ಮಾನವನ ಉದಯ ಮತ್ತು ವಿಕಾಸದ ನಂತರ ಹಡಗು ಪ್ರಯಾಣ ಬಹುಮುಖ್ಯ ವ್ಯವಹಾರ ರಹದಾರಿಯಾಗಿದೆ. ಶತಶತಮಾನಗಳಿಂದ ಅರಬ್ಬೀ ಸಮುದ್ರದ 16ನೇ ಶತಮಾನದ ನಂತರ ಬ್ರಿಟಿಷ್ ಹಡಗುಗಳ ಮೂಲಕಾಂತರ ವಾಣಿಜ್ಯ ಪ್ರಯಾಣ ಅಭಿವೃದ್ಧಿಯಾಯಿತು. ನಂತರ ಕಡಲ್ಗಳ್ಳರ ಹಾವಳಿ ಜಾಸ್ತಿ ಆಯಿತು.
ವ್ಯಾಪಾರ ಮಾರ್ಗಗಳಾದ ಜಾಗತಿಕ ಸಮುದ್ರ ಅಪರಾಧದವರಿಗೆ ಅಕ್ಷರದ ಕೊಂಬು ಎಂದು ಕರೆಯಲ್ಪಡುವ ಹಾರ್ನ್ ಆಫ್ ಆಫ್ರಿಕಾ ಪ್ರದೇಶದಲ್ಲಿರುವ ಸೊಮಾಲಿಯಾ, ಭೌಗೋಳಿಕವಾಗಿ ಅತ್ಯಂತ ಮಹತ್ವದ ಸಮುದ್ರ ಮಾರ್ಗದ ಬಾಗಿಲಿನಲ್ಲಿದೆ. ಒಂದು ಕಡೆ ಏಡನ್ ಕೊಲ್ಲಿ, ಮತ್ತೊಂದು ಕಡೆ ಹಿಂದೂ ಮಹಾಸಾಗರ; ಸಮೀಪದಲ್ಲೇ ಕೆಂಪು ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಬಾಬ್-ಎಲ್-ಮಂಡೇಬ್ ಜಲಸಂಧಿ. ವಿಶ್ವದ ಆರ್ಥಿಕ ಮತ್ತು ಯುರೋಪ್ ನಡುವಿನ ಸಾಗರ ವ್ಯಾಪಾರದ ಪ್ರಮುಖ ಮಾರ್ಗಗಳು ಈ ಪ್ರದೇಶದ ಮೂಲಕ ಸಾಗುತ್ತವೆ. ಇದೇ ಕಾರಣಕ್ಕೆ, ಸೊಮಾಲಿಯಾದ ಕರಾವಳಿ ಇತಿಹಾಸದಲ್ಲಿ ವ್ಯಾಪಾರ, ನೌಕಾ ಸಂಘರ್ಷ, ಮೀನುಗಾರಿಕೆ ಮತ್ತು ಕಡಲ್ಗಳ್ಳತನಕ್ಕೆ ವಿಶೇಷ ಸ್ಥಾನ ದೊರಕಿದೆ. ವ್ಯಾಪಾರದ ಸೂಯೆಜ್-ಮಧ್ಯಪ್ರಾಚ್ಯ ಯುಗದಲ್ಲಿ ಸೊಮಾಲಿಯಾ ಕೇವಲ ಒಂದು ಕರಾವಳಿ ಪ್ರದೇಶವಾಗಿರಲಿಲ್ಲ. ಮೊಗಾದಿಶು, ಕೀಲಾ, ಬಾರಾವಾ ಮುಂತಾದ ಬಂದರು ನಗರಗಳು ಹಿಂದೂ ಮಹಾಸಾಗರದ ವ್ಯಾಪಾರ ಜಾಲದಲ್ಲಿ ಪ್ರಮುಖ ಸ್ಥಾನ ಹೊಂದಿದ್ದವು. ಅರೇಬಿಯಾ, ಪರ್ಷಿಯಾ, ಭಾರತ ಮತ್ತು ಪೂರ್ವ ಆಫ್ರಿಕಾ ಬಂದರುಗಳೊಂದಿಗೆ ವ್ಯಾಪಾರ ಸಂಬಂಧಗಳಿದ್ದವು. ಅಬುಜಾನ್ ಸುಲ್ತಾನೇಟ್ ಸೇರಿದಂತೆ ಪ್ರಾಚೀನ ರಾಜಕೀಯ ಶಕ್ತಿಗಳು ನೀರು, ಕೃಷಿ ಮತ್ತು ವ್ಯಾಪಾರ ವ್ಯವಸ್ಥೆಗಳನ್ನು ನಿಯಂತ್ರಿಸುತ್ತಿದ್ದವು.
