ಪ್ರಕೃತಿಯ ಅಪರೂಪದ ಅದ್ಬುತ ಸ್ಟ್ರಾಬೆರಿ ಚೀತಾಗಳು. (ಕನ್ನಡದಲ್ಲಿ ಚಂದನ ಚಿರತೆ) ಆಫ್ರಿಕಾದ ವಿಶಾಲ ಹುಲ್ಲುಗಾವಲು ಪ್ರದೇಶಗಳಲ್ಲಿ ಇಂತಹ ಚೀತಾಗಳು ಸಾಮಾನ್ಯವಾಗಿ ಹಳದಿ-ಚಿನ್ನದ ಬಣ್ಣದ ದೇಹ ಮತ್ತು ಕಪ್ಪು ಕಲೆಗಳೊಂದಿಗೆ ಕಾಣಿಸುತ್ತವೆ. ಅದರ ಕೆಲವೊಮ್ಮೆ ಪ್ರಕೃತಿ ಅತ್ಯಂತ ಅಪರೂಪದ ಅಚ್ಚರಿಯನ್ನು ನೀಡುತ್ತದೆ ಅದೇ ಸ್ಟ್ರಾಬೆರಿ ಚೀತಾ ಸ್ಟ್ರಾಬೆರಿ ಚೀತಾ ಎನ್ನುವುದು ವಿಭಿನ್ನ ಜಾತಿಯ ಪ್ರಾಣಿ ಅಲ್ಲ. ಇದು ಚೀತಾಗಳಲ್ಲೇ ಕಾಣಿಸುವ ಅವರೂಪದ ಜನ್ಮ ವೈಶಿಷ್ಟö್ಯ. ಈ ಚಿತಾಗಳ ದೇಹದ ರೋಮಗಳು ಕ್ರೀಮ್ ಅಥವಾ ಕೆಂಪು-ಬ್ರೌನ್ (ಸ್ಟ್ರಾಬೆರಿ) ಛಾಯೆಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕಪ್ಪಾಗಿರುವ ಕಲೆಗಳು ಇಲ್ಲಿ ತಿಳಿ ಕಂದು ಅಥವಾ ಮಂಗಿದ ಬಣ್ಣದಲ್ಲಿ ಕಾಣಿಸುತ್ತವೆ. ವೈಜ್ಞಾನಿಕವಾಗಿ ಆ ಬಣ್ಣದ ವ್ಯತ್ಯಾಸವನ್ನು “ಎರಿತ್ರಿಸಮ್” ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ, ಕೆಂಪು ವರ್ಣಕ ಹೆಚ್ಚಾಗಿ ಕಪ್ಪು ವರ್ಣಕ ಕಡಿಮೆಯಾಗುವುದರಿಂದ ಉಂಟಾಗುವ ಜನ್ನ ಬದಲಾವಣೆ ಅಲ್ಬಿನಿಸಮ್ನಂತ ಅಲ್ಲದೆ ಸ್ಟ್ರಾಬೆರಿ ಚೀತಾಗಳಿಗೆ ಸಾಮಾನ್ಯ ಕಣ್ಣು ಬಣ್ಣ ಹಾಗೂ ದೃಷ್ಟಿ ಸಾಮರ್ಥ್ಯ ಇರುತ್ತದೆ. ನಡವಳಿಕೆ, ಬೇಟೆ ಮಾಡುವ ಸಾಮರ್ಥ್ಯ ಮತ್ತು ವೇಗದ ವಿಷಯದಲ್ಲಿ ಇವು ಸಾಮಾನ್ಯ ಚೀತಾಗಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಅಲ್ಲ. ಆದರೆ ಇಂತಹ ಚೀತಾಗಳನ್ನು ನೋಡಲು ಅವಕಾಶ ದೊರಕುವುದು ಅತ್ಯಂತ ಅಪರೂಪ. ಹೆಚ್ಚಾಗಿ ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಇವುಗಳ ದಾಖಲಾದ ದೃಶ್ಯಗಳು ಲಭ್ಯವಿವೆ.
ವನ್ಯಜೀವಿ ತಜ್ಞರ ಪ್ರಕಾರ ಇಂತಹ ಅವರೂಪದ ಜನ್ಯ ವೈವಿಧ್ಯತೆಗಳು ಜೈವ ವೈವಿಧ್ಯ ಸಂರಕ್ಷಣೆಯ ಮಹತ್ವವನ್ನು ತೋರಿಸುತ್ತವೆ ಈಗಾಗಲೇ ವಾಸಸ್ಥಳ ನಾಶ. ಹವಾಮಾನ ಬದಲಾವಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷಗಳಿಂದ ಸಂಕಷ್ಟದಲ್ಲಿರುವ ಚೀತಾಗಳ ಸಂರಕ್ಷಣೆಗೆ ಹೆಚ್ಚಿನ ಗಮನ ಆಗತ್ಯವಾಗಿದೆ. ಸ್ಟ್ರಾಬೆರಿ ಚೀತಾ ಪ್ರಕೃತಿಯ ಕಲಾತ್ಮಕತೆಗೆ ಸಾಕ್ಷಿಯಾಗಿ, ಮಾನವನಲ್ಲಿ ಆಶ್ಚರ್ಯ.
ಕುತೂಹಲ ಮತ್ತು ಗೌರವವನ್ನು ಹುಟ್ಟುಹಾಕುವ ಅವರೂಪದ ವನ್ಯಜೀವಿ ಅದ್ಭುತವಾಗಿದೆ. ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ-ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನು ಪತ್ತೆ ಮಾಡಿರುವ ವನ್ಯಜೀವಿ ತಜ್ಞರ ತಂಡವು, ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಟ್ಟಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ವನ್ಯಜೀವಿಗಳ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್ ಫೌಂಡೇಶನ್ (ಎಚ್.ಎನ್.ಎಫ್) ವಿಜಯನಗರ ಜಿಲ್ಲೆಯ ಈ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾಟ್ಯಾಪಿಂಗ್ ಸಾಧನಗಳನ್ನು ಅಳವಡಿಸಿತ್ತು. ಕ್ಯಾಮೆರಾಗಳಲ್ಲಿ ಅತ್ಯಪರೂಪದ ‘ಚಂದನ ಚಿರತೆ’ ಹಲವು ಬಾರಿ ಸೆರೆಯಾಗಿದೆ.
ಸಾಮಾನ್ಯ ಚಿರತೆಗಳು ಹಳದಿ-ಕಂದು ಮಿಶ್ರಿತ ಚರ್ಮ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು-ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆ ಹೊಂದಿದೆ. ಜಗತ್ತಿನಾದ್ಯಂತ ಈವರೆಗೆ ಕೆಲವು ಬಾರಿಯಷ್ಟೇ ಈ ಸ್ವರೂಪದ ಚಿರತೆಗಳು ಪತ್ತೆಯಾಗಿವೆ. ‘ಜಾಗತಿಕವಾಗಿ ಇಂತಹದ್ದನ್ನು ಸ್ಟ್ರಾಬೆರಿ ಚಿರತೆ ಎಂದು ಕರೆಯುತ್ತಾರೆ. ಆದರೆ ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ‘ಚಂದನ ಚಿರತೆ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಎಚ್ಎನ್ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
