AN IRANIAN AIRPLANE HIJACKED BY A STEWARD STANDING ON THE TARMAC IN UVDA AIR BASE IN THE NEGEV WHERE IT MADE A FORCED LANDING. îèåñ àéøàðé àùø ðçèó òì éãé ãééì äîèåñ, àåìõ ìðçåú áùãä äúòåôä äöáàé áòåáãä áðâá.
ಆಕಾಶದಲ್ಲೂ ಕಣ್ಮಾವಲೆ: ಇಸ್ರೇಲ್ನ ವೈಮಾನಿಕ ಭದ್ರತೆಯ ಅಗೋಚರ ಕವಚ. ದುಬೈ-ಟೆಲ್ ಅವಿವ್ FZ1073 ಫ್ಲೈಟ್ ಮತ್ತು ಮುನ್ನೆಲೆಗೆ ತಂದ ಇಸ್ರೇಲ್ ಏರ್ ಮಾರ್ಷಲ್ ವ್ಯವಸ್ಥೆ
ವಿಮಾನಯಾನದಲ್ಲಿ ಕೆಲವು ಕ್ಷಣಗಳು ಇಡೀ ಬದುಕಿನ ದಿಕ್ಕನ್ನೇ ಬದಲಿಸಬಲ್ಲವು. 2026ರ ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವಿವ್ಗೆ ಹೊರಟಿದ್ದ ಫ್ಲೈಟ್ FZ1073 ವಿಮಾನನದಲ್ಲಿ ನಡೆದ ಘಟನೆ ಅಂತಹದ್ದೇ.
174 ಜನರಿಂದ ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕಾಕ್ಪಿಟ್ನಲ್ಲಿ ಹಿಂಸಾತ್ಮಕ ಘಟನೆ ಸಂಭವಿಸಿತು. ವರದಿಗಳ ಪ್ರಕಾರ, ಸಹ-ಪೈಲಟ್ ಹಮಾಸ್ ಕ್ಯಾಪ್ಟನ್ ಸೀಟ್ ಮುಚ್ಚರ್ ಮೇಲೆ ದಾಳಿ ನಡೆಸಿದರು. ವಿಮಾನ ತೀವ್ರವಾಗಿ ಎತ್ತರ ಕೆಳಗಿಳಿಯಿತು. ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಡಿಗಳಷ್ಟು ಕುಸಿದ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತುರ್ತು ಪರಿಸ್ಥಿತಿಯ 7700 ಹಾಗು ನಂತರ ಅಕ್ರಮ ಹಸ್ತಕ್ಷೇಪ ಸೂಚಿಸುವ 7500 ಕೋಡ್ಗಳನ್ನು ವಿಮಾನ ಪ್ರಸಾರ ಮಾಡಿತು. ಗಾಯಗೊಂಡಿದ್ದರೂ ಕ್ಯಾಪ್ಟನ್ ಕಾಕ್ಪಿಟ್ ಬಾಗಿಲು ತೆರೆಯಲು ಸಾಧ್ಯವಾಯಿತು. ನಂತರ ಪ್ರಯಾಣಿಕರು ಮತ್ತು ಸಿಬ್ಬಂದಿ ಒತ್ತಡಕ್ಕೆ ದಾಳಿಕೋರನನ್ನು ನಿಯಂತ್ರಿಸಿದರು. ವಿಮಾನದಲ್ಲಿದ್ದ ಇತರ ಪೈಲಟ್ಗಳು ನಿಯಂತ್ರಣ ಪಡೆದು ಸೌದಿ ಅರೇಬಿಯಾದ ಟಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದರು.