16ನೇ ಶತಮಾನದಲ್ಲಿ ಪೋರ್ಚುಗೀಸ್ ನೌಕಾ ವಿಸ್ತರಣೆ ಹಿಂದೂ ಮಹಾಸಾಗರದ ಹಳೆಯ ವ್ಯಾಪಾರ ವ್ಯವಸ್ಥೆಗೆ ಸವಾಲು ಹಾಕಿತು. ಸ್ಥಳೀಯ ಶಕ್ತಿಗಳು ಮತ್ತು ಒಟ್ಟೋಮನ್ ಸಾಮ್ರಾಜ್ಯ ಪೋರ್ಚುಗೀಸ್ ಪ್ರಭಾವವನ್ನು ಎದುರಿಸಿದವು. ಅದರಿಂದ ಆ ಕಾಲದ ಪ್ರಾರಂಭದಿಂದ ನೌಕಾ ಸಂಘರ್ಷಗಳಲ್ಲಿ, “ಕಡಲ್ಗಳ್ಳತನ” ಎಂದು ಕರೆಯುವುದು ಸರಿಯೆನಿಸುವುದಿಲ್ಲ. ವ್ಯಾಪಾರ ಮಾರ್ಗಗಳು ಮತ್ತು ಬಂದರುಗಳ ಮೇಲಿನ ನಿಯಂತ್ರಣಕ್ಕಾಗಿ ನಡೆದ ರಾಜಕೀಯ-ಸೈನಿಕ ಸಂಘರ್ಷವೂ ಅದರಲ್ಲಿತ್ತು. 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ-ಮುಂದಿನ ಶತಮಾನಗಳಲ್ಲಿ ಕೇಂದ್ರಿತ ರಾಜಕೀಯ ಶಕ್ತಿಗಳು ದುರ್ಬಲವಾದಂತೆ ಕರಾವಳಿ ಪ್ರದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳ ಪ್ರಭಾವ ಹೆಚ್ಚಾಯಿತು. ಸಮುದ್ರದಲ್ಲಿ ಅಪಹರಣಕ್ಕೊಳಗಾದ ಅರಬ್ ಕರಾವಳಿಗೆ ಸೇರಿದ ಹಡಗುಗಳ ಸರಕುಗಳನ್ನು ದೋಚುವ ಘಟನೆಗಳು ನಡೆದವು. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿ ಕಂಡುಬಂದಂತೆ ದೊಡ್ಡ ಪ್ರಮಾಣದ ಅಂತಾರಾಷ್ಟ್ರೀಯ ಹಡಗು ಅಪಹರಣ ಮತ್ತು ವಿಮೋಚನಾ ಹಣದ ಉದ್ಯಮವಾಗಿರಲಿಲ್ಲ. ಕಡಲ್ಗಳ್ಳರ ಉಗಮಕ್ಕೆ-21ನೇ ಶತಮಾನದ ಮೊದಲ ದಶಕದ ಮಧ್ಯಭಾಗದಲ್ಲಿ ಸೊಮಾಲಿಯಾ ಕರಾವಳಿಯ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯಿತು. ಸಣ್ಣ ವೇಗದ ದೋಣಿಗಳಲ್ಲಿ ಬಂದೂಕು ಹಿಡಿದ ಗುಂಪುಗಳು ವಾಣಿಜ್ಯ ಹಡಗುಗಳನ್ನು, ಹಿಂಬಾಲಿಸಿ, ಸುತ್ತುವರಿದು, ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ವಿಮೋಚನಾ ಹಣ ಬೇಡಲು ಆರಂಭಿಸಿದವು.
