ಹೈದರಾಬಾದ್ನ ಪ್ರಸಿದ್ಧ ಬಿರಿಯಾನಿ ರೆಸ್ಟೋರೆಂಟ್ಗಳು ಆದಾಯ ತೆರಿಗೆ ಇಲಾಖೆಯ ತನಿಖೆಯ ಕೇಂದ್ರಬಿಂದುವಾಗಿ, ದೇಶವ್ಯಾಪಿ ಭಾರೀ ತೆರಿಗೆ ತಪ್ಪಿಸುವ ಜಾಲವನ್ನು ಬಹಿರಂಗಪಡಿಸಿವೆ. ಹೈದರಾಬಾದ್ನಲ್ಲಿ ಕೆಲವು ಬಿರಿಯಾನಿ ಜಂಟಿಗಳ ಹಣಕಾಸು ಲೆಕ್ಕಗಳಲ್ಲಿ ಕಂಡುಬಂದ ಅನುಮಾನಾಸ್ಪದ ವ್ಯತ್ಯಾಸಗಳು ಆದಾಯ ತೆರಿಗೆ ಇಲಾಖೆಯ ಗಮನ ಸೆಳೆದವು. ತನಿಖೆಯನ್ನು ವಿಸ್ತರಿಸಿದಾಗ, ದೇಶಾದ್ಯಾಂತ ಬಳಸಲಾಗುತ್ತಿದ್ದ ಒಂದು ಸಾಮಾನ್ಯ ರೆಸ್ಟೋರೆಂಟ್ ಬಿಲ್ಲಿಂಗ್ ಸಾಫ್ಟ್ವೇರ್ ಮೂಲಕ ಸುಮಾರು 1.77 ಲಕ್ಷ ರೆಸ್ಟೋರೆಂಟ್ಗಳು ತಮ್ಮ ಮಾರಾಟದ ಮಾಹಿತಿಯನ್ನು ದಾಖಲಿಸುತ್ತಿದ್ದವು ಎಂಬುದು ಪತ್ತೆಯಾಯಿತು. ಈ ಪ್ಲಾಟ್ಫಾರ್ಮ್ನಲ್ಲಿ ಸುಮಾರು 60 ಟೆರೆಬೈಟ್ಗಳಷ್ಟು ಬಿಲ್ಲಿಂಗ್ ಡೇಟಾ ಸಂಗ್ರಹವಾಗಿದ್ದು, ಇದರ ಒಟ್ಟು ಮೌಲ್ಯ ಲಕ್ಷಾಂತರ ಕೋಟಿ ರೂಪಾಯಿಗಳಷ್ಟಿತ್ತು.
ತನಿಖೆಯಲ್ಲಿ ಅನೇಕ ರೆಸ್ಟೋರೆಂಟ್ಗಳು ನಿಜವಾದ ಮಾರಾಟದ ಬಿಲ್ಲುಗಳನ್ನು ಮೊದಲಿಗೆ ರಚಿಸಿ, ನಂತರ ಅವುಗಳನ್ನು ಅಳಿಸುವುದು ಅಥವಾ ಕಡಿಮೆ ಆದಾಯ ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದವು ಎಂಬುದು ಬೆಳಕಿಗೆ ಬಂದಿದೆ. ಕೆಲವು ಸಂದರ್ಭಗಳಲ್ಲಿ ದಿನದ ಅಥವಾ ತಿಂಗಳ ಸಂಪೂರ್ಣ ಬಿಲ್ಲಿಂಗ್ಗಳನ್ನು ವ್ಯವಸ್ಥಿತವಾಗಿ ಡಿಲೀಟ್ ಮಾಡಲಾಗುತ್ತಿತ್ತು. ಈ ರೀತಿಯ ಅಕ್ರಮಗಳಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ನಷ್ಟವಾಗುತ್ತಿತ್ತು. ಆದಾಯ ತೆರಿಗೆ ಇಲಾಖೆ ಈ ಅಪಾರ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಕೃತಕ ಬುದ್ಧಿಮತ್ತೆ ಮತ್ತು ಜನರೇಟಿವ್ ಎ ಐ ತಂತ್ರಜ್ಞಾನಗಳನ್ನು ಬಳಸಿದ್ದು, ವಿವಿಧ ರಾಜ್ಯಗಳಲ್ಲಿ ನಡೆದ ಅಸಮಾನ್ಯ ಮಾದರಿಗಳನ್ನು ಗುರುತಿಸಲು ಸಾಧ್ಯವಾಯಿತು.
