ಹಾಲಿವುಡ್ನ ಚಿನ್ನದ ಯುಗವನ್ನು ಸ್ಮರಿಸಿದಾಗ, ನಟಿ ಅವಾ ಗಾರ್ಡ್ನರ್ ಎಂಬ ಹೆಸರು ಅನಿವಾರ್ಯವಾಗಿ ನೆನಪಾಗುತ್ತದೆ. 1922ರಲ್ಲಿ ಅಮೆರಿಕದ ಉತ್ತರ ಕ್ಯಾರೊಲಿನಾದ ಬಡ ರೈತ ಕುಟುಂಬದಲ್ಲಿ ಜನಿಸಿದ ಅವಾ, ಸೌಂದರ್ಯ ಮತ್ತು ಧೈರ್ಯದ ಸಂಕೇತವಾಗಿದ್ದಾಳೆ, ಬಾಲ್ಕದಲ್ಲಿ ತಂದೆಯನ್ನು ಕಳೆದುಕೊಂಡು, ಜೀವನದ ಹೋರಾಟದ ಪಾಠಗಳನ್ನು ಬೇಗನೆ ಕಲಿತ ಅವಾ, ಮಾವನ ಸ್ಟುಡಿಯೋದಲ್ಲಿ ತೆಗೆಯಲಾದ ಒಂದು ಫೋಟೋ ಮೂಲಕ ಚಿತ್ರರಂಗ ಪ್ರವೇಶಿಸಿದಳು. MGM ಕಂಪನಿಯ ಒಪ್ಪಂದದ ಮೂಲಕ ೧೯೪೧ರಲ್ಲಿ ಹಾಲಿವುಡ್ಗೆ ಕಾಲಿಟ್ಟ ಈ ಯುವತಿಯ ಉಚ್ಚಾರಣೆ, ಧೈರ್ಯ ಮತ್ತು ದೃಢನಿಶ್ಚಯವೇ ಮುಂದಿನ ಖ್ಯಾತಿಯ ಆಧಾರವಾಯಿತು.
ಅವಳ ಜೀವನ ಪ್ರೇಮ, ಕಲಹ ಮತ್ತು ಹೃದಯವಿದಾಯಕ ಕಥೆಗಳಿಂದ ಕೂಡಿತ್ತು ನಟಿ ಮಿಕ್ಕಿ, ರೂನಿ, ಸಂಗೀತಗಾರ ಆರ್ಟಿಶಾ, ಮತ್ತು ಗಾಯಕ ಫ್ರಾಂಕ್ ಸಿನಾಟಾ-ಈ ಮೂವರು ಪತಿಗಳ ಜೊತೆಗಿನ ಅವಳ ಸಂಬಂಧಗಳು ಹಾಲಿವುಡ್ ಚಿತ್ರಕಥೆಗಳಂತೆ ನಾಟಕೀಯತೆಯಿಂದ ತುಂಬಿದ್ದವು. ವಿಶೇಷವಾಗಿ ಸಿನಾಟ್ನಾ ಜೊತೆಗಿನ ವಿವಾಹವು ಉತ್ಸಾಹ, ಪ್ರೀತಿ ಮತ್ತು ವ್ಯಥೆಯ ಮಿಶ್ರಣವಾಗಿತ್ತು.

The Killers (1946) ಚಿತ್ರದ ಮೂಲಕ ಖ್ಯಾತಿಗೆ ಏರಿದ ಅವಾ, ನಂತರ Show Boat, Mogambo, The Barefoot Contessa ಚಿತ್ರಗಳಲ್ಲಿ ಅದ್ಭುತ ಅಭಿನಯ ತೋರಿದಳು. Moganb ಚಿತ್ರಕ್ಕಾಗಿ ಅವಳಿಗೆ ಆಸ್ಕರ್ ನಾಮನಿರ್ದೇಶನ ದೊರೆಯಿತು. ಪತ್ರಿಕೆಗಳು ಅವಳನ್ನು ‘ಫಮ್ ಫಟೇಲ್ ಎಂದು ಕರೆಯುತ್ತಿದ್ದರೂ, ಅವಳು ಕೇವಲ ಸೌಂದರ್ಯದ ಪ್ರತಿರೂಪವಲ್ಲ- ಧೈರ್ಯ ಮತ್ತು ಸ್ವಾತಂತ್ರದ ಮುಖವನ್ನೂ ಪ್ರತಿನಿಧಿಸಿದಳು.
ಆದರೆ ರಂಗುರಂಗಿನ ಚಮತ್ಕಾರದ ಹಿಂದಿನ ನಿಜವಾದ ಅವಾ ನಟ ಜೀವನವು ಏಕಾಂತ, ಮದ್ಯಪಾನ ಮತ್ತು ಆರೋಗ್ಯ ಹೋರಾಟಗಳಿಂದ ಕೂಡಿತ್ತು. 1985ರಲ್ಲಿ ಸ್ಟ್ರೋಕ್ ಬಂದು, 1990ರಲ್ಲಿ ಲಂಡನ್ನಲ್ಲಿ ನ್ಯುಮೋನಿಯಾದಿಂದ ನಿಧನರಾದಳು. ‘ನಾನು ಖ್ಯಾತಿಗಿಂತ ಹೆಚ್ಚು, ಪ್ರೀತಿಯ ಜೀವನ ಮತ್ತು ಶಿಕ್ಷಣವನ್ನು ಬಯಸಬೇಕಿತ್ತು’ ಎಂಬ ಅವಳ ಅಂತಿಮ ಮಾತು, ಆಕೆಯ ಸಾಕ್ಷಾತ್ಕಾರದ ಚಿತ್ರವಾಗಿದೆ.
ಇಂದು ಉತ್ತರ ಕ್ಯಾರೊಲಿನಾದಲ್ಲಿ ಸ್ಥಾಪಿಸಲಾದ ಅವಾ ಗಾರ್ಡ್ನರ್ ಮ್ಯೂಸಿಯಂ, ಆಕೆಯ ಶಾಶ್ವತ ಸ್ಮಾರಕವಾಗಿದೆ-ಸೌಂದರ್ಯ, ಶಕ್ತಿ ಮತ್ತು ನಿಜವಾದ ಹೆಣ್ಣಿನ ಹೋರಾಟದ ಸಂಕೇತವಾಗಿದೆ.
