ಬಳ್ಳಾರಿಯಲ್ಲಿ ಜನವರಿ 1ರ ರಾತ್ರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಬ್ಯಾನರ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದ ಘರ್ಷಣೆ ಸಂಭವಿಸಿತು. ಭರತ್ ರೆಡ್ಡಿ ಬಂಧುಗಳ ಬೆಂಬಲಿಗರು ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್ಗಳನ್ನು ಜನಾರ್ದನ ರೆಡ್ಡಿಯ ಮನೆಯ ಹತ್ತಿರದ ರಸ್ತೆಯ ಬದಿಯಲ್ಲಿ ಅಳವಡಿಸಲು ಸಜ್ಜಾಗಿದ್ದು ಇದರಿಂದ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ತೀವ್ರವಾಗಿ ಭೌತಿಕ ಘರ್ಷಣೆಗೆ ಬದಲಾಯಿತೆಂಬ ಗಾಳಿ ಸುದ್ಧಿಯಿಂದಾಗಿ ಹೆಚ್ಚು ಜನರು ಸೇರುವ ಮೂಲಕ ಗಲಭೆ ತೀವ್ರವಾಯಿತು.
ಈ ಘರ್ಷಣೆಯಲ್ಲಿ ಎಲ್ಲಿಂದಲೋ ಹಾರಿ ಬಂದ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು (ರಾಜಶೇಖರ್ ರೆಡ್ಡಿ) ಗುಂಡಿನ ಹೊಡೆತಕ್ಕೆ ಸಿಕ್ಕ ಗಾಯದಿಂದ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ವೇಳೆಯಲ್ಲಿ ಘಟನೆಯಲ್ಲಿದ್ದ ಎಲ್ಲಾ ಶಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಹಾಯಕ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ. ಯಾವ ಶಸ್ತ್ರದಿಂದ ಗುಂಡೆ ಹಾರಿತು ಎಂದು ತಜ್ಞರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಈ ಗಲಭೆ ಕಾರಣಕ್ಕೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ ಎರಡು ಪಕ್ಷಗಳ ೧೧ ಮಂದಿ ವಿರುದ್ಧ ದೂರುಗಳು ದಾಖಲಾಗಿದ್ದು ತನಿಖೆ ಮುಂದುವರೆಯುತ್ತಿದೆ.
ರಾಜಕೀಯ ಮನಸ್ತಾಪ, ವೈಮನಸ್ಸುಗಳಿಗೆ ಕಿಡಿ ಹಚ್ಚುವ ಈ ಪ್ರಕರಣದ ಘಟನೆಯ ನಂತರ ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳಿಗೆ ವರ್ಗಾವಣಾ/ಅಮಾನತ್ತು ಕ್ರಮವೂ ಕೈಗೊಳ್ಳಲಾಗಿದೆ ಮತ್ತು ಮುಂದಿನ ತನಿಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ.
ಇದೇ ವೇಳೆ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಬಿಜೆಪಿಯು ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಬಳ್ಳಾರಿಯಲ್ಲಿ ರಾಜಕೀಯ ಒತ್ತಡ ಇನ್ನೂ ಮುಂದುವರಿದಿದೆ. ಈ ಮಧ್ಯೆ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಅವರಿಗೆ ಸೇರಿದ ವಸತಿ ಬಡಾವಣೆಯ ಮಾಡಲ್ ಹೌಸ್ ಒಂದನ್ನು ಕಿಡಿಗೇಡಿಗಳು ಸುಟ್ಟ ಪ್ರಯತ್ನದಿಂದಾಗಿ ಪರಿಸ್ಥಿತಿ ತಣ್ಣಗಾಗದೆ ಸ್ವಲ್ಪ ಬಿಗಾಡಿಯಿಸಿದ್ದು, ವಾಸ್ತವವಾಗಿ ಬಳ್ಳಾರಿಯು ರಾಜಕೀಯ ವೈಮನಸ್ಸುಗಳನ್ನು ಮೀರಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಪ್ರಕರಣದ ರ್ಯಾವಶನೆ ಎಲ್ಲಿವರೆಗೂ ಕೊಂಡೊಯಿತ್ತೆಂಬುದು ಕಾದು ನೋಡಬೇಕಿದೆ.
