ಸುಮಾರು 1.3ಲಕ್ಷ ಕ್ರೀಡಾಭಿಮಾನಿಗಳಿಗೆ ಅವಕಾಶ ಸಾಮರ್ಥ್ಯದ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎಲ್ಲಿ ನೋಡಿದರೂ, ವಿರಾಟ್ ಕೊಹ್ಲಿಯ ಜರ್ಸಿ ನಂಬರ್ 18 ತೊಟ್ಟ ಅಭಿಮಾನಿಗಳೇ ಕಿಕ್ಕಿರಿದು ತುಂಬಿದ್ದರು. ಇತ್ತೀಚಿನ ಭಾರತೀಯ ಕ್ರಿಕೆಟ್ ಯುಗದಲ್ಲಿ ಕಂಡುಕೇಳರಿಯದ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರ ಆಟ ನೋಡಲು ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗುತ್ತಿದ್ದರು.
ಅತೀ ಕುತೂಹಲ ಮೂಡಿಸಿದ ಫೈನಲ್ ಪಂದ್ಯಕ್ಕೆ 52 ಮಿಲಿಯನ್ ಕ್ರಿಕೆಟ್ ಕ್ರೀಡಾಭಿಮಾನಿಗಳು ಭಾನುವಾರದ ಸಂಜೆ 7 ಘಂಟೆಗೆ ಹೊನಲು ಬೆಳಕಿನ ಪಂದ್ಯಕ್ಕೆ ಟಿವಿ ಮುಂದೆ ಕಾತರದಿಂದ ಕಾಯುತ್ತಿದ್ದರು. ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಗುಜರಾತ್ ಟೈಟನ್ಸ್ ಅಗ್ರ ಬ್ಯಾಟಿಂಗ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಆರಂಭಿಕ ಬ್ಯಾಟರ್ಗಳನ್ನು ಬೇಗ ಬೇಗನೇ ವಿಕೆಟ್ ಕಳೆದುಕೊಂಡ ಆರಂಭಿಕ ಜೋಡಿ ಸಾಯಿ ಸುದರ್ಶನ್ ಮತ್ತು ಗಿಲ್ ಸ್ಥಿರ ಆಟ ಪ್ರದರ್ಶಿಸಿದರೆ ಸ್ಕೋರ್ 26 ಆಗಿದ್ದಾಗ ಫೆವಲಿನ್ಗೆ ಹಿಂತಿರುಗಿದರು. ಪರಿಣಾಮ ತಂಡ ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕದ ನೆರವಿನಿಂದ ಅಂತಿಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲು ಸಾಧ್ಯವಾಯಿತು. ಆರ್ಸಿಬಿ ತಂಡದ ಪರ ಬೋಲರ್ಗಳಾದ ರಸಿಖ್ ಸಲಾಂ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಜೋಶ್ ಹೇಜಲ್ವುಡ್ ತಲಾ 2 ವಿಕೆಟ್ ಕಬಳಿಸಿ ಗುಜರಾತ್ ಬ್ಯಾಟಿಂಗ್ಗೆ ಕಡಿವಾಣ ಹಾಕಿದರು.