ಈ ಘಟನೆಯ ಅತ್ಯಂತ ಮಹತ್ವದ ಅಂಶವೆಂದರೆ-ಇದು ಸಾಮಾನ್ಯ ವಿಮಾನ ಭದ್ರತೆಯ ಮಿತಿಗಳನ್ನು ಮೀರಿತ್ತು. ವಿಶೇಷವಾಗಿ ಇಸ್ರೇಲ್ ದಶಕಗಳಿಂದ ಹಳೆಯ ವೈಮಾನಿಕ ಭದ್ರತಾ ವ್ಯವಸ್ಥೆಯ ಬಗ್ಗೆ ವಿಶ್ವದ ಗಮನ ಸೆಳೆದಿದೆ. ಇಸ್ರೇಲ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಇತ್ತ A1 ಅಥವಾ ದಶಕಗಳಿಂದ ಅತ್ಯಂತ ಕಠಿಣ ಭದ್ರತಾ ಕ್ರಮಗಳಿಗೆ ಹೆಸರುವಾಸಿಯಾಗಿದೆ. ಅದರ ಪ್ರಮುಖ ಅಂಶಗಳಲ್ಲಿ ಒಂದೆಂದರೆ ಪ್ರಯಾಣಿಕರ ನಡುವೆ ಸಾಮಾನ್ಯ ನಾಗರಿಕರಂತೆ ಕುಳಿತುಕೊಳ್ಳುವ ಸಶಸ್ತ್ರ ಏರ್ ಮಾರ್ಷಲ್ಗಳು.
ಐತಿಹಾಸಿಕ ದಾಖಲೆಗಳ ಪ್ರಕಾರ, ಇಂತಹ ಏರ್ ಮಾರ್ಷಲ್ಗಳ ವ್ಯವಸ್ಥೆಗೆ Shin Bet—Israel Security Agency-ನೇರ ಸಂಬಂಧವಿತ್ತು. 1970ರ ದಶಕದ ಒಂದು ಘಟನೆಯ ಕುರಿತು ದಾಖಲೆಗಳಲ್ಲಿ ಇಬ್ಬರು Shin Bet air marshals ವಿಮಾನದಲ್ಲಿ ಪ್ರಯಾಣಿಸಿದ್ದರ ಬಗ್ಗೆ ಉಲ್ಲೇಖವಿದೆ. 2001ರ CNN ವರದಿಯಲ್ಲಿಯೂ ಪ್ರತಿ ಅಂತಾರಾಷ್ಟ್ರೀಯ El Al ವಿಮಾನದಲ್ಲೂ ಕನಿಷ್ಠ ಇಬ್ಬರು plain-clothes air marshals ಪ್ರಯಾಣಿಕರ ನಡುವೆ ಕುಳಿತುಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಅವರ ಕರ್ತವ್ಯ ಕಾಕ್ಪಿಟ್ ನಿಯಂತ್ರಿಸುವುದಲ್ಲ; ವಿಮಾನದ ಪ್ರಯಾಣಿಕರ ವಿಭಾಗದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಕ್ಷಣ ನಿಯಂತ್ರಿಸುವುದಾಗಿದೆ. ಇದು ಕೇವಲ ಬಂದೂಕು ಹಿಡಿದ ಭದ್ರತಾ ಸಿಬ್ಬಂದಿಯನ್ನು ವಿಮಾನದಲ್ಲಿ ಕೂರಿಸುವ ವ್ಯವಸ್ಥೆಯಲ್ಲ. ಪ್ರಯಾಣಿಕರ ವರ್ತನೆ ಗಮನಿಸುವುದು, ಅನುಮಾನಾಸ್ಪದ ಚಲನವಲನಗಳನ್ನು ಗುರುತಿಸುವುದು, ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸುವುದು ಮತ್ತು ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸುವುದು-ಇವೆಲ್ಲ ಅದರ ಭಾಗ.
1970ರ ಸೆಪ್ಟೆಂಬರ್ನಲ್ಲಿ PFLP ಹಲವು ವಿಮಾನ ಅಪಹರಣಗಳನ್ನು ನಡೆಸಿತು. ಅವುಗಳಲ್ಲಿ El Al Flight 219 ಮೇಲಿನ ಅಪಹರಣ ಯತ್ನವೂ ಸೇರಿತ್ತು. ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಭದ್ರತಾ ವ್ಯವಸ್ಥೆಯ ಪ್ರತಿರೋಧದಿಂದ ಆ ಯತ್ನ ವಿಫಲವಾಯಿತು. ಇಂತಹ ಘಟನೆಗಳ ನಂತರ ಇಸ್ರೇಲ್ ವಿಮಾನ ಭದ್ರತೆಯನ್ನು ಕೇವಲ ವಿಮಾನ ನಿಲ್ದಾಣದ ತಪಾಸಣೆಗೆ ಸೀಮಿತಗೊಳಿಸದೆ, ವಿಮಾನ ಗಗನಕ್ಕೇರಿದ ನಂತರವೂ ಮುಂದುವರಿಯುವ ಭದ್ರತಾ ಪದರವಾಗಿ ರೂಪಿಸಿತು.
