ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟ್ವೆಂಟಿ–20 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಹುಟ್ಟುಹಾಕುತ್ತದೆ. ಸೀಮಿತ ಓವರ್ಗಳ ಈ ಮಾದರಿಯಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟ, ತಂತ್ರಜ್ಞಾನಿ ಬೌಲಿಂಗ್ ಮತ್ತು ಕ್ಷಣಮಾತ್ರದಲ್ಲಿ ತಿರುವು ಪಡೆಯುವ ಪಂದ್ಯಗಳೆಂದು ಗುರುತಿಸಿಕೊಂಡಿವೆ.
ಟ್ವೆಂಟಿ–20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತಕ್ಕೆ ಸ್ವಲ್ಪ ಮುನ್ನಡೆ ಇದ್ದರೂ, ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಅನೇಕ ಬಾರಿ ಅಚ್ಚರಿ ಫಲಿತಾಂಶಗಳನ್ನು ನೀಡಿದೆ. ವಿಶೇಷವಾಗಿ ನಾಕ್ಔಟ್ ಪಂದ್ಯಗಳು ಮತ್ತು ನಿರ್ಣಾಯಕ ಸರಣಿಗಳಲ್ಲಿ ಕಿವೀಸ್ ತಂಡ ಭಾರತದ ಪಾಲಿಗೆ ತೀಕ್ಷ್ಣ ಪ್ರತಿರೋಧ ನೀಡುತ್ತಾ ಪಂದ್ಯದ ಗತಿಯನ್ನೆ ಬುಡಮೇಲು ಮಾಡಿದ ಉದಾಹರಣೆಗಳಿವೆ.
ಭಾರತೀಯ ತಂಡದ ಬಲಿಷ್ಠ ಬ್ಯಾಟಿಂಗ್ ಕ್ರಮ, ಯುವ ಆಟಗಾರರ ದಿಟ್ಟ ಪ್ರದರ್ಶನ ಮತ್ತು ಸ್ಪಿನ್ ಬೌಲರ್ಗಳ ಹಿಡಿತ ಈ ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಶಿಸ್ತುಬದ್ಧ ಬೌಲಿಂಗ್, ವೇಗದ ಫೀಲ್ಡಿಂಗ್ ಹಾಗೂ ಸಮತೋಲನಗೊಂಡ ತಂಡದ ಆಟದಿಂದ ಹೆಸರುವಾಸಿಯಾಗಿದೆ. ಭಾರತ ತಂಡದಲ್ಲಿ ಅಭಿಶೇಕ್ ಶರ್ಮ ಇಸಾನ್ ಕಿಸನ್, ಶಿವಂದೂಬೆಯಂತಹ ಯುವ ಪ್ರತಿಭಾವಂತರಿದ್ದರೆ ಫಿಲಿಪ್ಸ್ ಸಾಟ್ನರ್, ಚಾಪನ್ ಮತ್ತು ಡ್ರೆೈ ಮಿಚ್ಚಲ್ರಂತಹ ಪ್ರತಿಭಾವಂತ ಕ್ರಿಕೆಟಗರಿದ್ದಾರೆ.
ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತವು ಈಗಾಗಲೇ ಮೂರು ಪಂದ್ಯಗಳಲ್ಲಿ (ನಾಗಪುರ್, ರಾಯ್ಪುರ, ಗೌಹಾಟಿ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಸರಣಿ ಕೈವಶ ಮಾಡಿಕೊಂಡಿದೆ.
ಒಟ್ಟಾರೆ, ಭಾರತ–ನ್ಯೂಜಿಲೆಂಡ್ ಟ್ವೆಂಟಿ–20 ಪಂದ್ಯಗಳು ಕೇವಲ ಗೆಲುವು–ಸೋಲುಗಳಿಗಷ್ಟೇ ಸೀಮಿತವಾಗದೆ, ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ, ಉತ್ಸಾಹ ಮತ್ತು ರೋಮಾಂಚನವನ್ನು ನೀಡುವ ಸ್ಪರ್ಧೆಯಾಗಿ ಮುಂದುವರೆಯುತ್ತಿದೆ.
