ಕೊರಟ್ನಾಡಿನ ಬೆಳಗಾವಿ -ಗೋವಾ-ಮಹಾರಾಷ್ಟ್ರ ಗಡಿಯ ಚೋರ್ಲಾ (Chorla Ghat) ಪ್ರದೇಶದಲ್ಲಿ ₹400 ಕೋಟಿ ರೂ. (₹400 crore) ಮೌಲ್ಯದ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್ಗಳು ಅಪಘಾತದಂತೆ ನಾಪತ್ತೆಯಾಗಿರುವ ಕುರಿತು ತೀವ್ರ ಸುದ್ದಿಯಾಗಿದೆ. ಈ ಪ್ರಕರಣವು 2025 ಅಕ್ಟೋಬರ್ 16ರಂದು ಸಂಭವಿಸಿದೆ ಎಂದು ಕೆಲವು ಮೂಲಗಳು ವರದಿ ಮಾಡಿವೆ, ಆದರೆ ಪ್ರಕರಣವು ಇಲ್ಲಿಯವರೆಗೂ ಬೆಳಕಿಗೆ ಬಾರದೆ ಇರುವುದು 5 ರಾಜ್ಯಗಳ ಸರ್ಕಾರಗಳ ಭದ್ರತಾ ವೈಫಲ್ಯವೆಂದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಪೊಲೀಸ್ ಮೂಲಗಳ ಪ್ರಕಾರ, ಹಣಕಾಸು ಸಂಸ್ಥೆ/ವಾಣಿಜ್ಯ ಕೇಂದ್ರವನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು, ಹಲವು ತಿಂಗಳುಗಳ ಪೂರ್ವಯೋಜನೆಯೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಭದ್ರತಾ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಗುರುತಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪಿಸಿಕೊಂಡು, ನಿಗದಿತ ಸಮಯದಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಅಪಾರ ಪ್ರಮಾಣದ ಹಣ ಸ್ಥಳಾಂತರಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಕರಣದ ಗಂಭೀರತೆಯನ್ನು ಮನಗಂಡು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಮೊಬೈಲ್ ಟವರ್ ಡೇಟಾ ವಿಶ್ಲೇಷಣೆ, ಬ್ಯಾಂಕ್ ಹಾಗೂ ಡಿಜಿಟಲ್ ವ್ಯವಹಾರಗಳ ಶೋಧನೆ ಕಾರ್ಯಾಚರಣೆ ತೀವ್ರಗೊಂಡಿದೆ. ದೇಶದ ವಿವಿಧ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗಿದೆ.
ಈ ದರೋಡೆ ಪ್ರಕರಣದಿಂದ ಭದ್ರತಾ ವ್ಯವಸ್ಥೆಗಳ ಮೇಲಿನ ಪ್ರಶ್ನೆಗಳು ಮತ್ತೆ ಎದ್ದಿವೆ. ಹಣಕಾಸು ಸಂಸ್ಥೆಗಳು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಭದ್ರತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಜೊತೆಗೆ, ಒಳಸೂತ್ರಗಳ ಪಾತ್ರವಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರೆದಿದೆ.
ಸರ್ಕಾರವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ₹400 ಕೋಟಿ ದರೋಡೆ ಪ್ರಕರಣದ ಸತ್ಯಾಂಶಗಳು ಹೊರಬರುವಂತೆ ರಾಜ್ಯದ ಜನತೆ ಕಾದು ನೋಡುತ್ತಿದೆ.
