ಐಟಿ ನಗರಿ ಬೆಂಗಳೂರು ಈ ಬಾರಿ ಮೇ ತಿಂಗಳಲ್ಲೇ ಭಾರೀ ಮಳೆಯ ಹೊಡೆತಕ್ಕೆ ತತ್ತರಿಸಿತು. ಮಳೆಗಾಲ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಸುರಿದ ಭಾರೀ ಮಳೆ, ಗಾಳಿ ಹಾಗೂ ಗುಡುಗು ಸಹಿತ ಮಳೆಯ ಪರಿಣಾಮ ನಗರದ ಅನೇಕ ಪ್ರದೇಶಗಳು ಜಲಾವೃತವಾದವು. ರಸ್ತೆಗಳ ಮೇಲೆ ನೀರು ನಿಂತು ಸಂಜೆ ವೇಳೆ ಮತ್ತು ರಾತ್ರಿ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ನಗರದ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು. ಕೆರೆಗಳು ತುಂಬಿ ಹರಿದ ಕಾರಣ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆಗಳೂ ವರದಿಯಾದವು. ವಿಶೇಷವಾಗಿ ಹೊರವಲಯ ಪ್ರದೇಶಗಳಲ್ಲಿ ನೀರು ಹರಿಯುವ ಕಾಲುವೆಗಳು ಮುಚ್ಚಿಕೊಂಡಿದ್ದರಿಂದ ಮಳೆಯ ನೀರು ರಸ್ತೆಗಳ ಮೇಲೆಯೇ ನಿಂತಿತು. ನಗರದ ಎಲ್ಲಾ ಭಾಗಗಳಲ್ಲಿ 9 ಸೆಂ.ಮೀ.ಕ್ಕಿಂತ ಹೆಚು ಮಳೆ ದಾಖಲಾಗಿದೆ. ಮಳೆ ಮಾತ್ರವಲ್ಲದೆ ಬಿರುಗಾಳಿಯೂ ಜನರನ್ನು ಬೆಚ್ಚಿಬೀಳಿಸಿತು. ಕೆಲವೆಡೆ ಆಲಿಕಲ್ಲು ಮಳೆಯೂ ಸುರಿದಿದ್ದು, ವಾಹನಗಳು ಹಾಗೂ ಬೆಳೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಸಹ ದಕ್ಷಿಣ ಒಳನಾಡಿನ ನಗರಗಳಲ್ಲಿ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವುದರಿಂದ ನೈಸರ್ಗಿಕ ನೀರು ಹರಿವು ಮಾರ್ಗಗಳು ಕುಂಠಿತವಾಗಿವೆ. ಕೆರೆಗಳ ಒತ್ತುವರಿ, ಮಳೆನೀರು ಕಾಲುವೆಗಳ ಅಸಮರ್ಪಕ ನಿರ್ವಹಣೆ ಹಾಗೂ ಅತಿಯಾದ ಕಾಂಕ್ರೀಟೀಕರಣದಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಮಳೆ ನೆರೆ ಹಾವಳಿ ಹೆಚ್ಚಲು ಪ್ರಮುಖ ಕಾರಣಗಳಾಗಿವೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಮಳೆಯ ಅಬ್ಬರದಿಂದ ಒಂದೆಡೆ ತಂಪಾದ ವಾತಾವರಣ ಸೃಷ್ಟಿಯಾದರೂ, ಇನ್ನೊಂದೆಡೆ ನಗರ ಮೂಲಸೌಕರ್ಯದ ದೌರ್ಬಲ್ಯ ಮತ್ತೆ ಬಹಿರಂಗವಾಗಿದೆ. ಪಾಲಿಕೆ ಅಧಿಕಾರಿ ಸಿಬ್ಬಂದಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದರೂ ಅತಿ ಹೆಚ್ಚು ರೆಂಬೆ ಕೊಂಬೆ ಮುರಿದು ಬಿದ್ದು ಸಾಕಷ್ಟು ವಾಹನ ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಹಾನಿಯುಂಟು ಮಾಡಿರುತ್ತದೆ. ಪ್ರತಿ ವರ್ಷ ಮಳೆಯ ಸಮಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇತ್ತೀಚೆಗೆ ಮೇ 17-1+ ರಿಂದ ಸುರಿದ ಮಳೆ IMD ಯೆಲ್ಲೋ ಅಲರ್ಟ್ ನೀಡಿದ್ದರೂ ಗುಡುಗು, ಸಿಡಿಲುನಿಂದ ಭಾರೀ ಮಳೆ ಆರಂಭ. ನಂತರ ಮೇ ೨೦-೨೪ ರಿಂದ ತೀವ್ರ ಮಳೆ, ರಸ್ತೆಗಳೆಲ್ಲಾ ಜಲಾವೃತ, ಸಂಚಾರ ಅಸ್ತವ್ಯಸ್ತ, ಮರಗಳು. ತದನಂತರ ಮೇ 23-27 : ದಕ್ಷಿಣ ಒಳನಾಡು ಕರ್ನಾಟಕಕ್ಕೆ ಭಾರೀ ಮಳೆ ಹಾಗೂ ಗಾಳಿಯ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿದು
ಮೇ 23-29 ಅವಧಿಯಲ್ಲಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಮುಂದುವರಿಕೆಯಾಗಿದ್ದರೂ ಪ್ರತಿದಿನ ಸಂಜೆ-ರಾತ್ರಿ ಧಾರಾಕಾರ ಮಳೆ ಮತ್ತು ಗಾಳಿಯಿಂದ ಹಾನಿಗೊಂಡಿರುತ್ತದೆ. ಭಾರೀ ಗುಡುಗು ಮಳೆಯಿಂದ ಟ್ರಾಫಿಕ್ ಸಮಸ್ಯೆ, ನೀರು ನಿಲ್ಲುವಿಕೆ, ಮರ ಉರುಳಿದ ಘಟನೆಗಳು. ಇನ್ನು ಮುಂಗಾರಿನ ಮಳೆಗಾಲದಲ್ಲಿ ಬೆಂಗಳೂರಿಗೆ ಇನ್ನೇನು ಸಂಕಷ್ಟ ಕಾಡಲಿದೆಯೋ ಕಾದುನೋಡಬೇಕಿದೆ.
