ಸುಮಾರು ನಾಲ್ಕು ದಶಕಗಳ ಹಿಂದೆ ಕೇರಳದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಕಮಲ್ ಹಾಸನ್ ಮತ್ತು ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಒಟ್ಟಿಗೆ ಕುಳಿತು ಒಂದು ಚಿತ್ರದ ಬಗ್ಗೆ ಚರ್ಚಿಸುತ್ತಿದ್ದರು. ಅದು ಅವರು ಆಗ ಕೆಲಸ ಮಾಡುತ್ತಿದ್ದ ಪುಷ್ಪಕ ವಿಮಾನ ಚಿತ್ರವಲ್ಲ, ಮತ್ತೊಂದು ವಿಭಿನ್ನ ಚಿತ್ರದ ಬಗ್ಗೆ ಅದರಲ್ಲಿ ಪ್ರತಿಯೊಂದು ಸಂಭಾಷಣೆಯೂ ಹಾಡಿನ ರೂಪದಲ್ಲಿರಬೇಕೆಂದು ಅವರು ಯೋಚಿಸಿದರು. ಆ ಸಮಯದಲ್ಲಿ ಯಾರೂ ಆ ಚಿತ್ರವನ್ನು ನಿರ್ಮಿಸಲು ಮುಂದೆ ಬರಲಿಲ್ಲ. ಆದರೆ ಅವರು ಆ ಚಿತ್ರದ ಕಡೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. 45 ವರ್ಷಗಳ ನಂತರ, ಆ ಕನಸಿನ ಚಿತ್ರ ಸಿಂಗ್ ಗೀತಂ ಜೂನ್ 11 ರಂದು ಬಿಡುಗಡೆಯಾಗಿದೆ. ಈ ಚಿತ್ರವನ್ನು ೯೪ನೇ ವಯಸ್ಸಿನಲ್ಲಿ ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶಿಸಿದ್ದಾರೆ. ಚೆನ್ನೆೈನಲ್ಲಿ ನಡೆದ ಚಿತ್ರದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ಸಿಂಗೀತಂ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡರು. “ನಾವು ಮುಂಬೈನಲ್ಲಿ ಭೇಟಿಯಾದ ದಿನವೇ ನಮ್ಮ ಮೊದಲ ಸಿನಿಮಾ ಪ್ರಯಾಣ ಆರಂಭವಾಯಿತು. ಆ ದಿನ ನಾವು ಎರಡು ಚಿತ್ರಗಳ ಬಗ್ಗೆ, ಮಾತನಾಡಿದ್ದೇವೆ ಪುಷ್ಪಕ ವಿಮಾನ ಮತ್ತು ಸಿಂಗ್ ಗೀತಂ. ಆಗ ನನಗೆ 26 ವರ್ಷ ವಯಸ್ಸು. ಈಗ ನನಗೆ 71 ವರ್ಷ, ಮತ್ತು ಈ ಚಿತ್ರವನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ. ಕೆಲವು ಆಲೋಚನೆಗಳಿಗೆ ವಯಸ್ಸೇ ಇರುವುದಿಲ್ಲ. ಅದಕ್ಕೇ ಅವರು ಇಂದಿಗೂ ಹೊಸ ಹೊಸ ಆಲೋಚನೆಗಳಿಂದ ತುಂಬಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಅವರು ಜೀವನವನ್ನು ‘ಟೇಕ್ ಟು ಟೀಕ್ ಶ್ರೀ ಟೇಕ್ ಫೋರ್’ ಎಂಬಂತೆ ಮುಂದುವರಿಸುತ್ತಾರೆ.”