ಮಾಜಿ Shin Bet ಮುಖ್ಯಸ್ಥ ಅವಿ ಡಿಚ್ಟರ್ ಅವರು 2005ರಲ್ಲಿ ನೀಡಿದ Brookings Institution ಭಾಷಣದಲ್ಲಿ ಇಸ್ರೇಲಿನ ವೈಮಾನಿಕ ಭದ್ರತೆಯನ್ನು ಹಲವು ಪದರಗಳ ವ್ಯವಸ್ಥೆಯಾಗಿ ವಿವರಿಸಿದ್ದರು. ಗುಪ್ತಚರ ಮಾಹಿತಿ ವಿಶ್ಲೇಷಣೆಯಾದರೂ, ನೆಲಮಟ್ಟದ ಭದ್ರತಾ ವ್ಯವಸ್ಥೆ ಮತ್ತೊಂದು ರಕ್ಷಣಾ ಪದರ; ವಿಮಾನ ಗಗನಕ್ಕೇರಿದ ನಂತರದ ಅಪಾಯಕ್ಕೆ ಏರ್ ಮಾರ್ಷಲ್ಗಳು ಮತ್ತೊಂದು ಪದರ ಎಂದು ಅವರು ವಿವರಿಸಿದ್ದರು.
ಆದರೆ FZ1073 ಘಟನೆಯನ್ನು ನೇರವಾಗಿ “ಟ್ರೇನ್ ಬೆಚ್ ಏರ್ ಮಾರ್ಷಲ್ಗಳು ವಿಮಾನವನ್ನು ರಕ್ಷಿಸಿದರು” ಎಂದು ಹೇಳುವುದು ಈಗಿನ ಲಭ್ಯ ಮಾಹಿತಿಯ ಆಧಾರದ ಮೇಲೆ ಸರಿಯಲ್ಲ. ಇಗಿನ ಲಭ್ಯ ಮಾಹಿತಿಯ ಆಧಾರದ ಮೇಲೆ ಸರಿಯಲ್ಲ.
Reuters ಮತ್ತು ಇತರ ವರದಿಗಳ ಪ್ರಕಾರ, ಕ್ಯಾಬಿನ್ ಮ್ಯಾನೇಜರ್ ಅವರ ಧೈರ್ಯ, ಕಾಕ್ಪಿಟ್ ಬಾಗಿಲು ತೆರೆಯುವ ನಿರ್ಧಾರ, ಪ್ರಯಾಣಿಕರ ಮತ್ತು ಸಿಬ್ಬಂದಿಯ ಮಧ್ಯಪ್ರವೇಶ ಹಾಗೂ ವಿಮಾನದಲ್ಲಿದ್ದ ಇತರ ಪ್ರೋಟೋಕಾಲ್ಗಳ ಕಾರಣದಿಂದ ದೊಡ್ಡ ದುರಂತ ತಪ್ಪಿತು.
ವಿಮಾನಯಾನ ಭದ್ರತೆಯ ಭದ್ರತಾ ನಿಯಮದ ಪ್ರಕಾರ, ಕೇವಲ ಗೋಚರಿಸುವ ಸಿಬ್ಬಂದಿಗಳಲ್ಲಿ ಇರುವುದಿಲ್ಲ. ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸುವ ಮೊದಲು ನಡೆಯುವ ಪರಿಶೀಲನೆ, ಸಿಬ್ಬಂದಿಯ ಹಿನ್ನಲೆ ಪರಿಶೀಲನೆ, ಕಾಕ್ಪಿಟ್ ರಕ್ಷಣಾ ವ್ಯವಸ್ಥೆ, ಗುಪ್ತ ಭದ್ರತಾ ಸಿಬ್ಬಂದಿ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳುವ ನಿರ್ಧಾರ-ಇವೆಲ್ಲ ಸೇರಿ ಒಂದು ರಕ್ಷಣಾ ಕವಚ ನಿರ್ಮಿಸುತ್ತವೆ. ಸೆಪ್ಟೆಂಬರ್ 30ರ FZ1073 ಘಟನೆಯ 174 ಇಸ್ರೇಲ್ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದು, ಮುಂದಿನ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಮತ್ತೊಮ್ಮೆ ಜಗತ್ತಿಗೆ ತೋರಿದೆ.
