July 18, 2026

ನಮ್ಮ ಬಗ್ಗೆ

ವಿಶಾಲ ಕರ್ನಾಟಕದ ಕನ್ನಡದ ಓದುಗರ ಅಭಿಮಾನಿಗಳಲ್ಲಿ ವಿನಂತಿಯ ಬಿನ್ನಹ

“ಈ ಬೆಂಗಳೂರ ಬೆರಗು” ಒಂದು ಹೊಸ ಡಿಜಿಟಲ್ ಯುಗದ ವೆಬ್ ಸುದ್ದಿ ಪೋರ್ಟಲ್ ಪ್ರಾರಂಭಿಸುತ್ತಿದ್ದೇವೆ. ಸ್ವತಂತ್ರ ಮತ್ತು ಮಾಧ್ಯಮಿಕ ಸುದ್ದಿಗಳನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. ಸುದ್ದಿ, ವಿಶೇಷ ವರದಿ, ವಿಶ್ಲೇಷಣೆ ಮತ್ತು ಹಲವು ತನಿಖಾ ವರದಿಗಳು ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಕೇಂದ್ರಿಕರಿಸುವ ಗುರಿ ಹೊಂದಿರುತ್ತದೆ. ಮತ್ತು ನಮ್ಮ ವೆಬ್ ಪೋರ್ಟಲ್‌ನ ವಿಶೇಷತೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ರಾಜಧಾನಿಯಿಂದ ಇತರ ನಗರಗಳ ಸುದ್ದಿಗಳನ್ನು ನೀಡುವ ಯೋಜನೆಗಳಿವೆ. ನಮ್ಮ ಆದ್ಯತೆ ವಿಷಯಗಳು ಮತ್ತು ತಂತ್ರಜ್ಞಾನ ವಾಣಿಜ್ಯ, ವನ್ಯಜೀವಿ, ಪರಿಸರ, ವಿಜ್ಞಾನ, ನಗರ, ಮೂಲಭೂತ ಸೌಕರ್ಯ ಸವಾಲುಗಳು, ಕೃಷಿ, ಹೂಡಿಕೆ ಮತ್ತು ಇತರ ಕ್ಷೇತ್ರಗಳ ವಿಷಯ ವ್ಯಾಪ್ತಿ ಒಳಗೊಂಡಿರುತ್ತದೆ.
ಇದೆಲ್ಲವೂ ನಾವು ಎಷ್ಟು ಸುದ್ಧಿಗಳನ್ನು ನೀಡಿದ್ದೀವಿ ಎಂಬುದು ಮುಖ್ಯವಲ್ಲ. ಆದರೆ ನಾವು ಜನರನ್ನು ತಲುಪುವ ವಾಸ್ತವವೂ ಮತ್ತು ನಿಖರತೆಯೊಂದಿಗೆ ಗುಣಮಟ್ಟ ಮತ್ತು ಸೃಜನಶೀಲತೆಯು ಮುಖ್ಯವಾಗಿರುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಓದುಗರು ನಿಖರ ಮಾಹಿತಿಗಳನ್ನು ಒದಗಿಸುವ “ಈ ಬೆಂಗಳೂರು ಬೆರಗು” ಎಂಬ ಹೊಸ ಮಾಧ್ಯಮದ ಮೂಲಕ ನಿಮ್ಮೆಲ್ಲರಿಗೂ ಸ್ವಾಗತ ಕೋರುತ್ತೇವೆ.
