ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ಇಸಿಐನೆಟ್ ಮತ್ತು 100% ವೆಬ್ಕಾಸ್ಟಿಂಗ್ಗೆ ಒತ್ತು. ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ 95 ಕೋಟಿ ಮತದಾರರ ನಿರ್ವಹಣೆ, ಸುಳ್ಳು ಸುದ್ದಿ ನಿಯಂತ್ರಣ ಹಾಗೂ ನೂತನ ತಂತ್ರಜ್ಞಾನಗಳ ಅಳವಡಿಕೆ ಕುರಿತು ಕೇಂದ್ರ ಚುನಾವಣಾ ಆಯೋಗ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಭಾರತೀಯ ಚುನಾವಣಾ ಆಯೋಗವು (ECI) ಚುನಾವಣೆ ಮತ್ತು ಮಾಧ್ಯಮಗಳ ಪಾತ್ರದ ಕುರಿತಂತೆ ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಆ್ಯಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್ (ಐಐಐಡಿಇಎಂ)ನಲ್ಲಿ ಶುಕ್ರವಾರ ಅಖಿಲ ಭಾರತ ಮಾಧ್ಯಮ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತು. ಕಾರ್ಯಕ್ರಮದಲ್ಲಿ ಮಾಧ್ಯಮದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್, ದೇಶಾದ್ಯಂತ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಚುನಾವಣಾ ವ್ಯವಸ್ಥೆ ಭಾರತೀಯ ಚುನಾವಣಾ ಆಯೋಗವು ಬರೋಬ್ಬರಿ 1.80 ಕೋಟಿ ಸಿಬ್ಬಂದಿಯನ್ನು ಹೊಂದಿದ್ದು ಇದು ವಿಶ್ವದಲ್ಲೇ ಅತಿ ದೊಡ್ಡ ಚುನಾವಣಾ ವ್ಯವಸ್ಥೆ ಎಂದು ವಿವರಿಸಿದರು. ನಮ್ಮ ದೇಶದಲ್ಲಿ 95 ಕೋಟಿ ಮತದಾರರಿದ್ದು ಪ್ರತಿವರ್ಷ ಶೇ.9ರಷ್ಟು ಮತದಾರರ ಪಟ್ಟಿಯಲ್ಲಿ ಬದಲಾವಣೆಯಾಗುತ್ತದೆ. ಅಂದರೆ, ಪ್ರತಿ ತಿಂಗಳು ಸುಮಾರು 63 ಲಕ್ಷದಷ್ಟು ಬದಲಾವಣೆಗಳಾಗುತ್ತವೆ. ಹಲವು ದೇಶಗಳನ್ನು ಸೇರಿಸಿದರೂ ಭಾರತದ 95 ಕೋಟಿ ಮತದಾರರನ್ನು ಮೀರಿಸಲು ಸಾಧ್ಯವಿಲ್ಲ ಎಂದು ಅವರು ಹೆಮ್ಮೆಯಿಂದ ನುಡಿದರು.
ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನದಲ್ಲಿ ಜನವರಿ 26, 2026ರವರೆಗೆ ಈ ಮೊಬೈಲ್ ಆ್ಯಪ್ ಅನ್ನು 115 ಕೋಟಿಗೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ಆಯೋಗದ ಪ್ರತಿಯೊಂದು ಮಾಹಿತಿಯೂ ಇದರಲ್ಲಿ ಲಭ್ಯವಿದೆ. ಇಡೀ ಪಾರದರ್ಶಕತೆಯ ಪ್ರಕ್ರಿಯೆಯಾಗಿದೆ. “ಕ್ಲೀನ್ ಕಾನ್ಟೆಸ್ಟ್ ಬಟ್ ಕೊಲವರಿ?” (ಅನುಮಾನವೇಕೆ?) ಎಂದು ಜ್ಞಾನೇಶ್ ಕುಮಾರ್ ಪ್ರಶ್ನಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಭಿಯಾನದಡಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತಿದ್ದು ಇದಕ್ಕಾಗಿ ‘ದೇಶಾದ್ಯಂತ 12 ಲಕ್ಷ ಬೂತ್ ಮಟ್ಟದ ಅಧಿಕಾರಿಗಳ ಸೇರಿದಂತೆ ಒಟ್ಟು 37 ಲಕ್ಷ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. 