ಈ ಮಧ್ಯೆ ಇಂತಹದ್ದೇ ಅಕ್ರಮ ಆನ್ಲೈನ್ನಲ್ಲಿ 9 ತಿಂಗಳ ಅವಧಿಯಲ್ಲಿ ₹800 ಕೋಟಿ ಲಾಭ ಗಳಿಸಿರುವ ಆ್ಯಪ್ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಈ ಬಗ್ಗೆ ಭಾರತ ಸರ್ಕಾರದ (ED) ಸಂಸ್ಥೆ ತನಿಖೆ ಮಾಡುತ್ತಿದೆ. ಭಾರತದ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್ (ED) ಸಂಸ್ಥೆ ಅಕ್ರಮ ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ OctaFX ವಿರುದ್ಧ ಅನುಮಾನ ವ್ಯಕ್ತವಾಗಿದ್ದು, ಈ ಸಂಸ್ಥೆ ಭಾರತದಿಂದ ಕೇವಲ ಒಂಬತ್ತು ತಿಂಗಳಲ್ಲಿ ₹800 ಕೋಟಿಗೂ ಹೆಚ್ಚು ಹಣ ವಿದೇಶಗಳಿಗೆ ವರ್ಗಾಯಿಸಿರುವುದು ಬಹಿರಂಗವಾಗಿದೆ. ಕಂಪನಿಯ ಪ್ರಮೋಟರ್ಗಳು ರಷ್ಯಾದಲ್ಲಿ, ಬ್ಯಾಂಕ್ ಆಪರೇಷನ್ಗಳನ್ನು ದುಬೈನಲ್ಲಿ, ಟೆಕ್ನಿಕಲ್ ಸಪೋರ್ಟ್ ಜಾರ್ಜಿಯಾದಲ್ಲಿ, ಹಾಗೂ ಸರ್ವರ್ಗಳು ಸ್ಪೇನ್ನ ಬಾರ್ಸಿಲೋನಾದಲ್ಲಿ ಇವೆ. ಎಂದು ತನಿಖೆಯಿಂದ ಕಂಡುಬಂದಿರುತ್ತದೆ. ಸೈಪ್ರಸ್ನಲ್ಲಿ ನೋಂದಾಯಿತ ಈ ಕಂಪನಿ ಭಾರತದಲ್ಲಿ ಹೂಡಿಕೆದಾರರ ಹಣವನ್ನು ನಕಲಿ ಸೇವೆಗಳ ಮೂಲಕ ಆಮದು, ಕ್ರಿಪ್ಟೋಕರೆನ್ಸಿ, ಹಾಗೂ ಹವಾಲಾ ಮಾರ್ಗದ ಮೂಲಕ ವಿದೇಶಗಳಿಗೆ ಕಳುಹಿಸಿರುವುದಾಗಿ ಆರೋಪಿಸಲಾಗಿದೆ. ಇಡಿ ಅಧಿಕಾರಿಗಳು ಒಟ್ಟು ₹172 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ-ಅದರಲ್ಲಿ ಯಾಚ್ಟ್, ಸ್ಪೇನ್ನಲ್ಲಿನ ವಿಲ್ಲಾ, ₹36 ಕೋಟಿ ಬ್ಯಾಂಕ್ ಖಾತೆಗಳಲ್ಲಿ, 39,000 USDT(ಕ್ರಿಪ್ಟೋ) ಹಾಗೂ USDT ಕೋಟಿ ಮೌಲ್ಯದ ಡಿಮಾಟ್ ಹೂಡಿಕೆಗಳು ಸೇರಿವೆ.
ಇದೆ ರೀತಿಯ ಅಕ್ರಮ ಪ್ಲಾಟ್ಫಾರ್ಮ್ಗಳಾದ Power Bank, TM Traders, Vivan Li, Zara FX ಇವುಗಳ ಮೇಲೂ ತನಿಖೆ ನಡೆಯುತ್ತಿದೆ.Angel One ಹೆಸರಿನಲ್ಲಿ ನಕಲಿ ವೆಬ್ಸೈಟ್ ರಚಿಸಿ ಹೂಡಿಕೆದಾರರನ್ನು ಮೋಸಗೊಳಿಸಿದವರನ್ನೂ ಪತ್ತೆಹಚ್ಚಲಾಗಿದೆ. ಇಡಿ ವರದಿ ಪ್ರಕಾರ, 2024ರಲ್ಲಿ ಭಾರತದಲ್ಲಿ 36.4 ಲಕ್ಷ ಆರ್ಥಿಕ ವಂಚನೆ ಪ್ರಕರಣಗಳು ದಾಖಲಾಗಿದ್ದು, ಹೂಡಿಕೆದಾರರು ಒಟ್ಟಾರೆ ₹22,800 ಕೋಟಿ ನಷ್ಟವನ್ನು ಅನುಭವಿಸಿದ್ದಾರೆ-ಇದು 2023ರಿಗಿಂತ 206% ಹೆಚ್ಚಳವಾಗಿದೆ. ಆದ್ದರಿಂದ ಸಾಮಾನ್ಯ ಜನರು ಅದರಲ್ಲೂ ಸಾಮಾಜಿಕ ಜಾಲತಾಣ ಉಪಯೋಗಿಸುವ ಯುವಜನರು ಎಚ್ಚರಿಕೆಯಿಂದ ತಮ್ಮ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಭದ್ರತಾ ಸಂಸ್ಥೆಗಳು, ಇಡಿ ಸಂಸ್ಥೆಯು ಮತ್ತು ಪೊಲೀಸ್ ಕೇಂದ್ರಗಳು ಹಲವಾರು ಬಾರಿ ಮಾಧ್ಯಮದ ಮೂಲಕ ಎಚ್ಚರಿಕೆ ಕೊಡುತ್ತಾ ರಕ್ಷಣಾತ್ಮಕವಾಗಿ ಜಾಲತಾಣಗಳಲ್ಲಿ ವ್ಯವಹರಿಸಲು ಸೂಚಿಸಿದ್ದಾರೆ.