ಗುಜರಾತ್ನ ಟೈಟಾನ್ಸ್ನ 156 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರಾರಂಭಿಸಿ ವೆಂಕಟೇಶ್ ಅಯ್ಯರ್ ಅವರ ವೇಗದ 32 ರನ್ಗಳು ತಂಡಕ್ಕೆ ಉತ್ತಮ ಅಡಿಪಾಯ ಒದಗಿಸಿತು. ನಂತರ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಅನುಭವದ ಬ್ಯಾಂಟಿಂಗ್ ಮೂಲಕ ಕೇವಲ 25 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಪಂದ್ಯದ ದಿಕ್ಕನ್ನೇ ಬದಲಾಯಿಸಿ 9 ಬೌಂಡರಿ ಹಾಗೂ ೩ ಸಿಕ್ಸರ್ಗಳ ನೆರವಿನಿಂದ 75೧೮ನೇ ಓವರ್ನಲ್ಲೇ ಗುರಿ ತಲುಪಿದ ಆರ್ಸಿಬಿ ೫ ವಿಕೆಟ್ಗಳ ಜಯ ದಾಖಲಿಸಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿ ವಿರಾಟ್ ಕೊಹ್ಲಿ ಕೊರಳಿಗೆ ಬಿತ್ತು. ಈ ಐಪಿಎಲ್ ೨೦೨೬ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಗುಜರಾತ್ ಟೈಟನ್ಸ್ ವಿರುದ್ಧ ೫ ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲೈಜ್ ಪಂದ್ಯದಲ್ಲಿ ಆರ್ಸಿಬಿ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ತುರ್ತು ಕ್ರಿಕೆಟ್ ಐಪಿಎಲ್ನಲ್ಲಿ ತನ್ನ ಪಾರಮ್ಯವನ್ನು ಕಾಯ್ದಿರಿಸಿಕೊಂಡಿತು. ಈ ಜಯದೊಂದಿಗೆ ಆರ್ಸಿಬಿ ತನ್ನ ಐಪಿಎಲ್ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆ ಇರದಂತಾಗಿ ಇಡೀ ರಾತ್ರಿ ದೇಶ ಮತ್ತು ಕರ್ನಾಟಕದ ಎಲ್ಲೆಲ್ಲೂ ಸಂಭ್ರಮಾಚರಣೆಯೊಂದಿಗೆ ಅಭಿಮಾನಿಗಳು ಕುಣಿದಾಡಿದರು. ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿರುವುದು ತಂಡದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವಾಗಿ ದಾಖಲಿಸಿದಂತಾಗಿದೆ. ಈ ದಾಖಲೆ ಇಲ್ಲಿಯವರೆಗೆ ಚೆನ್ನೆೈ ಮತ್ತು ಮುಂಬೈ ತಂಡಗಳು ಮಾತ್ರ ಸಾಧಿಸಿದ್ದರು. ರನ್ ಭಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
18ನೇ ಓವರ್ನಲ್ಲೇ ಗುರಿ ತಲುಪಿದ ಆರ್ಸಿಬಿ 5 ವಿಕೆಟ್ಗಳ ಜಯ ದಾಖಲಿಸಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿ ವಿರಾಟ್ ಕೊಹ್ಲಿ ಕೊರಳಿಗೆ ಬಿತ್ತು. ಈ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲೈಜ್ ಪಂದ್ಯದಲ್ಲಿ ಆರ್ಸಿಬಿ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ತುರ್ತು ಕ್ರಿಕೆಟ್ ಐಪಿಎಲ್ನಲ್ಲಿ ತನ್ನ ಪಾರಮ್ಯವನ್ನು ಕಾಯ್ದಿರಿಸಿಕೊಂಡಿತು. ಈ ಜಯದೊಂದಿಗೆ ಆರ್ಸಿಬಿ ತನ್ನ ಐಪಿಎಲ್ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆ ಇರದಂತಾಗಿ ಇಡೀ ರಾತ್ರಿ ದೇಶ ಮತ್ತು ಕರ್ನಾಟಕದ ಎಲ್ಲೆಲ್ಲೂ ಸಂಭ್ರಮಾಚರಣೆಯೊಂದಿಗೆ ಅಭಿಮಾನಿಗಳು ಕುಣಿದಾಡಿದರು. ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿರುವುದು ತಂಡದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವಾಗಿ ದಾಖಲಿಸಿದಂತಾಗಿದೆ. ಈ ದಾಖಲೆ ಇಲ್ಲಿಯವರೆಗೆ ಚೆನ್ನೆೈ ಮತ್ತು ಮುಂಬೈ ತಂಡಗಳು ಮಾತ್ರ ಸಾಧಿಸಿದ್ದರು.
