ಬೆಂಗಳೂರಿನ ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಹೊಸ ಬಡಾವಣೆಗಳು, ವಿಸ್ತಾರವಾದ ಕಟ್ಟಡಗಳು, ಅಗಲವಾಗುತ್ತಿರುವ ರಸ್ತೆಗಳು, ವಾಣಿಜ್ಯ ಸಂಕೀರ್ಣಗಳು ಅಭಿವೃದ್ಧಿಯ ವೇಗಕ್ಕೆ ಹೆಸರುವಾಸಿ ಪ್ರದೇಶಗಳಾಗಿ ಬೆಳೆ ತೆರೆಯಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪಣತ್ತೂರಿನಲ್ಲಿ 45 ಎಕರೆ ಪ್ರದೇಶದಲ್ಲಿ ರೂಪುಗೊಂಡಿರುವ ನಗರ ಅರಣ್ಯ ಉದ್ಯಾನವನ ಕೇವಲ ಮತ್ತೊಂದು ಉದ್ಯಾನವನವಲ್ಲ; ಬೆಂಗಳೂರಿನ ಅಭಿವೃದ್ಧಿಯ ದಿಕ್ಕಿನ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುವ ಒಂದು ಅವಕಾಶ.
ಕರ್ನಾಟಕ ಅರಣ್ಯ ಇಲಾಖೆ ಮತ್ತು ಪರಿಸರ ಸಂಸ್ಥೆ Say Trees ಸಹಯೋಗದಲ್ಲಿ, CSR ನೆರವಿನ ಮೂಲಕ ರೂಪುಗೊಂಡಿರುವ ಈ ಉದ್ಯಾನವನ ನಗರದಲ್ಲಿ ಹಸಿರು ಪ್ರದೇಶಗಳನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಒಂದು ಮಾದರಿಯಾಗುವ ಸಾಧ್ಯತೆ ಹೊಂದಿದೆ. ಆದರೆ ಅದರ ಯಶಸ್ಸನ್ನು ಅಳೆಯಬೇಕಾದದ್ದು ಉದ್ಯಾನವನದ ಸಂಖ್ಯೆಯಿಂದಲ್ಲ, ಮುಂದಿನ ಹಲವು ವರ್ಷಗಳ ನಿರಂತರ ಸಂರಕ್ಷಣೆಯಿಂದ.
ಪಣತ್ತೂರು–ವೈಟ್ಫೀಲ್ಡ್ ಪ್ರದೇಶ ಬೆಂಗಳೂರು ನಗರದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಗಗಳಲ್ಲಿ ಒಂದು ರಸ್ತೆ, ವಸತಿ, ಕಚೇರಿ ಮತ್ತು ವಾಣಿಜ್ಯ ಅಭಿವೃದ್ಧಿಯ ಒತ್ತಡ ಇಲ್ಲಿ ನಿರಂತರವಾಗಿದೆ. ಆದರೆ ನದವೆ ಉಳಿಯುವ ಪ್ರದೇಶದಿಂದ ದೊಡ್ಡ ಹಸಿರು ಪ್ರದೇಶವೊಂದು ಅಮೂಲ್ಯ, ಒಂದು ಕಡೆ ನಗರಕ್ಕೆ ಉಸಿರಾಟಕ್ಕೆ ಉತ್ತಮ ರಸಕ್ಕೆ ಬೇಕು, ಮತ್ತೊಂದೆಡೆ ಮರಗಳು ಮತ್ತು ನೈಸರ್ಗಿಕ ಪ್ರದೇಶಗಳೂ ಬೇಕು.