ಈ ಸಮಕಾಲಿನ ಮಾಧ್ಯಮ ಪ್ರಪಂಚದಲ್ಲಿ ಮುಕ್ಕಾಲು ಪಾಲು ಟ್ಯಾಬ್‌ಲ್ಯಾಡ್‌ಗಳಲ್ಲಿ ಸಂಚಲನಾತ್ಮಕ ಸುದ್ಧಿಗೆ ಕೊಲೆ, ರಾಜಕೀಯ ವೈಷಮ್ಯ, ಹೊಡೆಬಡೆದಾಟಗಳ ಧಾಟಿಯಲ್ಲಿ ಬರಹ, ವಿಡಿಯೋ ಮತ್ತು ಲೇಖನಗಳಿಗೆ ಆದ್ಯತೆ ನೀಡಿ ರಂಗುರಂಗಾದ ವಿಷಯಗಳನ್ನು ಪ್ರಚುರಪಡಿಸುವ ಮಾಧ್ಯಮದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಮಾರುಕಟ್ಟೆ ಗಮನ ಸೆಳೆಯಲು ಟಿಆರ್‌ಪಿ ಸುದ್ಧಿಗಳು ಬಿಕರಿಯಾಗುತ್ತಿದೆ. ಇದಕ್ಕೆ ಭಿನ್ನವಾಗಿ ನಮ್ಮ ಇ-ಬೆಂಗಳೂರು ಬೆರಗು ಸೃಜನಶೀಲತೆ, ರಚನಾತ್ಮಕ ಮತ್ತು ಕೌಟುಂಬಿಕ ಮೆಚ್ಚುವ ಸುದ್ಧಿ ಸಮಾಚಾರಗಳನ್ನು ಬಿತ್ತರಿಸಲು ಮತ್ತು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಆದ್ಯತೆಯು ಪ್ರಕೃತಿ, ಪ್ರೇಮ, ಸಾಹಿತ್ಯ, ಸಂಗೀತ, ಸಂಬಂಧಿಸಿದ ಲೇಖನ ಮತ್ತು ಚಿತ್ರಗಳಿಗೆ ಆದ್ಯತೆ ನೀಡಿ ಪ್ರಚಾರ ಮಾಡಲು ಪ್ರಯತ್ನಿಸುತ್ತೇವೆ. ಈ ಪ್ರಯತ್ನಕ್ಕೆ ಸುವಿಶಾಲ ಬೆಂಗಳೂರು, ರಾಷ್ಟ್ರೀಯ ಅಂತರರಾಷ್ಟ್ರೀಯ ಕನ್ನಡ ಓದುಗರು ಮತ್ತು ವೀಕ್ಷಕರು ಆಶೀರ್ವದಿಸಿ ಸದಾ ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸಿ, ಅಭಿನಂದಿಸಿ ಬೆಳೆಯಲು ಅನುವು ಮಾಡಿಕೊಡಬೇಕೆಂದು ತಮ್ಮೆಲ್ಲರನ್ನೂ ಕೋರುತ್ತಿದ್ದೇವೆ.
ಈ ಪ್ರಯತ್ನ ನಿಮ್ಮೆಲ್ಲರ ಸಹಕಾರದಿಂದ ಬೆಳೆಯಲಿ ಎನ್ನುವ ಆಶಯ. ಕನ್ನಡ ಮಾಧ್ಯಮ ಮತ್ತು ಓದುಗರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಹಾಗೂ ಆಶೀರ್ವಾದಗಳ ಸದಾ ನಮ್ಮ ಮೇಲಿರಲಿ ಎಂದು ಬಯಸುತ್ತಾ, ಕನ್ನಡ ಮಾಧ್ಯಮದ ಮೂಲಕ ಸುದ್ದಿ ವಾಹಿನಿಗಳಲ್ಲಿ ನಾವು ನೀಡುವ ಎಲ್ಲ ರೀತಿಯ ಪ್ರಚಾರಗಳಿಂದ ನಾವು ಕಟ್ಟುನಿಟ್ಟಾಗಿ ದೂರವಿರುತ್ತೀವಿ. ನಮ್ಮ ಮುಖ್ಯ ಗಮನವು ಸಾರ್ವಜನಿಕ ಹಿತಾಸಕ್ತಿ ಮತ್ತು ಜನರ ದೈನಂದಿನ ಜೀವನದ ಮೇಲೆ ಅಡ್ಡಪರಿಣಾಮ ಬೀರದ ಸುದ್ಧಿ ಸಮಾಚಾರಗಳನ್ನು ಸಮಗ್ರ ರೀತಿಯಲ್ಲಿ ನಮ್ಮ ಓದುಗ ವೀಕ್ಷಕರಿಗೆ ಸಂತೋಷ ಮತ್ತು ಜ್ಞಾನ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಪ್ರಸ್ತುತ ಪಡಿಸುವುದೇ ನಮ್ಮ ಮುಖ್ಯ ಗುರಿ.