು. ಅವರ ಆ ಸಮಯಪಾಲನೆ ಎಷ್ಟು ಪ್ರಸಿದ್ಧಿ ಆಗಿತ್ತು ಅಂದರೆ ಮೈಸೂರಿನ ಜನರು ಅವರು ಕಚೇರಿಗೆ ನಡೆದುಕೊಂಡು ಹೋಗುವ ಸಮಯವನ್ನು ನೋಡಿ ಕಿರಾಯುವತ್ತಾಗಿ ತಮ್ಮ ಗಡಿಯಾರದ ಸಮಯವನ್ನು ಹೊಂದುತ್ತಿದ್ದರು ಎಂದು ತಮಾಷೆ ಮಾಡುತ್ತಿದ್ದರು.
ಆದರೆ ಜನರಿಗೆ ಅತ್ಯಂತ ಆಶ್ಚರ್ಯ ಅನ್ನಿಸುತ್ತಿದ್ದದ್ದು, ತೊಂಬತ್ತರ ಪ್ರಾಯದಲ್ಲಿಯೂ ಅವರ ಶಿಸ್ತುಬದ್ಧ ದಿನಚರಿ. ವೃದ್ಧಾಪ್ಯದಲ್ಲಿ ಅನೇಕ ಜನರು ನಿಧಾನವಾಗುವುದು ಸಹಜ. ಆದರೆ ವಿಶ್ವೇಶ್ವರಯ್ಯನವರು ವ್ಯಾಯಾಮಕ್ಕಾಗಿ ಪ್ರತಿ ದಿನ ಹಲವಾರು ಮೈಲಿಗಳಷ್ಟು ದೂರ ನಡೆಯುವುದನ್ನು ಮುಂದುವರಿಸಿದ್ದರು, ಮತ್ತು ರಾಷ್ಟ್ರೀಯ ಅಭಿವೃದ್ದಿ ವಿಚಾರಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಇಡೀ ದಿನದ ಕೆಲಸ ಕಾರ್ಯಗಳನ್ನು ಮುಂಚಿತವಾಗಿಯೇ ಎಚ್ಚರಿಕೆಯಿಂದ ಯೋಜಿಸುತ್ತಿದ್ದರು. ಪ್ರತಿಯೊಂದು ಕೆಲಸಕ್ಕೂ ನಿಗದಿತ ಸಮಯವಿತ್ತು, ಪ್ರತಿ ಸಭೆಗೆ ಒಂದು ವೇಳಾಪಟ್ಟಿ ಇತ್ತು. ಅವರು ಆಗಾಗೆ ದೀರ್ಘ ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಕೆಲಸವೇ ಅವರ ದಿನಕ್ಕೆ ಹದಿನೆಂಟು ಗಂಟೆಗಳವರೆಗೆ ಕೆಲಸ ಮಾಡಿದ್ದು ಇತ್ತು.
ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಸಣ್ಣ ವಿಚಾರಗಳು ಕೂಡ ಅವರಿಗೆ ಮುಖ್ಯವಾಗುತ್ತಿದ್ದವು. ಅವರ ಕೆಲಸದ ಟೇಬಲ್ ಮೇಲೆ ಪೆನ್ಸಿಲ್, ಕಾಗದ, ಪೇಪರ್, ಪೆನ್ನುಗಳು ಮತ್ತು ಇತರಸಂಗ್ರಹಗಳು ಹೀಗೆ ಪ್ರತಿಯೊಂದು ವಸ್ತುವನ್ನೂ ಒಂದು ಪರಿಪೂರ್ಣ ಕ್ರಮದಲ್ಲಿ ಇರಿಸಲಾಗಿತ್ತು. ಪ್ಲೇಸ್ ಫಾರ್ ಎವ್ರಿಥಿಂಗ್ ಆಂಡ್ ಎವ್ರಿಥಿಂಗ್ ಇನ್ ಇಟ್ಸ್ ಪ್ಲೇಸ್ ಎಂಬುದು ಅವರ ಸರಳ ಸಿದ್ಧಾಂತವಾಗಿತ್ತು. ಒಮ್ಮೆ ಸಿ. ರಾಜಗೋಪಾಲಾಚಾರಿ ಅವರು ಅನಿರೀಕ್ಷಿತವಾಗಿ ತಡರಾತ್ರಿ ಅವರನ್ನು ಭೇಟಿ ಮಾಡಲು ಬಂದಾಗ ವಿಶ್ವೇಶ್ವರಯ್ಯನವರು ಪರಿಶ್ರಮವಾಗಿ ಉಡುಗೆ ತೊಟ್ಟು, ಟಿಪ್ ಟಾಪ್ ಆಗಿ ಕಾಣಿಸಿಕೊಂಡಿದ್ದರು, ಅದನ್ನು ಕಂಡು ರಾಜಾಜಿ ತಮಾಷೆಯಾಗಿ ಮಧ್ಯರಾತ್ರಿಯಲ್ಲಿ ಭಾಯಾಗ್ರಹಕ ಬಂದರೂ ವಿಶ್ವೇಶ್ವರಯ್ಯನವರು ಭಾವಚಿತ್ರ ತೆಗೆಸಲು ಸಿದ್ಧರಾಗಿ ಇರುತ್ತಾರೆ ಎಂದಿದ್ದರಂತೆ, ಅವರ ಶಿಸ್ತು ಅಂಥದಾಗಿತ್ತು. ಅದು ಒಂದು ದಿನಕ್ಕೆ ಮಾತ್ರವಲ್ಲ, ಒಂದು ವರ್ಷವಲ್ಲ ಬದಲಾಗಿ ಜೀವನ ಪರ್ಯಂತ ಹಾಗೆ ಮುಂದುವರಿದಿತ್ತು.
ಹಾಗಾಗಿ ವಿಶ್ವೇಶ್ವರಯ್ಯನವರು ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿದರು ಮತ್ತು ತಮ್ಮ ತೊಂಬತ್ತರ ಹರೆಯದಲ್ಲಿಯೂ ಭಾರತಕ್ಕೆ ಮಾರ್ಗದರ್ಶನ ನೀಡುತ್ತಲೇ ಇದ್ದರು. ಅವರು ಕೇವಲ ಅಣೆಕಟ್ಟುಗಳು ಮತ್ತು ಕೈಗಾರಿಕೆಗಳನ್ನು ನಿರ್ಮಿಸುವುದಕ್ಕಾಗಿಯೇ ಸ್ಫೂರ್ತಿ ಮಾತ್ರವಲ್ಲ, ಶಿಸ್ತಿನಿಂದ ಕೂಡಿದ ಪ್ರಬುದ್ಧ ಜೀವನದ ಮೂಲಕ ಸ್ಫೂರ್ತಿ ಆಗಿದ್ದರು.