ಪೂರ್ವ ಭಾಗದ ಪಣತ್ತೂರಿನಲ್ಲಿ 45 ಎಕರೆ ಪ್ರದೇಶದಲ್ಲಿ ನಗರ ಅರಣ್ಯ ಉದ್ಯಾನ (Urban Tree Park) ಅಭಿವೃದ್ಧಿಪಡಿಸಲಾಗಿದ್ದು, ಸೆಪ್ಟೆಂಬರ್ 2026ರಲ್ಲಿ ಸಾರ್ವಜನಿಕ ಬಳಕೆಗೆ ಉದ್ಘಾಟಿಸಲಾಯಿತು. ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಸಂಸ್ಥೆ Say Trees ಮತ್ತು CSR ಸಹಭಾಗಿತ್ವದ ಮೂಲಕ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ವಿಶೇಷತೆ ಎಂದರೆ ಇದು ಕೇವಲ ಹೊಸದಾಗಿ ಮರಗಳನ್ನು ನೆಟ್ಟ ಉದ್ಯಾನವನವಲ್ಲ. 2011ರಲ್ಲಿ ಇದೇ ಪ್ರದೇಶ ಬಹುತೇಕ ಬರಡು ಭೂಮಿಯಾಗಿದ್ದಾಗ 1,000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಆರಂಭವಾದ ಪರಿಸರ ಪುನಶ್ಚೇತನ ಪ್ರಯತ್ನ 15 ವರ್ಷಗಳ ಬಳಿಕ ಬೆಳೆದ ಮರಗಳ ಹಸಿರು ಹೊದಿಕೆಯನ್ನು ಆಧರಿಸಿ ನಗರ ಅರಣ್ಯ ಉದ್ಯಾನವನವಾಗಿ ಬೆಳೆಯಲಾಗಿದೆ.
ಕರ್ನಾಟಕ ಸರ್ಕಾರದ ನಗರವನ (Nagaravana) ಯೋಜನೆಯಡಿ ಅರಣ್ಯ ಇಲಾಖೆಯು ಸುಮಾರು 145 ಎಕರೆ ಭೂಮಿಯ ಪೈಕಿ 45 ಎಕರೆ ಪ್ರದೇಶವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸಿದೆ. ಆರಂಭವಾದ ಹದಿನೈದು ಪಣತ್ತೂರಿನ ಇಂದಿನ ಹಸಿರು ಪ್ರದೇಶದ ಹಿಂದೆ ಸುಮಾರು 15 ವರ್ಷಗಳ ಪ್ರಯತ್ನವಿದೆ. 2011ರ ವೇಳೆಯಲ್ಲಿ ಇಲ್ಲಿ 1,000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಪುನಶ್ಚೇತನಕ್ಕೆ ಚಾಲನೆ ನೀಡಲಾಗಿತ್ತು. ಈ ನೆಡುವುದು ಸುಲಭವಲ್ಲ. ಆದರೆ ಅದನ್ನು ಮರವಾಗಿ ಬೆಳೆಸುವುದು ಕಷ್ಟ, ನೀರು, ಕಾಲ ಕಾಲಕ್ಕೆ ನಿರ್ವಹಣೆ ಮತ್ತು ಸಮುದಾಯದ ಇಚ್ಛಾಶಕ್ತಿಯಿಂದ ಪಾರಂಪರ್ಯವಾಗಿ ಇಂದು ಹಸಿರುಗಾರಿಕೆಗೆ ಅರಣ್ಯ ನಿಂತಿದೆ.
ಒಂದು ಪ್ರದೇಶದ ಪರಿಸರವನ್ನು ಬದಲಿಸಲು ದೀರ್ಘಕಾಲದ ಪ್ರಯತ್ನ ಫಲ ತೋರಿಸುತ್ತದೆ. ನಗರ ಯೋಜನೆಯಲ್ಲಿ ಸಾಮಾನ್ಯವಾಗಿ ಇದು ವರ್ಷ, ಹತ್ತು ವರ್ಷಗಳ ಗಡುವಿನ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಮರದ ಬೆಳವಣಿಗೆಯ ಗಡಿಯಾರ ಬೇರೆ. ಮರಕ್ಕೆ ಬೆಳೆಯಲು ಸಮಯ ಬೇಕು. ಹೀಗಾಗಿ ನಗರ ಅರಣ್ಯ ಯೋಜನೆಗಳೂ ದೀರ್ಘಾವಧಿಯ ದೃಷ್ಟಿಯಿಂದ ರೂಪುಗೊಳ್ಳಬೇಕು.