ಪುಷ್ಪಕ ವಿಮಾನ 1987ರಲ್ಲಿ ಬಿಡುಗಡೆಯಾದ ಈ ಚಿತ್ರದ ಬಗ್ಗೆ ಮಾತನಾಡುತ್ತಾ ಸಂಭಾಷಣೆಗಳಿಲ್ಲದ ಪುಷ್ಪಕ ವಿಮಾನ ಭಾರತೀಯ ಸಿನೆಮಾದ ಅತ್ಯಂತ ವಿಭಿನ್ನ ಪ್ರಯೋಗಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿತ್ತು. “ನಮಗೆ ಪುಷ್ಪಕ ವಿಮಾನ ಬಗ್ಗೆ ಅಪಾರ ಹೆಮ್ಮೆ ಇತ್ತು. ಐದು ನಕ್ಷತ್ರಗಳ ಹೋಟೆಲ್ನಲ್ಲಿ ಚಿತ್ರೀಕರಣ ನಡೆದ ಕಾರಣ. ಮೊದಲ ಬಾರಿಗೆ ಏರ್ಕಂಡೀಷನ್ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದೇವೆ, ಜನರು ಸಂಭಾಷಣೆಗಳಿಲ್ಲದ ಚಿತ್ರದ ಬಗ್ಗೆ, ಮೆಚ್ಚಿಕೊಂಡರೆ, ನಾವು ಎಸಿಯಲ್ಲಿ ಕೆಲಸ ಮಾಡಿದ ಖುಷಿಯು, ಇಮ್ಮಡಿ ಅನುಭವಿಸಬಹುದೆಂಬ ಲೆಕ್ಕಾಚಾರದಲ್ಲಿ ಇದ್ದೇವೆ. ಚಿತ್ರದ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಅವರು ಬೆಳಿಗ್ಗೆ ಹಲ್ಲು ತೊಳೆಯುತ್ತಾ ಚಿತ್ರದ ಸಂಭಾಷಣೆ ಅಭ್ಯಾಸ ಮಾಡುತ್ತಿದೆವು. ನಂತರ ಸ್ನಾನ ಮಾಡಿ, ಕೂದಲು ಸವರಿಕೊಂಡು ಒಂದು ಶಾಟ್ ಕೊಡುತ್ತಿದ್ದೆವು. ಇಡೀ ಸಿನಿಮಾ ಹೀಗೆಯೇ ಸಾಗಿತು. ಆ ದಿನಗಳನ್ನು ನಾನು ಇನ್ನೂ ಮಿಸ್ ಮಾಡುತ್ತೇನೆ.” ಸಿನೆಮಾದ ಉದ್ದೇಶದ ಬಗ್ಗೆ ವಿವರಿಸುತ್ತಾ ಸಿನೆಮಾ ಮೊದಲು ಒಂದು ಕಲೆ ಮತ್ತು ಆಸಕ್ತಿ (ಪ್ಯಾಷನ್), ನಂತರ ಅದು ವ್ಯವಹಾರವಾಗಬೇಕು ಎಂದು ಕಮಲ್ ಅಭಿಪ್ರಾಯಪಟ್ಟರು. ಇಂದು ನಾವು ಸಿನಿಮಾವನ್ನು ಅದರ ಆದಾಯದ ಆಧಾರದ ಮೇಲೆ ಮಾತ್ರ ಅಳೆಯುತ್ತಿದ್ದೇವೆ. 100 ಕೋಟಿ, 200 ಕೋಟಿ, 300 ಕೋಟಿ ಗಳಿಸಿತೇ ಎಂಬುದೇ ಮುಖ್ಯವಾಗಿದೆ. ಆದರೆ ಸಿನಿಮಾ ಅಷ್ಟಕ್ಕೆ ಮಾತ್ರ ಸೀಮಿತವಲ್ಲ. ನಾವು ಪುಷ್ಪಕ ವಿಮಾನವನ್ನು ಕೇವಲ ೧೫ ಲಕ್ಷ ರೂಪಾಯಿಗೆ ಮಾಡಿದ್ದರೂ, ಅದು ನಮಗೆ 150 ಕೋಟಿ ಮೌಲ್ಯದ ಸಾಧನೆಯಂತೆ ಅನಿಸುತ್ತೆ”
ಅವರು ಯಶಸ್ವಿ ಚಿತ್ರದ ವ್ಯಾಖ್ಯಾನವನ್ನು ಹೀಗೆಂದರು: “ಯಾವ ಚಿತ್ತ ಯಶಸ್ವಿಯಾಗುತ್ತದೆ ಅಥವಾ ವಿಫಲವಾಗುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಚಿತ್ರ ಮುಗಿದ ನಂತರ ನಾವು ಸಂತೋಷವಾಗಿದ್ದೇವೆಯೇ ಎಂಬುದನ್ನು ಮಾತ್ರ ಹೇಳಬಹುದು. ನಾವು ಸಂತೋಷವಾಗಿಲ್ಲದಿದ್ದರೆ, ಅದನ್ನು ಬಿಡುಗಡೆ ಮಾಡಲು ಸಿದ್ಧರಾಗಿರುತ್ತೇವೆಯೇ ಸರಳ.” 1989ರ ಅಪೂರ್ವ ಸಹೋದರರು ಚಿತ್ರದ ಕುರಿತು ಮಾತನಾಡಿದ ಕಮಲ್ ಹಾಸನ್, ಆ ಚಿತ್ರ ಆರಂಭದಲ್ಲೇ ಕೈಬಿಡುವ ಹಂತಕ್ಕೆ ಬಂದಿತ್ತು ಎಂದು ಹೇಳಿದರು. ಅ ಮೊದಲ 20 ದಿನಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದೇವೆ. ಹಾಗೆ ಮಾಡದಿದ್ದರೆ ಚಿತ್ರ ವಿಫಲವಾಗುತ್ತಿತ್ತು. ಹಣದ ನಷ್ಟವಾದರೂ ನಾವು ಸರಿಯಾದದನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಕುಬ್ಜನ ಪಾತ್ರವನ್ನು ನಾನು ಹೇಗೆ ಮುಂದುವರಿಸುತ್ತೇನೆ ಎಂಬುದು ಸಿಂಗೀತಂ ಅವರಿಗೂ ಮೊದಲ ಕೆಲವು ಶಾರ್ಟ್ಗಳ ನಂತರ ಸ್ಪಷ್ಟವಾಗಿರಲಿಲ್ಲ. ಬಹಳ ಕಷ್ಟ ಮತ್ತು ಆತಂಕಗಳ ಬಳಿಕ ಅದು ಸಾಧ್ಯವಾಯಿತು.” 2005ರ ಮುಂಬೈ ಎಕ್ಸ್ಪ್ರೆಸ್ ಚಿತ್ರಕ್ಕೆ ಬೇಕಾದಷ್ಟು ಮೆಚ್ಚುಗೆ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟ ಕಮಲ್ಹಾಸನ್ರವರು ಅದು ನಮಗೆ ಅತ್ಯಂತ ಆನಂದ ತಂದ ಚಿತ್ರ. ಮುಂಬೈನಲ್ಲಿ ಬಿಸಿಲಿನ ನಡುವೆ, ಅನೇಕ ಅನುಮತಿಗಳಿಲ್ಲದೆ ಚಿತ್ರೀಕರಣ ನಡೆಸಬೇಕಾಯಿತು. ಆದರೂ ಅದನ್ನು ಮಾಡುವಲ್ಲಿ ನಾವು ತುಂಬಾ ಖುಷಿಪಟ್ಟವು. ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ಇದು ೭೨೦ಠಿ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾದ ಮೊದಲ ಡಿಜಿಟಲ್ ಚಿತ್ರವೂ ಆಗಿತ್ತು.” ಕಾರ್ಯಕ್ರಮದ ಕೊನೆಯಲ್ಲಿ ಸಿಂಗೀತಂ ಶ್ರೀನಿವಾಸರಾವ್ ಅವರ ಬಗ್ಗೆ, ಮಾತನಾಡುತ್ತಾ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಕಮಲ್ ಹಾಸನ್ “ಅವರು ಯಾವಾಗಲೂ ಝನ್ ಝಡ್ ಮುಂದೆ ಇಂತಹ ಯುವ ಮನಸ್ಸಿನ ವ್ಯಕ್ತಿಯ ಜೊತೆಗೆ ಕೆಲಸ ಮಾಡಲು ಅವರೊಂದಿಗೆ ಸಮಯ ಕೆಳೆಯಲು ನನಗೆ ಸಂತೋಷವಾಗುತ್ತಿದೆ. ವಯಸ್ಸು ಕೆಲವೊಮ್ಮೆ ತೊಂದರೆ ಕೊಡಬಹುದು, ಆದರೆ ಮನಸ್ಸು ಅದನ್ನು ಮೀರಬಹುದು. ಸಿಂಗೀತಂ ಅವರು ಅದಕ್ಕೆ ಜೀವಂತ ಉದಾಹರಣೆ. ಅವರ ಉತ್ಸಾಹ ಮತ್ತು ಸೃಜನಶೀಲತೆಯನ್ನು ಉಳಿಸಿಕೊಳ್ಳಲು ನಾನು ಅವರ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಲು ಸಿದ್ದನಿದ್ದೇನೆ.”