ಈ ಪ್ರಕರಣವನ್ನು ಬಹಿರಂಗಗೊಳಿಸುವಲ್ಲಿ ತಂತ್ರಜ್ಞಾನದ ಪಾತ್ರವೂ ಗಮನಾರ್ಹವಾಗಿದೆ. ಸುಮಾರು ೬೦ ಟೆರಾಬೈಟ್ ಡೇಟಾವನ್ನು ವಿಶ್ಲೇಷಿಸಿ, ಲಕ್ಷಾಂತರ ವ್ಯವಹಾರ ದಾಖಲೆಗಳನ್ನು ಪರಿಶೀಲಿಸಿ, ಕೃತಕ ಬುದ್ಧಿಮತ್ತೆ ಮೂಲಕ ಅಸಾಮಾನ್ಯ ಮಾದರಿಗಳನ್ನು ಗುರುತಿಸಲಾಗಿದೆ. ಇದರಿಂದ ಸುಮಾರು ₹70000 ಕೋಟಿ ಮೌಲ್ಯದ ತೆರಿಗೆ ಮನ್ನಾ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ದೇಶದ ಆಹಾರ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣದ ಅಗತ್ಯವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಸರ್ಕಾರ ಈಗ ಡಿಜಿಟಲ್ ಬಿಲ್ಲಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಮತ್ತು ಸಾಫ್ಟ್ವೇರ್ ದುರುಪಯೋಗವನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಎ ಐ ಆಧಾರಿತ ವಿಶ್ಲೇಷಣೆಯ ಮೂಲಕ, ದೇಶಾದ್ಯಾಂತ ಸುಮಾರು ರೂ.70000 ಕೋಟಿ ಮೊತ್ತದ ತೆರಿಗೆ ತಪ್ಪಿಸುವ ಪ್ರಕರಣಗಳು ನಡೆದಿರುವುದಾಗಿ ಅಂದಾಜಿಸಲಾಗಿದೆ. ಈ ಅಕ್ರಮ ಬಹಿರಂಗವಾದ ನಂತರ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರದಲ್ಲಿ ಪಾರದರ್ಶಕತೆ ಕೊರತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸಿದ್ದು, ಮುಂದಿನ ದಿನಗಳಲ್ಲಿ ರೆಸ್ಟೋರೆಂಟ್ಗಳ ಡಿಜಿಟಲ್ ಬಿಲ್ಲಿಂಗ್ ವ್ಯವಸ್ಥೆಗಳ ಮೇಲೆ ಸರ್ಕಾರ ಹೆಚ್ಚು ಕಟ್ಟುನಿಟ್ಟಿನ ನಿಗಾವಹಿಸುವ ಸಾಧ್ಯತೆ ಇದೆ. ಹೈದರಾಬಾದ್ ಬಿರಿಯಾನಿಯಿಂದ ಆರಂಭವಾದ ಈ ತನಿಖೆ, ತಂತ್ರಜ್ಞಾನ ಬಳಸಿ ದೊಡ್ಡ ಮಟ್ಟದ ಆರ್ಥಿಕ ಅಕ್ರಮಗಳನ್ನು ಹೇಗೆ ಪತ್ತೆಹಚ್ಚಬಹುದು ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿ ಪರಿಣಮಿಸಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಒಂದೇ ಸಮಯದಲ್ಲಿ ಎರಡು ಲೆಕ್ಕಪತ್ರ ವ್ಯವಸ್ಥೆ ಬಳಸುವ ಪದ್ಧತಿ. ಒಂದರಲ್ಲಿ ನಿಜವಾದ ಆದಾಯವನ್ನು ದಾಖಲಿಸಿ, ಮತ್ತೊಂದರಲ್ಲಿ ಸರ್ಕಾರಕ್ಕೆ ತೋರಿಸುವ ಆದಾಯವನ್ನು ಕಡಿಮೆ ಮಾಡುವುದು ಸಾಮಾನ್ಯವಾಗಿತ್ತು. ಇದರಿಂದ ಉSಖಿ ಮತ್ತು ಆದಾಯ ತೆರಿಗೆ ಎರಡರಲ್ಲೂ ದೊಡ್ಡ ಮಟ್ಟದ ಮನ್ನಾ ನಡೆದಿದೆ.