ಉದ್ಯಾನವನವೆಂದರೆ ಕೇವಲ ವಾಕಿಂಗ್ ಟ್ರ್ಯಾಕ್ ಅಲ್ಲ. ಪಣತ್ತೂರಿನ ನಗರ ಅರಣ್ಯದಲ್ಲಿ ಸುಮಾರು ಎರಡು ಕಿಲೋಮೀಟರ್ ಉದ್ದದ ಇಕೋ ಟ್ರೇಲ್, ವಾಕಿಂಗ್ ಮಾರ್ಗ, ತೆರೆದ ಜಿಮ್, ಮಕ್ಕಳ ಆಟದ ಪ್ರದೇಶ, ಆಂಫಿಥಿಯೇಟರ್, ಕುಳಿತುಕೊಳ್ಳುವ ಸ್ಥಳಗಳು, ಶೌಚಾಲಯ ಮತ್ತು ಪಾರ್ಕಿಂಗ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಅರ್ಥ ನಗರ ಅರಣ್ಯವನ್ನು ಕೇವಲ ಮರಗಳ ಗುಂಪಾಗಿ ನೋಡದೆ, ಜನರು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಉಸಿರಾಡುವ ಸಾರ್ವಜನಿಕ ಸ್ಥಳವಾಗಿ ರೂಪಿಸುವ ಪ್ರಯತ್ನ ನಡೆಯಬೇಕಾಗಿದೆ.
ಸರ್ಕಾರವು ಜನರಲ್ಲರ ಸಹಕಾರದಿಂದ ಕಾರ್ಯರೂಪಕ್ಕೆ ತಂದರೆ ನಮ್ಮ ನಗರಗಳಲ್ಲಿ ಲಾಲ್ಬಾಗ್, ಕಬ್ಬನ್ ಪಾರ್ಕ್ ನಂತರ ಉಸಿರಾಡುವ ಹಸಿರು ಹಸಿರಿನ ವನ್ಯರಾಶಿಯ ಹಸಿರು ತಾಣಗಳು ತಲೆ ಎತ್ತಿಕೊಳ್ಳುತ್ತವೆ.
ಪಣತ್ತೂರು ಯೋಜನೆಯ ಮತ್ತೊಂದು ಪ್ರಮುಖ ಅಂಶ ಜೀವವೈವಿಧ್ಯ ಸಂರಕ್ಷಣೆ. ಪಕ್ಷಿಗಳಿಗೆ ಗೂಡು ಪೆಟ್ಟಿಗೆಗಳು ನೀರಿನ ವ್ಯವಸ್ಥೆ ಹಾಗೂ ವಿವಿಧ ಪಕ್ಷಿಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ ಸಸಿಗಳು ಮತ್ತು ಜೀವವೈವಿಧ್ಯದ ಕುರಿತು ಮಾಹಿತಿ ನೀಡಲು OR ಕೋಡ್ಗಳನ್ನು ಹೊಂದಿರುವ ಫಲಕಗಳನ್ನು ಅಳವಡಿಸುವುದು ಪರಿಸರ ಶಿಕ್ಷಣದ ದೃಷ್ಟಿಯಿಂದ ಉಪಯುಕ್ತ. ಇಂತಹ ವ್ಯವಸ್ಥೆಗಳನ್ನು ಕೇವಲ ಅಲಂಕಾರಕ್ಕಾಗಿ ನೋಡಬಾರದು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನದ ಸ್ಥಳವಾಗಿ ಉದ್ಯಾನವನ್ನು ಬಳಸಬಹುದು. ನಗರದಲ್ಲಿಯೇ ಮರ, ಮಣ್ಣು, ಪಕ್ಷಿ, ಕೀಟ ಮತ್ತು ಸಣ್ಣಜೀವಿಗಳ ಪರಸ್ಪರ ಸಂಬಂಧವನ್ನು ಮಕ್ಕಳಿಗೆ ಪರಿಚಯಿಸುವ ಜೀವಂತ ಪ್ರಯೋಗಾಲಯವಾಗಿಯೂ ಮಾಡಬಹುದು.
