ಮಧ್ಯಪ್ರಾಚ್ಯವು ಜಗತ್ತಿನ ಪ್ರಮುಖ ತೈಲ ಉತ್ಪಾದನಾ ಕೇಂದ್ರವಾಗಿದ್ದು, ವಿಶೇಷವಾಗಿ Strait of Hormuz ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ದಾರಿ ಆಗಿದೆ. ಇಲ್ಲಿ ಯುದ್ಧ ಅಥವಾ ನಿರ್ಬಂಧ ಉಂಟಾದಲ್ಲಿ ಇಡೀ ವಿಶ್ವಕ್ಕೆ ತೈಲ ಸರಬರಾಜು ವ್ಯತ್ಯಯಗೊಂಡು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಯುದ್ಧದ ಪರಿಣಾಮವಾಗಿ ಸಿರಿಯಾ, ಯೆಮನ್, ಲೆಬನಾನ್ ಮತ್ತು ಅರಬ್ ಎಮರೈಟ್ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಘರ್ಷ ತೀವ್ರಗೊಳ್ಳುವ ಭೀತಿ ಎದುರಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಸಂಪೂರ್ಣ ಯುದ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಇದಲ್ಲದೆ, ಹೋರ್ಮುಝ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಅಡ್ಡಿ ಉಂಟಾದಲ್ಲಿ ಜಾಗತಿಕ ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗಿ, ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ವಿಶ್ವ ಆರ್ಥಿಕತೆಯ ಮೇಲೆ ಹೊರೆ ಬೀಳಬಹುದು.
ಭಾರತದ ಮೇಲೂ ಇದರ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ತೈಲ ಆಮದು ವೆಚ್ಚ ಏರಿಕೆಯಾಗುವುದರಿಂದ ದರ ಏರಿಕೆ ಉಂಟಾಗಬಹುದು. ಜೊತೆಗೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆಯೂ ಪ್ರಶ್ನಾರ್ಥಕವಾಗಬಹುದು.
ಮಾರ್ಚ್ 28 ರಂದು ಪ್ರಾರಂಭವಾದ ಇಸ್ರೇಲ್ ಇರಾನ್ ಅಮೇರಿಕಾ ನಡುವಿನ ಸಂಘರ್ಷವು ಕ್ಷಿಪಣಿ ದಾಳಿಗಳ ಮೂಲಕ ಇರಾನಿನ ಹಲವಾರು ವಿಮಾನ ನಿಲ್ದಾಣಗಳು, ವಿಶ್ವವಿದ್ಯಾಲಯಗಳು ಮತ್ತು ನಾಗರೀಕ ಪ್ರದೇಶಗಳಿಗೆ ಅಪಾರ ನಷ್ಟವನ್ನುಂಟಾಗಿರುತ್ತದೆ.
ಇರಾನ್ನಲ್ಲಿ ಯುದ್ಧದ ಮೊದಲ ತಿಂಗಳಲ್ಲಿ ಇರಾನ್ ಭಾರೀ ಹಾನಿ ಅನುಭವಿಸಿದೆ. ಸುಮಾರು 1400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. 20000ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ, ಸಾವಿರಾರು ಮನೆಗಳು ಧ್ವಂಸವಾಗಿದ್ದು, ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳು, ಸಾರಿಗೆ ವ್ಯವಸ್ಥೆ ಮೇಲೆ ದಾಳಿಯಾಗಿರುತ್ತದೆ. ಅಣು ಮತ್ತು ಸೈನಿಕ ಕೇಂದ್ರಗಳು ಗುರಿಯಾಗಿದ್ದು, ಪ್ರಮುಖ ಮೂಲಸೌಕರ್ಯ ಕುಸಿದು ಬಿದ್ದಿದೆ. ಇದರಿಂದ ಇರಾನಿಗೆ $140 ಬಿಲಿಯನ್ಗಿಂತ ಹೆಚ್ಚು ಆರ್ಥಿಕ ನಷ್ಟವುಂಟಾಗಿರುತ್ತದೆಂದು ಅಂದಾಜು ಮಾಡಲಾಗಿರುತ್ತದೆ.
ಏಪ್ರಿಲ್ ಆರಂಭದಲ್ಲಿ ನಡೆದ ವಾಯುದಾಳಿಯಲ್ಲಿ ಒಂದು ಪ್ರಮುಖ ವಿಶ್ವವಿದ್ಯಾಲಯದ ಸಂಶೋಧನಾ ಕಟ್ಟಡ ಸಂಪೂರ್ಣ ಹಾನಿಗೊಳಗಾಯಿತು. ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ, ಇದರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. Al ಹಾಗೂ ವಿಜ್ಞಾನ ಸಂಶೋಧನಾ ಕೇಂದ್ರಗಳು ಧ್ವಂಸಗೊಂಡಿವೆ. ಯುದ್ಧ ಆರಂಭವಾದ ಬಳಿಕ ೩೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಹಾನಿಗೊಳಗಾಗಿವೆ.