95 ಕೋಟಿ ಮತದಾರರ ಪೈಕಿ 60 ಕೋಟಿ ಮತದಾರರ SIR ಪೂರ್ಣಗೊಂಡಿದ್ದು ಉಳಿದ 35 ಕೋಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾಧ್ಯಮ ವಿಭಾಗದ ಮಹಾನಿರ್ದೇಶಕ ಅಕ್ಷಯ್ ಗೋಯಲ್ ಅವರು ಇತ್ತೀಚಿನ ವಿಧಾನಸಭಾ ಚುನಾವಣೆಗಳ ಅಂಕಿ-ಅಂಶಗಳನ್ನು ಹಂಚಿಕೊಂಡರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 6.87 ಕೋಟಿ (ಶೇ.93.70) ಮತದಾರರು ಹಕ್ಕು ಚಲಾಯಿಸಿದ್ದು ಇದು ವಿಶ್ವದಲ್ಲೇ ಅತೀಕಷ್ಟ, ಸಿಂಗಾಪುರದಲ್ಲಿ (2025) ಶೇ.92.83, ಪುದುಚೇರಿಯಲ್ಲಿ ಶೇ.91.19, ಅಸ್ಸಾಂನಲ್ಲಿ ಶೇ.86.33, ತಮಿಳುನಾಡಿನಲ್ಲಿ ಶೇ.86.03, ಕೇರಳದಲ್ಲಿ ಶೇ.79.53 ಹಾಗೂ ಜಾರ್ಖಂಡ್ನಲ್ಲಿ ಶೇ.67.25 ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ಇನ್ಸ್ಟಿಟ್ಯೂಟ್ ತಂತ್ರಾಂಶದಲ್ಲಿ ‘ಎಲೆಕ್ಟೋರಲ್ ಲಿಟರಸಿ ಕ್ಲಬ್-20’ ಕ್ಷೇತ್ರದಲ್ಲೇ ಆರಂಭವಾಗಲಿದೆ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಹೆಚ್ಚಿಸಲು ಆಯೋಗದ ನೂತನ ಕ್ರಮಗಳು:
100% ವೆಬ್ಕಾಸ್ಟಿಂಗ್: ಮತದಾನ ಪ್ರಕ್ರಿಯೆಯ ನಿರಂತರ ಮೇಲ್ವಿಚಾರಣೆಗೆ ಎಲ್ಲಾ ಮತಗಟ್ಟೆಗಳಲ್ಲಿ ಶೇ.100ರಷ್ಟು ವೆಬ್ಕಾಸ್ಟಿಂಗ್ ವ್ಯವಸ್ಥೆ. ನಿರಂತರ ಸಂವಾದ: 28,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಳಗೊಂಡಂತೆ ರಾಜಕೀಯ ಪಕ್ಷಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆ (ಡಿಸೆಂಬರ್ 2025ರ ದತ್ತಾಂಶದಂತೆ). ಇವಿಎಂ ಬ್ಯಾಲೆಟ್ ಸುಧಾರಣೆ: ಅಭ್ಯರ್ಥಿಗಳ ವಿವರ ಮತ್ತು ಗುರುತುಗಳು ಸ್ಪಷ್ಟವಾಗಿ ಕಾಣುವಂತೆ ಬ್ಯಾಲೆಟ್ ಪೇಪರ್ಗಳ ಮಾದರಿಯನ್ನು Enhanced “Visibility). ಕ್ಯೂಆರ್ (QR) ಆಧಾರಿತ ಭದ್ರತೆ: ಮತದಾನ ಕೇಂದ್ರಗಳಲ್ಲಿ ಭದ್ರತೆ ಬಲಪಡಿಸಲು ಕ್ಯೂಆರ್ ಆಧಾರಿತ ಗುರುತಿನ ಚೀಟಿ ವ್ಯವಸ್ಥೆ. ಕಡ್ಡಾಯ ವಿವಿಪ್ಯಾಟ್ ಎಣಿಕೆ: ನಮೂನೆ 17 ಸಿ ಮತ್ತು ಇವಿಎಂ ದತ್ತಾಂಶಗಳ ನಡುವೆ ವ್ಯತ್ಯಾಸ ಕಂಡುಬಂದರೆ, ಕಡ್ಡಾಯವಾಗಿ ವಿವಿಪ್ಯಾಟ್ ಚೀಟಿಗಳ ಎಣಿಕೆ. ವೋಟರ್ ಸ್ಲಿಪ್ ಮಾರ್ಪಾಡು: ಮತದಾರರ ಸರಣಿ ಮತ್ತು ಭಾಗದ ಸಂಖ್ಯೆ ಎದ್ದು ಕಾಣುವಂತೆ ವೋಟರ್ ಸ್ಲಿಪ್ ವಿನ್ಯಾಸದಲ್ಲಿ ಬದಲಾವಣೆ. ಫಲಿತಾಂಶ ಘೋಷಣೆಯಾದ 72 ಗಂಟೆಗಳೊಳಗೆ ಸೂಚ್ಯಂಕ ಕಾರ್ಡ್ಗಳು ಮತ್ತು ಅಂಕಿಅಂಶಗಳ ವರದಿಗಳ ಹಂಚಿಕೆ. ಇವೆಲ್ಲಾ ನೂತನ ಮಾರ್ಪಾಡುಗಳ ಅನುಷ್ಠಾನದ ಮೂಲಕ ಜನಜಾಗೃತಿ ಮೂಡಿಸಿ, ಭಾರತೀಯ ಚುನಾವಣಾ ವ್ಯವಸ್ಥೆಯ ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಮಾಧ್ಯಮ ಪ್ರತಿನಿಧಿಗಳಿಗೆ ಭರವಸೆ ನೀಡಿದರು.