ಈ ಯೋಜನೆಗೆ CSR ನೆರವು ದೊರಕಿರುವುದು ಸ್ವಾಗತಾರ್ಹ. ಸರ್ಕಾರದ ಸಂಸ್ಥೆಗಳೊಂದಿಗೆ ಪೂರಕವಾಗಿ ಖಾಸಗಿ ಸಂಸ್ಥೆಗಳು ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವುದು ಉತ್ತಮ ಬೆಳವಣಿಗೆ. ಆದರೆ CSR ಹಣದಲ್ಲಿ ಉದ್ಯಾನ ನಿರ್ಮಾಣವಾದ ನಂತರ ಜವಾಬ್ದಾರಿ ಮುಗಿಯುವುದಿಲ್ಲ. ಮರಗಳ ನಿರಂತರ ಸಂರಕ್ಷಣೆ, ನೀರಿನ ಲಭ್ಯತೆ, ಸ್ವಚ್ಛತೆ, ಭದ್ರತೆ, ಸಸಿಗಳ ಆರೋಗ್ಯ, ಆಕ್ರಮಣಕಾರಿ ಸಸ್ಯಗಳ ನಿಯಂತ್ರಣ ಮತ್ತು ಜೀವವೈವಿಧ್ಯದ ಮೇಲ್ವಿಚಾರಣೆ ವರ್ಷದಿಂದ ವರ್ಷಕ್ಕೆ ನಡೆಯಬೇಕು. ಇದಕ್ಕಾಗಿ ಸ್ಪಷ್ಟ ನಿರ್ವಹಣಾ ವ್ಯವಸ್ಥೆ ಇರಬೇಕು. ಉದ್ಯಾನದ ನಿರ್ವಹಣೆಗೆ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು, ಪರಿಸರ ಸಂಘಟನೆಗಳು ಮತ್ತು ಅರಣ್ಯ ಇಲಾಖೆಯೊಂದಿಗೆ ವ್ಯವಸ್ಥೆ ರೂಪಿಸಿದರೆ ಅದರ ದೀರ್ಘಕಾಲೀನ ಫಲಿತಾಂಶ ಉತ್ತಮವಾಗಬಹುದು.
ಪಣತ್ತೂರಿನಲ್ಲಿ 15 ವರ್ಷಗಳ ಹಿಂದೆ ನೆಟ್ಟ ಸಸಿ ಇಂದು ಮರವಾಗಿದೆ. ಆ ಮರದ ನೆರಳಿನಲ್ಲಿ ಮುಂದಿನ ಪೀಳಿಗೆಗೆ ನೆಮ್ಮದಿಯಿದೆ. ಇದೇ ನಗರ ಯೋಜನೆಯ ದೀರ್ಘ ದೃಷ್ಟಿಯಾಗಬೇಕು. ಇಂತಹ ಉಲ್ಲಾಸವ ಒಂದು ಏಕರೆ ಹಸಿರು ಪ್ರದೇಶ ನಾಳೆ ಸಾವಿರಾರು ಜನರಿಗೆ ಉಸಿರಾಗಬಹುದು, ಪಣತ್ತೂರು ಹೇಳುತ್ತಿರುವ ಈ ಹಸಿರು ಪಾಠದ ಸಾರಾಂಶವು ಈ ಭಾಗದ ಬೆಂಗಳೂರಿನ ಕೇವಲ lungs space ಆಗಿರುವುದಲ್ಲದೆ ತನ್ನ ನಗರ ಯೋಜನೆಯ Garden City ಉದಾಹರಣೆಗೆ ಎಂಬ ಹಸಿರಿನ ತೊಡವ ಹೆಸರಿಗೆ ಉಸಿರಾಡುವ ಭಾಗವಾಗಿಸಿಕೊಳ್ಳಬೇಕಿದೆ.