ಇಸ್ರೇಲ್ನಲ್ಲಿ ಇರಾನ್ ಪ್ರತಿದಾಳಿಗಳಿಂದ ಇಸ್ರೇಲ್ ಕೂಡ ಹೊಡೆತ ಅನುಭವಿಸಿದೆ. ಸುಮಾರು ಒಂದೇ ಕ್ಷಿಪಣಿ ದಾಳಿಯಲ್ಲಿ ಸುಮಾರು ೪೦ ಜನರು ಮೃತಪಟ್ಟಿದ್ದಾರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಟೆಲ್ ಅವಿವ್ ಸೇರಿದಂತೆ ಹಲವು ನಗರಗಳಲ್ಲಿನ ವಸತಿ ಪ್ರದೇಶಗಳಿಗೆ ನೇರ ಕ್ಷಿಪಣಿ ದಾಳಿಯಿಂದ ಸಾರ್ವಜನಿಕರು ನಿರಂತರವಾಗಿ ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಯುದ್ಧವು ಇಸ್ರೇಲ್ ಸರ್ಕಾರಕ್ಕೆ $11 ಬಿಲಿಯನ್ಗಿಂತ ಹೆಚ್ಚು ಆರ್ಥಿಕ ನಷ್ಟವುಂಟು ಮಾಡಿರುತ್ತದೆ ಎಂದು ಅಂದಾಜು ಮಾಡಲಾಗಿರುತ್ತದೆ.
ಈ ಮಧ್ಯೆ 2015ರ ನಂತರ ಮೊದಲ ಬಾರಿಗೆ ಏಪ್ರಿಲ್ 10 ರಂದು ಅಮೆರಿಕಾ ಮತ್ತು ಇರಾನ್ ನಡುವಿನ ಬಹು ನಿರೀಕ್ಷಿತ ಶಾಂತಿ ಮಾತುಕತೆಗಳು ಪ್ರಾರಂಭವಾದರೂ ಸುಮಾರು 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಉನ್ನತ ಮಟ್ಟದ ಚರ್ಚೆಗಳು ನಿರ್ಣಾಯಕ ಫಲಿತಾಂಶಕ್ಕೆ ತಲುಪದೆ ಮುಕ್ತಾಯಗೊಂಡಿದ್ದು ಮಾತುಕತೆ ವಿಫಲವಾಗಲು ಪ್ರಮುಖ ಕಾರಣಗಳಾಗಿ ಇರಾನ್ನ ಅಣು ಕಾರ್ಯಕ್ರಮ, ಅಮೆರಿಕಾ ವಿಧಿಸಿರುವ ಆರ್ಥಿಕ ನಿರ್ಬಂಧಗಳು ಹಾಗೂ ಹೋರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣದ ಪ್ರಶ್ನೆಗಳು ಕಂಡುಬಂದಿವೆ.
ಅಮೆರಿಕಾ, ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರೆ, ಇರಾನ್ ತನ್ನ ಅಣು ಯೋಜನೆ ಶಾಂತಿಯುತ ಉದ್ದೇಶಕ್ಕಾಗಿ ಮಾತ್ರವೆಯೆಂದು ಸ್ಪಷ್ಟಪಡಿಸಿದೆ. ಜೊತೆಗೆ, ಆರ್ಥಿಕ ನಿರ್ಬಂಧಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಇರಾನ್ ಒತ್ತಾಯಿಸಿದೆ.
ಯಾವುದೇ ಅಂತಿಮ ಒಪ್ಪಂದವಿಲ್ಲದೆ ಕೊನೆಗೊಂಡಿರುತ್ತದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಒಪ್ಪಂದ ಮುರಿದುಬಿದ್ದ ಪ್ರಯುಕ್ತ ಯುದ್ಧ ಉದ್ವಿಗ್ನತೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಾತುಕತೆ ವಿಫಲವಾದ ಬೆನ್ನಲ್ಲೇ ಅಮೆರಿಕಾ ಕಠಿಣ ನಿಲುವು ತಾಳುವ ಸೂಚನೆ ನೀಡಿದ್ದು, ಹೋರ್ಮುಝ್ ಜಲಸಂಧಿಯಲ್ಲಿ ನಿರ್ಬಂಧ ಹೇರಲು ಸಾಧ್ಯತೆ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತೀವ್ರ ಪ್ರತಿಕ್ರಿಯೆ ನೀಡುವ ಎಚ್ಚರಿಕೆ ನೀಡಿದೆ.
ಈ ಬೆಳವಣಿಗೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ತೈಲದ ಬೆಲೆ ಏರಿಕೆ ಕಂಡಿದೆ. ಜೊತೆಗೆ, ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಅಲ್ಲೋಲಕಲ್ಲೋಲವಾಗಿ ಷೇರು ಬೆಲೆಗಳಲ್ಲಿ ಭಾರಿ ಕುಸಿತ ದಾಖಲಾಗಿದೆ.