1991ರ ನಂತರದ ಅರಾಜಕತೆ-ಆಧುನಿಕ ಸೊಮಾಲಿಯಾ ಕಡಲ್ಗಳ್ಳತನದ ಇತಿಹಾಸದಲ್ಲಿ 1991 ಅತ್ಯಂತ ಮಹತ್ವದ ವರ್ಷ. ಅಧ್ಯಕ್ಷ ಸಿಯಾದ್ ಬಾರೆ ಅವರ ಆಡಳಿತ ಪತನಗೊಂಡ ನಂತರ ದೇಶವು ದೀರ್ಘಕಾಲದ ರಾಜಕೀಯ ಅಸ್ಥಿರತೆ ಮತ್ತು ಅಂತರ್ಯುದ್ಧಕ್ಕೆ ಸಿಲುಕಿತು. ಪರಿಣಾಮವಾಗಿ ಕೇಂದ್ರ ಸರ್ಕಾರ ಮತ್ತು ಕರಾವಳಿ ಭದ್ರತಾ ವ್ಯವಸ್ಥೆ ದುರ್ಬಲಗೊಂಡಿತು. ಅದರಿಂದ ಆರಂಭಿಕ ಹಂತದಲ್ಲಿ ಕೆಲವು ಸ್ಥಳೀಯ ಗುಂಪುಗಳು ತಮ್ಮನ್ನು “ಕೋಸ್ಟ್ ಗಾರ್ಡ್” ಎಂದು ಕರೆದುಕೊಂಡಿದ್ದರೂ, ನಂತರದ ಬೆಳವಣಿಗೆಗೆ ಬಲಜೋರು ಸಂಘಟಿತ ಅಪರಾಧ ಮತ್ತು ವಿಮೋಚನಾ ಹಣದ ವ್ಯವಹಾರವಾಗಿ ರೂಪುಗೊಂಡಿತು. ಕೇವಲ ಕಡಲ್ಗಳ್ಳರ ಕಾರ್ಯವಿಧಾನವೂ ಬದಲಾಗಲಾಯಿತು. ಅವರು ದೊಡ್ಡ ಮೀನುಗಾರಿಕಾ ದೋಣಿಗಳನ್ನು ಆಧಾರವಾಗಿ ಇತರ ಹಡಗುಗಳನ್ನು, “ಮದರ್ ಶಿಪ್” ಆಗಿ ಬಳಸಿಕೊಂಡು ಸೊಮಾಲಿಯಾ ಕರಾವಳಿಯಿಂದ ದೂರದೂರದವರೆಗೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದರು. ಜಿಪಿಎಸ್, ಉಪಗ್ರಹ ದೂರವಾಣಿ, ಸಂವಹನ ಸಾಧನಗಳು ಮತ್ತು ಆಧುನಿಕ ಸಂವಹನ ವ್ಯವಸ್ಥೆಗಳು ಅವರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಿತು. 2010ರ ವೇಳೆಗೆ ಸೊಮಾಲಿಯಾ ಕಡಲ್ಗಳ್ಳರ ತಮ್ಮ ಉದ್ದಂಗ ತಲುಪಿತು. ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಆ ವರ್ಷ ಸುಮಾರು 50 ಹಡಗುಗಳು ಯಶಸ್ವಿಯಾಗಿ ಅಪಹರಿಸಲ್ಪಟ್ಟವು. 2012ರಲ್ಲಿ ಈ ಸಂಖ್ಯೆ 15ಕ್ಕೆ ಇಳಿಯಿತು ಮತ್ತು ಆ ನಂತರ ವ್ಯಾಪಾರಿ ಹಡಗಿನ ಯಶಸ್ವಿ ಅಪಹರಣಗಳ ಸಂಖ್ಯೆ ನಿರಂತರವಾಗಿ ಇಳಿಯಿತು. ಅಂತರರಾಷ್ಟ್ರೀಯ ನೌಕಾಪಡೆಗಳ ಪ್ರತಿಕ್ರಿಯೆ-ಕಡಲ್ಗಳ್ಳತನದ ಜಾಗತಿಕ ಸಾಗರ ವ್ಯಾಪಾರಕ್ಕೆ ಗಂಭೀರ ಅಪಾಯವಾಗಿದ್ದರಿಂದ ಅಂತರರಾಷ್ಟ್ರೀಯ ಸಮುದಾಯವು ಕ್ರಮ ಕೈಗೊಂಡಿತು. ಭಾರತ, ಅಮೆರಿಕ, ಚೀನಾ, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳ ನೌಕಾಪಡೆಗಳು ಹಿಂದೂ ಮಹಾಸಾಗರದ ಪ್ರಮುಖ ಪ್ರದೇಶಗಳಲ್ಲಿ ಗಸ್ತು ಆರಂಭಿಸಿದವು.
